ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಪತ್ನಿ ಮತ್ತು ಪುತ್ರ ವಿಚಾರಣೆ

|
Google Oneindia Kannada News

ಬೆಂಗಳೂರು, ನವೆಂಬರ್,23: ಐಎಂಎ ಬಹುಕೋಟಿ ವಂಚನೆ ಕಂಪನಿಯಿಂದ ಅಕ್ರಮ ಹಣ ಪಡೆದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ಕಚೇರಿ ಹಾಗೂ ಪುತ್ರ ರುಮಾನ್ ಅವರ ಕಚೇರಿ ಮೇಲೂ ದಾಳಿ ನಡೆಸಿ ಸಿಬಿಐ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೇಗ್ ಮನೆ ಮೇಲೆ ದಾಳಿ ನಡೆಸಿದಾಗ ಅವರ ಪುತ್ರ ರುಮಾನ್ ಹಾಗೂ ಅವರ ಪತ್ನಿಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ತದನಂತರ ರೋಷನ್ ಬೇಗ್ ಅವರ ಕೊಠಡಿ ಪರಿಶೀಲಿಸಿದ್ದಾರೆ. ಐಎಂಎ ನಿಂದ ಪಡೆದಿರುವ ಉಡುಗೊರೆ ಕುರಿತು ಬೇಗ್ ಪತ್ನಿ ಹಾಗೂ ಪುತ್ರ ರುಮಾನ್ ನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಧಿಕಾರಿಗಳ ಒಂದು ತಂಡ ಮನೆ ಶೋಧ ಕಾರ್ಯ ಮುಂದವರೆಸಿದೆ. ಮತ್ತೊಂದು ತಂಡ ವಿಚಾರಣೆ ನಡೆಸುತ್ತಿದೆ. ರೋಷನ್ ಬೇಗ್ ಅವರ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿದೆ.

ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ

ಬೇಗ್ ಬಂಧನಕ್ಕೆ ಖಾನ್ ಕಾರಣ: ಮಾಜಿ ಸಚಿವ ರೋಷನ್ ಬೇಗ್ ಐಎಂಎನಿಂದ ಕೋಟ್ಯಂತರ ರೂಪಾಯಿ ಪಡೆದಿರುವ ಬಗ್ಗೆ ಮನ್ಸೂರ್‌ ಖಾನ್ ಸಿಬಿಐ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಮನ್ಸೂರ್ ಹೇಳಿಕೆಗೆ ಸಂಬಂಧಿಸಿದ ಕೆಲವು ದಾಖಲೆಗಳು ಸಿಬಿಐ ಕೈ ಸೇರಿತ್ತು. ರೋಷನ್ ಬೇಗ್ ಅವರಿಗೆ 400 ಕೋಟಿ ಮೊತ್ತದ ಹಣ, ಆಭರಣ, ಕಾರು ಉಡುಗೊರೆ ಕೊಟ್ಟಿರುವ ಬಗ್ಗೆ ಮನ್ಸೂರ್ ವಿಡಿಯೋ ಮಾಡಿ ಆರೋಪಿಸಿದ್ದ. ಈ ಕುರಿತ ಅಡಿಯೋ ಕೂಡ ಬಿಡುಗಡೆ ಮಾಡಿದ್ದ. ವಿಡಿಯೋ ಮತ್ತು ಅಡಿಯೋ ಪರಿಶೀಲಿಸಿದ್ದ ಸಿಬಿಐ ಮನ್ಸೂರ್ ಖಾನ್ ಅವರನ್ನುವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿತ್ತು. ಹೇಳಿಕೆ ಆಧರಿಸಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದಾಗ ಕೆಲವು ದಾಖಲೆಗಳು ಲಭ್ಯವಾಗಿದ್ದವು.

Ima Multi Crore Fraud Case: Cbi Questioning Roshan Baig Wife And Son

ಜೈಲಿನಲ್ಲಿದ್ದ ಮನ್ಸೂರ್ ಖಾನ್ ನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ನಡೆಸಿದ್ದರು. ಬಳಿಕ ರೋಷನ್ ಬೇಗ್ ವ್ಯವಹಾರದ ಬಗ್ಗೆ ಸಿಬಿಐ ಅಧಿಕಾರಿಗಳು ಕಣ್ಣಿಟ್ಟಿದ್ದರು. ರೋಷನ್ ಬೇಗ್ ಅವರಿಗೆ ಹಣ ಹಾಗೂ ಉಡುಗೊರೆ ಕೊಟ್ಟಿರುವ ಬಗ್ಗೆ ಕೂಡ ಖಾನ್ ಬಾಯಿಬಿಟ್ಟಿದ್ದರು.

English summary
CBI officials have also seized some of the documents of former minister Roshan Baig's office and son Ruman's office, which have been allegedly receiving money from the IMA multi-crore fraud company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X