ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಡ್ ವಿಂಗ್ ತಂಡದಿಂದ 12ರಂದು 'ಇಲ್ಯಾಡ್ಗಣ್ಣ' ನಾಟಕ ಪ್ರದರ್ಶನ

ಕನ್ನಡ ಹೊಸದಾಗಿ ಹುಟ್ಟಿಕೊಂಡಿರುವ ಸೈಡ್ ವಿಂಗ್ ರಂಗತಂಡದ ಮೊದಲ ಪ್ರಯತ್ನವಾದ 'ಇಲ್ಯಾಡ್ಗಣ್ಣ' ನಾಟಕ ಪ್ರದರ್ಶನ ಇದೇ ತಿಂಗಳ 12ರಂದು. ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ನಡೆಯಲಿರುವ ಚೊಚ್ಚಲ ಪ್ರದರ್ಶನ.

|
Google Oneindia Kannada News

ಬೆಂಗಳೂರು, ಆಗಸ್ಟ್ 10: ರಂಗಭೂಮಿಗೆ ಇದೇ ಮೊದಲ ಬಾರಿಗೆ ಕಾಲಿಟ್ಟಿರುವ ಹವ್ಯಾಸಿ ರಂಗ ಕಲಾವಿದರ ತಂಡ 'ಸೈಡ್ ವಿಂಗ್ ಬೆಂಗಳೂರು' ನ ಚೊಚ್ಚಲ ಪ್ರಯತ್ನವಾದ 'ಇಲ್ಯಾಡ್ಗಣ್ಣ' ಎಂಬ ನಾಟಕ ಪ್ರದರ್ಶನ ಇದೇ ತಿಂಗಳ 12ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಳಿಯಿರುವ ಕಲಾಗ್ರಾಮದಲ್ಲಿ ನಡೆಯಲಿದೆ.

ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಕದಂರೊಂದಿಗಿನ ಸಂದರ್ಶನರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಕದಂರೊಂದಿಗಿನ ಸಂದರ್ಶನ

ಈ ನಾಟಕವನ್ನು ಎಂ.ಎಂ. ಶೈಲೇಶ್ ಕುಮಾರ್ ರಚಿಸಿ ನಿರ್ದೇಶಿಸಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಇವರು ಕೆಲವಾರು ವರ್ಷಗಳಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರು ಈ ಹಿಂದೆ ರಚಿಸಿದ್ದ 'ಇಲ್ಲ ಅಂದ್ರೆ.. ಇದೆ!' ಎಂಬ ನಾಟಕ ಹಲವಾರು ಯಶಸ್ವಿ ಪ್ರದರ್ಶನ ಕಂಡಿದೆ.

'Illidganna' play will be on Kalagrama on August 12, 2017

ನಾಟಕದ ರಂಗ ಸಜ್ಜಿಕೆ, ರಂಗ ಪರಿಕರಗಳನ್ನು ವಿಶ್ವನಾಥ್ ಮಂಡಿ ಒದಗಿಸಿದ್ದು, ಧನುಷ್ ಅವರ ಬೆಳಕು, ಆದಿತ್ಯ ಭಾರದ್ವಾಜ್ ಅವರ ಸಂಗೀತವಿದೆ.

ಟಾಗೋರ್ ದ್ವಿತೀಯ ದರ್ಜೆ ನಾಟಕಕಾರ : ಕಾರ್ನಾಡ್ಟಾಗೋರ್ ದ್ವಿತೀಯ ದರ್ಜೆ ನಾಟಕಕಾರ : ಕಾರ್ನಾಡ್

'Illidganna' play will be on Kalagrama on August 12, 2017

ಆಗಸ್ಟ್ 12ರಂದು ಸಂಜೆ 7:30ಕ್ಕೆ ನಾಟಕ ಪ್ರದರ್ಶನ ನಡೆಯಲಿದ್ದು, ಪ್ರತಿ ಟಿಕೆಟ್ಟಿಗೆ 100 ರು. ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, 9845087901 ಸಂಖ್ಯೆಗೆ ಸಂಪರ್ಕಿಸಬಹುದು.

English summary
New team of ameture theater artists named 'Sidewing Benglauru', will be staging its first play 'illyadganna' on August 12th, 2017 at Kalagrama near Bangalore University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X