ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ವಂಚನೆ: ಮನ್ಸೂರ್‌ ಖಾನ್‌ಗೆ ಸೇರಿದ ಬಂದೂಕು ವಶ

|
Google Oneindia Kannada News

ಬೆಂಗಳೂರು, ಜೂನ್ 25: ಐ.ಎಂ.ಎ ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ವಿಶೇಷ ಪೊಲೀಸ್ ತನಿಖಾ ತಂಡವು ನಿನ್ನೆ (ಜೂನ್ 24) ನಗರದ ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿರುವ ಎರಡು ಪ್ರಮುಖ ಮಳಿಗೆಗಳ ಮೇಲೆ ದಾಳಿ ನಡೆಸಿದೆ.

ಪ್ರಕರಣದ ಪ್ರಮುಖ ಆರೋಪಿ ಮಸೂದ್‌ ಖಾನ್‌ ಒಡೆತನದ ಐ.ಎಂ.ಎ ಗೋಲ್ಡ್ ಮತ್ತು ಐ.ಎಂ.ಎ ಜ್ಯುವೆಲರಿ ಮಳಿಗೆಗಳ ಮೇಲೆ ಶೋಧನೆ ನಡೆಸಿದ ಪ್ರತ್ಯೇಕ ತಂಡಗಳು ಶೋಧನೆ ನಂತರ ಚಿನ್ನಾಭರಣ, ನಗದು ಹಾಗೂ ಪರವಾನಿಗೆಯುಳ್ಳ ರಿವಾಲ್ವರ್‌ ಹಾಗೂ ಗುಂಡುಗಳನ್ನು ವಶಪಡಿಸಿಕೊಂಡಿದೆ.

ಐಎಂಎ ಮನ್ಸೂರ್ ಖಾನ್ ಪತ್ತೆಹಚ್ಚಿದ ಎಸ್ಐಟಿ, ಸದ್ಯದಲ್ಲೇ ಅರೆಸ್ಟ್? ಐಎಂಎ ಮನ್ಸೂರ್ ಖಾನ್ ಪತ್ತೆಹಚ್ಚಿದ ಎಸ್ಐಟಿ, ಸದ್ಯದಲ್ಲೇ ಅರೆಸ್ಟ್?

ಐ.ಎಂ.ಎ ಗೋಲ್ಡ್ ಲೇಡಿ ಕರ್ಜನ್ ರಸ್ತೆ, ಶಿವಾಜಿನಗರ ಈ ಮಳಿಗೆಯ ಮೇಲೆ ದಾಳಿ ನಡೆಸಿ, 41 ಕೆಜಿ 302 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಂಡಿದೆ ಇವುಗಳ ಅಂದಾಜು ಬೆಲೆ 11.34 ಕೋಟಿ ರೂಗಳಾಗಿದೆ.
71 ಕೆ.ಜಿ 770 ಗ್ರಾಂ ತೂಕದ ಬೆಳ್ಳಿಯ ಬುಲಿಯನ್ಸ್ (ಗಟ್ಟಿ) ವಶಪಡಿಸಿಕೊಂಡಿದೆ, ಇದರ ಅಂದಾಜು ಬೆಲೆ 8.27 ಲಕ್ಷ ರೂಗಳಾಗಿವೆ. ಇದರ ಜೊತೆಗೆ 5.60 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

IMA fraud case: SIT continue to raid on IMA jewels shops

ದಿನಾಂಕ ಜೂನ್ 22 ಕ್ಕೆ ಮುಂದುವರೆದಂತೆ ಐ.ಎಂ.ಎ ಗೋಲ್ಡ್, ಲೇಡಿ ಕರ್ಜನ್ ರಸ್ತೆ, ಶಿವಾಜಿನಗರ, ಬೆಂಗಳೂರು ಮಳಿಗೆಯ ಮೇಲೆ ದಿನಾಂಕ ಜೂನ್ 24 ರಂದು ಮತ್ತೆ ಶೋಧನೆಯನ್ನು ಮುಂದುವರೆಸಿದ ವಿಶೇಷ ತನಿಖಾ ತಂಡವು ಹಲವು ಚಿನ್ನಾಭರಣ , ನಗದನ್ನು ವಶಪಡಿಸಿಕೊಂಡಿದೆ.

320 ಗ್ರಾಂ ಚಿನ್ನದ ಆಭರಣಗಳು , 14.5 ಕ್ಯಾರೆಟ್ ಡೈಮಂಡ್ , 60 ಕ್ಯಾರೆಟ್ ಸೆಮಿ ಪ್ರೀಸಿಯಸ್ ಸ್ಟೋನ್ಸ್ (ಹರಳು), 470 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು- ಇವುಗಳ ಮೌಲ್ಯ 17 ಲಕ್ಷ ಮತ್ತು ನಗದು ಹಣ ರೂ. 7,85,000 ವಶಪಡಿಸಿಕೊಳ್ಳಲಾಗಿದೆ , ಇವುಗಳ ಒಟ್ಟು ಮೌಲ್ಯ 24,85,000 ಇದರ ಜೊತೆ 32 ರಿವಾಲ್ವಾರ್ 58 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹ ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹ

ಈ ಎರಡೂ ದಾಳಿಗಳಿಂದ ವಶಪಡಿಸಿಕೊಂಡಿರುವ ನಗದು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ 11.23 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು ತನಿಖೆ ಮುಂದುವರೆದಿದೆ.

ಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆ

ಈ ಕಾರ್ಯಾಚರಣೆಯನ್ನು ಐ.ಎಂ.ಎ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಶ್ರೀ ಬಿ.ಆರ್.ರವಿಕಾಂತೇಗೌಡ, ಐಪಿಎಸ್, ಡಿಐಜಿ & ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಶ್ರೀ ಗಿರೀಶ್.ಎಸ್, ಐಪಿಎಸ್, ಡಿಸಿಪಿ, ಅಪರಾಧ, ಬೆಂಗಳೂರು ನಗರ ರವರ ನೇತೃತ್ವದ ಎರಡು ವಿಶೇಷ ಪೊಲೀಸ್ ತನಿಖಾ ತಂಡಗಳು ನಿರ್ವಹಿಸಿರುತ್ತವೆ.

English summary
SIT continue to raid on IMA jewels shops. SIT seize crore of worth gold and diamond. Yesterday SIT seize gun and bullet which belongs to Mansoor Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X