ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಶೋಧನಾ ವಿಭಾಗದಲ್ಲಿ ಐಐಎಸ್ಸಿಗೆ 11ನೇ ಸ್ಥಾನ

|
Google Oneindia Kannada News

ಬೆಂಗಳೂರು, ಸೆ. 17 : ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್) ಮತ್ತೊಮ್ಮೆ ವಿಶ್ವಮಟ್ಟದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.
ಕ್ವಾಕ್‌ಕ್ವಾರೆಲ್ಲಿ ಸೈಮಂಡ್ಸ್‌(ಕ್ಯೂಎಸ್‌) ಬಿಡುಗಡೆ ಮಾಡಿರುವ ವಿಶ್ವದ ಅತ್ಯುತ್ತಮ ವಿವಿಗಳ ಪಟ್ಟಿಯ ಸಂಶೋಧನಾ ವಿಭಾಗದಲ್ಲಿ ಐಐಎಸ್‌ಸಿ 11 ನೇ ಸ್ಥಾನ ಪಡೆದಿದೆ.

ಪೂರಕ ಸಂಶೋಧನಾ ವಿಭಾಗದಲ್ಲಿ ಐಐಎಸ್‌ಸಿ ಈ ಸಾಧನೆ ಮಾಡಿದೆ. ಅಂದರೆ ಒಂದು ದೊಡ್ಡ ಸಂಶೋಧನೆಗೆ ಅಗತ್ಯವಾದ ಚಿಕ್ಕ ಚಿಕ್ಕ ಸಂಶೋಧನೆಗಳನ್ನು ಪ್ರಚುರಪಡಿಸುವಲ್ಲಿ ವಿವಿ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರಗತಿ ತೋರಿಸಿದ್ದಾರೆ ಎಂದು ಕ್ಯೂಎಸ್‌ ಹೇಳಿದೆ.(ಹೊಳಪು ಕಳೆದುಕೊಳ್ಳುತ್ತಿರುವ ಐಐಎಸ್‌ಸಿ ಬೆಂಗಳೂರು)

ಕೆಲ ವರ್ಷಗಳ ಹಿಂದೆ ವಿಶ್ವದ ಎರಡು ನೂರು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಐಐಎಸ್‌ಸಿ ಸ್ಥಾನ ಪಡೆದಿತ್ತು. ಸಂಶೋಧನಾ ವಿಭಾಗದಲ್ಲಿ 24 ನೇ ಸ್ಥಾನಕ್ಕೇರಿದ್ದ ಸಾಧನೆ ಮಾಡಿತ್ತು. ಆದರೆ ಈ ಬಾರಿ ವಿಶ್ವದ 700 ವಿಶ್ವವಿದ್ಯಾಲಯಗಳ ಒಳಗೆ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಅಮೇರಿಕದ ಮಾಸ್‌ ಚೆಸ್ಟ್‌ ವಿಶ್ವವಿದ್ಯಾಲಯ ಕಳೆದ ಮೂರು ವರ್ಷಗಳಿಂದ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಪಾಡಿಕೊಂಡು ಬಂದಿದೆ. ಮುಂಬೈನ ಐಐಟಿ ವಿಶ್ವದಲ್ಲಿ 222 ನೇ ಸ್ಥಾನ ಪಡೆದಿದ್ದು ಭಾರತದ ಅಗ್ರಮಾನ್ಯ ವಿದ್ಯಾ ಸಂಸ್ಥೆಯಾಗಿ ಹೊರಹೊಮ್ಮಿದೆ.

English summary
In the latest release of the Quacquarelli Symonds (QS) World University Rankings 2014, Indian Institute of Science (IISc), Bangalore has acquired the 11th place in citations per faculty (research output).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X