ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ, ದೇಶಕ್ಕಿಂತ ಬೆಂಗಳೂರಿನಲ್ಲಿ ರೂಪಾಂತರಿ ಕೊರೊನಾದ ವೇಗ ಹೆಚ್ಚು

|
Google Oneindia Kannada News

ಬೆಂಗಳೂರು, ಮಾರ್ಚ್ 05: ರೂಪಾಂತರಿ ಕೊರೊನಾ ಸೋಂಕು ಇಡೀ ವಿಶ್ವ, ದೇಶಕ್ಕಿಂತ ಬೆಂಗಳೂರಿನಲ್ಲಿಯೇ ಹೆಚ್ಚು ವೇಗವಾಗಿ ಹಬ್ಬುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಮೀಕ್ಷೆಯಲ್ಲಿ ತಿಳಿಸಿದೆ.

ರೂಪಾಂತರಿ ಸಾರ್ಸ್ ಕೋವಿಡ್-2 ರೂಪಾಂತರಗಳು ಎಷ್ಟು ಆಗಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಅಧ್ಯಯನದ ನೇತೃತ್ವ ವಹಿಸಿದ್ದ ಐಐಎಸ್‌ಸಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಉತ್ಪಾಲ್ ಟಾಟು, ಮಾತನಾಡಿ, ರೂಪಾಂತರಿ ಸ್ಥಿರವಾದಾಗ ಮಾತ್ರ ಆ ಸ್ಥಿರ ರೂಪಾಂತರಿಯ ಪರಿಣಾಮ ಬೆಳಕಿಗೆ ಬರುತ್ತದೆ ಎನ್ನುತ್ತಾರೆ.

ಕೊರೊನಾ ಕಂಟಕದಿಂದ ಬಚಾವ್, ಆದರೂ ಎಚ್ಚರವಾಗಿರಲು ಸೂಚನೆ..!ಕೊರೊನಾ ಕಂಟಕದಿಂದ ಬಚಾವ್, ಆದರೂ ಎಚ್ಚರವಾಗಿರಲು ಸೂಚನೆ..!

ಕೋವಿಡ್ ಐಸೊಲೇಟ್‌ ವೈರಲ್ ಜೀನೋಮ್‌ಗಳಲ್ಲಿ 27 ರೂಪಾಂತರಗಳನ್ನು ಹೊಂದಿದ್ದು, ಪ್ರತಿ ಸ್ಯಾಂಪಲ್‌ಗೆ 11 ಕ್ಕೂ ಹೆಚ್ಚು ರೂಪಾಂತರಗಳಿವೆ - ಇದು ರಾಷ್ಟ್ರೀಯ ಸರಾಸರಿ ಶೇ. 8.4 ಮತ್ತು ಜಾಗತಿಕ ಸರಾಸರಿ ಶೇಕಡಾ 7.3 ಎರಡಕ್ಕಿಂತ ಹೆಚ್ಚಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

IISc Study Shows Higher, Faster COVID Mutations In Bengaluru Than National, Global Average

ಐಐಎಸ್ಸಿ ಅಧ್ಯಯನ ಮಾಡಿ ತೋರಿಸಿರುವ ಸಾಕ್ಷಿಯಲ್ಲಿ ಸಾರ್ಸ್-ಕೋವಿಡ್-2 ರೂಪಾಂತರಿ ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಕುಗ್ಗಿಸುತ್ತದೆ. ಹೈ ರೆಸೊಲ್ಯೂಷನ್ ಮಾಸ್ ಸ್ಪೆಕ್ಟ್ರೊಮೆಟ್ರಿ ಎಂಬ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ ಇದನ್ನು ಮಾಡಲಾಗಿದೆ.

ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಗಳ ಮೂಗಿನಿಂದ ಸೋರುವಿಕೆಯ ಸ್ಯಾಂಪಲ್ ಗಳನ್ನು ಪಡೆದು ಪರೀಕ್ಷೆ ಮಾಡಲಾಗಿದ್ದು ಪ್ರೋಟಿಯೋಮ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Recommended Video

ಕೋವಿನ್‌ ಆಪ್‌ನಲ್ಲಿ ನೋಂದಣಿ ಹೇಗೆ ? ಏನೆಲ್ಲಾ ವಿವರ ಸಲ್ಲಿಸಬೇಕು? ಇಲ್ಲಿದೆ ಡಿಟೇಲ್ಸ್‌ | Oneindia Kannada

English summary
A study by the Indian Institute of Science (IISc), Bengaluru, has revealed that mutations in the SARS-CoV-2 virus that causes Covid-19, are occurring at a higher and faster rate in Bengaluru than the national and global average.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X