ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ: ಪೈಪ್‌ನಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ನಕಲಿ ಚಿನ್ನದ ಬಿಸ್ಕೆಟ್‌ ವಶ

|
Google Oneindia Kannada News

ಬೆಂಗಳೂರು, ಆಗಸ್ಟ್ 07: ಐಎಂಎ ಹಗರಣದ ತನಿಖೆ ಚುರುಕಾಗುತ್ತಾ ಸಾಗಿದ್ದು, ಇಂದು ಎಸ್‌ಐಟಿಯು ಮನ್ಸೂರ್ ಖಾನ್‌ಗೆ ಸೇರಿ ಭಾರಿ ಮೊತ್ತದ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದೆ. ಆದರೆ ಇವು ನಕಲಿ ಚಿನ್ನದ ಬಿಸ್ಕತ್ತುಗಳಾಗಿವೆ.

ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಐಎಂಎ ಮಾಲೀಕ ಮನ್ಸೂರ್ ಖಾನ್‌ಗೆ ಮಾರಿದ್ದ ಬಹುಮಹಡಿ ಕಟ್ಟಡದಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ನಕಲಿ ಚಿನ್ನದ ಬಿಸ್ಕೆಟ್ಟುಗಳನ್ನು ಇಂದು ಎಸ್‌ಐಟಿ ವಶಪಡಿಸಿಕೊಂಡಿದೆ.

ಐಎಂಎ ಹಗರಣ : ಎಸ್‌ಐಟಿ ವಿಚಾರಣೆಗೆ ರೋಷನ್ ಬೇಗ್ ಗೈರು ಐಎಂಎ ಹಗರಣ : ಎಸ್‌ಐಟಿ ವಿಚಾರಣೆಗೆ ರೋಷನ್ ಬೇಗ್ ಗೈರು

ರಿಚ್‌ಮಂಡ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಮೇಲಿದ್ದ ಈಜುಕೊಳಕ್ಕೆ ಸಂಪರ್ಕ ಕಲ್ಪಿಸಿದ್ದ ಪೈಪ್‌ನಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 300 ಕೆ.ಜಿ ತೂಕದ ನಕಲಿ ಚಿನ್ನದ ಬಿಸ್ಕೆಟ್ಟುಗಳನ್ನು ಎಸ್‌ಐಟಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

IMA scam: 300 kg fake gold biscuits siezed by SIT

5880 ನಕಲಿ ಚಿನ್ನದ ಬಿಸ್ಕೆಟ್ಟುಗಳನ್ನು ಎಸ್‌ಐಟಿ ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ಕೋಟ್ಯಂತರ ರೂಪಾಯಿಗಳೆಂದು ಹೇಳಲಾಗುತ್ತಿದೆ. ಮೌಲ್ಯದ ಬಗ್ಗೆ ನಿಖರ ಮಾಹಿತಿ ಇನ್ನಷ್ಟು ಹೊರಬೀಳಬೇಕಿದೆ.

ಐಎಂಎ ವಂಚನೆ: ಐಪಿಎಸ್ ಅಧಿಕಾರಿಯ ವಿಚಾರಣೆ ನಡೆಸಿದ ಎಸ್‌ಐಟಿಐಎಂಎ ವಂಚನೆ: ಐಪಿಎಸ್ ಅಧಿಕಾರಿಯ ವಿಚಾರಣೆ ನಡೆಸಿದ ಎಸ್‌ಐಟಿ

'ದೊಡ್ಡ ಹೂಡಿಕೆದಾರ ವಿಶ್ವಾಸಗಳಿಸಲು ಈ ಚಿನ್ನದ ಬಿಸ್ಕತ್ತುಗಳನ್ನು ಅವರಿಗೆ ತೋರಿಸುತ್ತಿದ್ದೆ', ಎಂದು ಮನ್ಸೂರ್ ಖಾನ್‌ ವಿಚಾರಣೆ ವೇಳೆ ತಿಳಿಸಿದ್ದ. ಹಾಗಾಗಿ ಇಂದು ಎಸ್‌ಐಟಿ ಸಿಬ್ಬಂದಿ ದಾಳಿ ನಡೆಸಿ ನಕಲಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಐಎಂಎ ಪ್ರಕರಣ: ಎಸ್‌ಐಟಿಯಿಂದ 3 ಗಂಟೆ ಜಮೀರ್‌ ವಿಚಾರಣೆಐಎಂಎ ಪ್ರಕರಣ: ಎಸ್‌ಐಟಿಯಿಂದ 3 ಗಂಟೆ ಜಮೀರ್‌ ವಿಚಾರಣೆ

ಮನ್ಸೂರ್ ಖಾನ್‌ಗೆ ಸೇರಿದ 23 ಆಸ್ತಿಗಳನ್ನು ಎಸ್‌ಐಟಿ ಈವರೆಗೆ ವಶಪಡಿಸಿಕೊಂಡಿದೆ. ಮನ್ಸೂರ್ ಖಾನ್ ಪ್ರಸ್ತುತ ಎಸ್‌ಐಟಿ ವಶದಲ್ಲಿದ್ದು, ಎಸ್‌ಐಟಿಯು ವಿಚಾರಣೆ ನಡೆಸುತ್ತಿದೆ. ಇಡಿ ಸಹ ಐಎಂಎ ಹಗರಣ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ.

English summary
SIT team today seized 300 kg fake gold biscuits in a multistore building of SIT owner Mansoor Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X