ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

IMA ಹಗರಣ: ಬೆಂಗಳೂರು ಪೊಲೀಸರ ಮಹತ್ವದ ಟ್ವೀಟ್

|
Google Oneindia Kannada News

ಬೆಂಗಳೂರು, ಜೂನ್ 14: ಅದೇನು ಭವಿಷ್ಯಕ್ಕಾಗಲಿ ಎಂದು ಕೂಡಿಟ್ಟ ಹಣವೋ ಏನೋ, ಕಷ್ಟಪಟ್ಟು ಕೂಡಿಟ್ಟದ್ದನ್ನೆಲ್ಲಾ ಐಎಂಎ ಜ್ಯುವೆಲ್ಲರ್ಸ್ ಎನ್ನುವ ಫ್ರಾಡ್ ಕಂಪೆನಿಯ ಮೇಲೆ ಸುರಿದ ಹೂಡಿಕೆದಾರರು ಈಗ ಕಣ್ಣುಬಾಯಿ ಬಿಡುತ್ತಿದ್ದಾರೆ.

ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ. ಈ ಕಂಪೆನಿಯ ಮೇಲೆ ಹಣ ಹೂಡಿದ್ದಕ್ಕೆ ಗಂಡ, ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಇನ್ನು, ಮುಂದಿನ ತಿಂಗಳು ನಡೆಯಬೇಕಾಗಿದ್ದ ಮದುವೆಯೂ ನಿಂತು ಹೋಗಿದೆ. ಹೀಗೆ ಬಗೆದಷ್ಟು ಹೊರಬರುತ್ತಿವೆ ಮೊಹಮ್ಮದ್ ಮನ್ಸೂರ್ ಖಾನ್ ನ ವಂಚನೆಯ ಸಾಮ್ರಾಜ್ಯ.

5000 ಕೋಟಿ, ಒಂದು ಲಕ್ಷ ಹೂಡಿಕೆದಾರರು: ಮನ್ಸೂರ್ ಖಾನ್ ನ ವಂಚನೆ ಲೆಕ್ಕಾಚಾರ5000 ಕೋಟಿ, ಒಂದು ಲಕ್ಷ ಹೂಡಿಕೆದಾರರು: ಮನ್ಸೂರ್ ಖಾನ್ ನ ವಂಚನೆ ಲೆಕ್ಕಾಚಾರ

ಈಗಾಗಲೇ ಹಣ ಹೂಡಿ ಮೋಸ ಹೋಗಿದ್ದೀರಾ, ಇನ್ನೂ..ಇನ್ನೂ.. ಇಂತಹ ವಿಚಾರದಲ್ಲಿ ಮೋಸ ಹೋಗಬೇಡಿ ಎಂದು ಬೆಂಗಳೂರು ಪೊಲೀಸರು ಮಹತ್ವದ ಟ್ವೀಟ್ ಸಂದೇಶವೊಂದನ್ನು ರವಾನಿಸಿದ್ದಾರೆ.

IMA fraud case, very important tweet message from Bengaluru Police

ಅದು ಹೀಗಿದೆ, " IMA ಜ್ಯೂವೆಲರ್ಸ್ ಹೂಡಿಕೆದಾರರೇ ಎಚ್ಚರ: ನಿಮ್ಮ ATM & CVV ಸಂಖ್ಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ, ನಿಮ್ಮ ಹೂಡಿಕೆ ಹಣವನ್ನು ಹಿಂದಿರುಗಿಸುತ್ತೇವೆಂದು ಬರುವ ವಂಚನೆ ಕರೆಗಳ ಬಗ್ಗೆ ಜಾಗೃತರಾಗಿರಿ"

"ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಇಂತಹ ಕರೆಗಳು ಬಂದಲ್ಲಿ ಕೂಡಲೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ" ಇದು ಪೊಲೀಸರು ಹೊರಡಿಸಿರುವ ಟ್ವೀಟ್ ಸಂದೇಶ.

ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದು ಅದೆಷ್ಟೋ ಬಾರಿ ಸಾಬೀತಾಗಿ ಹೋಗಿದೆ. ಬೆವರು ಸುರಿಸಿ ದುಡಿದು ಐಎಂಎ ಕಂಪೆನಿಯ ಮೇಲೆ, ಹೂಡಿದ ಹಣ, ಆದಷ್ಟು ಬೇಗ ಹೂಡಿಕೆದಾರರಿಗೆ ಸಿಗುವಂತಾಗಲಿ ಎನ್ನುವುದು ಎಲ್ಲರ ಆಶಯ.

English summary
IMA fraud case, very important tweet message from Bengaluru Police who invested to this company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X