ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ವಂಚನೆ ರುವಾರಿ ಮನ್ಸೂರ್ ಖಾನ್‌ ಶೀಘ್ರ ಭಾರತಕ್ಕೆ

|
Google Oneindia Kannada News

ಬೆಂಗಳೂರು, ಜೂನ್ 29: ಬಹುಕೋಟಿ ಐಎಂಎ ವಂಚನೆ ಪ್ರಕರಣದ ರುವಾರಿ ಮನ್ಸೂರ್‌ ಖಾನ್‌ನನ್ನು ಭಾರತಕ್ಕೆ ಕರೆತರಲು ಎಸ್‌ಐಟಿ ಮತ್ತು ಇಡಿ ಸತತ ಪ್ರಶ್ರಮ ಪಡುತ್ತಿದ್ದು, ಕೆಲವೇ ದಿನಗಳಲ್ಲಿ ಮನ್ಸೂರ್ ಖಾನ್ ಭಾರತಕ್ಕೆ ಬರುವ ಸಂಭವ ಇದೆ.

ಜೂನ್ 16 ರಂದು ಭಾರತ ಬಿಟ್ಟು ಪಲಾಯನ ಮಾಡಿದ ಮನ್ಸೂರ್ ಖಾನ್ ದುಬೈ ಬಳಿಯ ಯಾವುದೋ ಸ್ವತಂತ್ರ್ಯ ಪ್ರದೇಶದಲ್ಲಿ ಅಡಗಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಐಎಂಎ ವಂಚನೆ: ಮನ್ಸೂರ್‌ಗೆ ಸೇರಿದ 206 ಕೋಟಿ ಆಸ್ತಿ ವಶ ಐಎಂಎ ವಂಚನೆ: ಮನ್ಸೂರ್‌ಗೆ ಸೇರಿದ 206 ಕೋಟಿ ಆಸ್ತಿ ವಶ

ಈಗಾಗಲೇ ಮನ್ಸೂರ್‌ ಮೇಲೆ ರೆಡ್ ಕಾರ್ನರ್ ನೊಟೀಸ್ ಹೊರಡಿಸಲಾಗಿದ್ದು, ಆತನ ಪತ್ತೆಗೆ ಇಂಟರ್‌ಪೋಲ್ ನೆರವು ಸಹ ಕೇಳಲಾಗಿದೆ.

IMA owner Mansoor Khan soon to come to India

ಬೆಂಗಳೂರಿನ ಪೊಲೀಸ್ ಅಧಿಕಾರಿಗಳು ಸಹ ಮನ್ಸೂರ್ ಖಾನ್ ಜಾಡು ಹಿಡಿದು ದುಬೈ ವಿಮಾನ ಹತ್ತಲು ತಯಾರಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಆತನನ್ನು ಬೆಂಗಳೂರಿಗೆ ಕರೆತರುವ ವಿಶ್ವಾಸದಲ್ಲಿದ್ದಾರೆ.

ಐಎಂಎ ವಂಚನೆ ಪ್ರಕರಣ: ಜಮೀರ್‌ ಅಹ್ಮದ್‌ಗೆ ಮನೆಗೆ ಇಡಿ ಅಧಿಕಾರಿಗಳುಐಎಂಎ ವಂಚನೆ ಪ್ರಕರಣ: ಜಮೀರ್‌ ಅಹ್ಮದ್‌ಗೆ ಮನೆಗೆ ಇಡಿ ಅಧಿಕಾರಿಗಳು

ಮನ್ಸೂರ್ ಖಾನ್ ಐಎಂಎ ಸಂಸ್ಥೆಯ ಹೆಸರಿನಲ್ಲಿ ಸುಮಾರು 4000 ಕೋಟಿ ರೂಪಾಯಿ ಹಣವನ್ನು ಬಂಡವಾಳ ಹೂಡಿಕೆದಾರರಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಆತನ 209 ಕೋಟಿ ಆಸ್ತಿಯನ್ನು ಈ ವರೆಗೆ ಜಪ್ತಿ ಮಾಡಲಾಗಿದೆ.

English summary
Bengaluru police and ED officials trying hard to bring back IMA fraud case main accuse Mansoor Khan to India soon. He is hiding some where in Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X