ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಆಸ್ತಿ ಕೇಸ್ : ರೋಷನ್ ಬೇಗ್ ಗೆ ನೆಮ್ಮದಿ ಕೊಟ್ಟ ಕೋರ್ಟ್ ನಿರ್ದೇಶನ

By Mahesh
|
Google Oneindia Kannada News

ಬೆಂಗಳೂರು, ಜೂನ್ 22 : ಆದಾಯ ಮೀರಿ ಆಸಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ನೀಡಿರುವ ನಿರ್ದೇಶನ, ನೆಮ್ಮದಿ ತಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್ ಬೇಗ್ ಹಾಘೂ ಆರ ಕುಟಂಬದ ವಿರುದ್ಧದ ತನಿಖೆ ಹಾಗೂ ವಿಚಾರಣೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕಾಂಗ್ರೆಸ್ಸಿಗೆ ಆಘಾತ, ಸಚಿವ ರೋಷನ್ ಬೇಗ್ ಗೆ 'ಇಡಿ' ನೋಟಿಸ್ಕಾಂಗ್ರೆಸ್ಸಿಗೆ ಆಘಾತ, ಸಚಿವ ರೋಷನ್ ಬೇಗ್ ಗೆ 'ಇಡಿ' ನೋಟಿಸ್

ರೋಷನ್ ಬೇಗ್, ಅವರ ಪತ್ನಿ ಸಬಿನಾ ರೋಷನ್ ಬೇಗ್, ಪುತ್ರ ರುಮಾನ್ ಬೇಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎನ್ ಫಣೀಂದ್ರ ಅವರಿದ್ದ ನ್ಯಾಯಪೀಠವು, ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ನೀಡಿತು.

Illegal Assets case : Lokayukta Court gives relief Roshan Baig

ಈಗಾಗಲೇ ಈ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆ ಕಂಡು ಬಂದಿದ್ದರಿಂದ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು, ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಆಸ್ತಿ ಗಳಿಕೆಯಲ್ಲಿ ಆದಾಯ ಮೀರಿ ಆಸ್ತಿ ಇದೆ ಎಂದು ಪರಿಗಣಿಸಬೇಕಾದರೆ, ಆಸ್ತಿ ಪ್ರಮಾಣವು ಶೇ 10ಕ್ಕಿಂತ ಅಧಿಕವಾಗಿರಬೇಕು. ಈ ಪ್ರಕರಣದಲ್ಲಿ 56.71 ಲಕ್ಷ ರು ಅಧಿಕ ಆಸ್ತಿ ಗಳಿಕೆ ಎಂದು ದೂರು ಕೇಳಿ ಬಂದಿತ್ತು.

2012ರಲ್ಲಿ ಅಬ್ದುಲ್ ಹಕ್ ಅವರು ಸಲ್ಲಿಸಿದ್ದ ಖಾಸಗಿ ದೂರಿನನ್ವಯ ಪ್ರಕರಣ ದಾಖಲಾಗಿ, ಎಫ್ ಐಆರ್ ಹಾಕಲಾಗಿದ್ದು, ತನಿಖೆ ನಡೆಸಲಾಯಿತು. 2014ರಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಮತ್ತೊಮ್ಮೆ ಅರ್ಜಿ ಹಾಕಲಾಗಿತ್ತು. ಮೇ 5ರಂದು ಮತ್ತೊಮ್ಮೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯವು ಮೇಲ್ಕಂಡ ನಿರ್ದೇಶನ ನೀಡಿದೆ.

English summary
Illegal Assets case : Lokayukta Court in Bengaluru has instructed Investigation officers to not to proceed the case. It gives relief Roshan Baig and his family
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X