ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಮೋಸ: ಮೋದಿಗೆ ಪತ್ರ ಬರೆದ ಗ್ರಾಹಕರು, ಹಣಕಾಸು ಸಚಿವರಿಗೂ ಮನವಿ

|
Google Oneindia Kannada News

ನವದೆಹಲಿ, ಜೂನ್ 20: ಐಎಂಎ ಸಂಸ್ಥೆಯಿಂದ ವಂಚನೆಗೆ ಒಳಗಾಗಿರುವ ಗ್ರಾಹಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಹಣವನ್ನು ವಾಪಸ್‌ ಕೊಡಿಸುವಂತೆ ಗೋಗರೆದಿದ್ದಾರೆ.

ಲಕ್ಷಾಂತರ ಜನರ ಕೋಟ್ಯಂತರ ಹಣವನ್ನು ಐಎಂಎ ಕೊಳ್ಳೆ ಹೊಡೆದಿದ್ದು, ಪ್ರಧಾನಿ ಅವರು ಮಧ್ಯ ಪ್ರವೇಶಿಸಿ ಪ್ರಕರಣವನ್ನು ಸಿಬಿಐಗೆ ವಹಿಸಿ, ಕಳೆದುಕೊಂಡಿರುವ ಹಣವನ್ನು ವಾಪಸ್ ಕೊಡಿಸಬೇಕೆಂದು ಪತ್ರ ಬರೆಯಲಾಗಿದೆ.

ಐಎಂಎ ಮೇಲೆ ಮುಂದುವರೆದ ಎಸ್‌ಐಟಿ ದಾಳಿ: ಭಾರಿ ಪ್ರಮಾಣದ ಚಿನ್ನ ವಶಐಎಂಎ ಮೇಲೆ ಮುಂದುವರೆದ ಎಸ್‌ಐಟಿ ದಾಳಿ: ಭಾರಿ ಪ್ರಮಾಣದ ಚಿನ್ನ ವಶ

ಬೆಂಗಳೂರಿನ ಹೂಡಿಕೆದಾರರು ಕೆಲವು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರಕರಣದ ಮಾಹಿತಿ ನೀಡಿ, ಜನರು ಕಷ್ಟಪಟ್ಟು ದುಡಿದ ಹಣವನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

IMA investors wrote letter to Modi and ask his help

ಇಂದು ಕರ್ನಾಟಕ ಬಿಜೆಪಿ ಸಂಸದರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಮಾಡಿದ್ದು, ಈ ಪ್ರಕರಣದ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.

English summary
IMA fraud company investors wrote letter to Prime minister Narendra Modi and requested him to hand over the case to CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X