ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

CAT 2022: ನೀವು ಹೆಸರು ನೋಂದಣಿ ಮಾಡಿಕೊಳ್ಳುವುದು ಹೇಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 3: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(IIM-B)ನಲ್ಲಿ 2022ನೇ ಸಾಲಿನ ಕಾಮನ್ ಅಡ್ಮಿಷನ್ ಟೆಸ್ಟ್ (CAT) 2022 ಪರೀಕ್ಷೆಗೆ ಆಗಸ್ಟ್ 3ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಬುಧವಾರ ಬೆಳಗ್ಗೆ 10 ಗಂಟೆಯಿಂದಲೇ ನೋಂದಣಿ ಶುರುವಾಗಿದ್ದು, ಸೆಪ್ಟೆಂಬರ್ 14ರವರೆಗೂ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಧಿಕೃತ ವೆಬ್‌ಸೈಟ್ -- iimcat.ac.in ಮೂಲಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಈ ಸಿಎಟಿ 2022 ಪರೀಕ್ಷೆಯನ್ನು ನವೆಂಬರ್ 27 ರಂದು ನಡೆಸಲಾಗುವುದು.

ಈ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಳ್ಳುವುದಕ್ಕೆ ಬಯಸುವ ಅರ್ಜಿದಾರರ ಪೈಕಿ ಸಾಮಾನ್ಯ ಅಭ್ಯರ್ಥಿಗಳಿಗೆ 2300 ರೂಪಾಯಿ ಮತ್ತು ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳು 1150 ರೂಪಾಯಿ ಸಿಎಟಿ ನೋಂದಣಿ ಶುಲ್ಕ ಪಾವತಿಸಬೇಕು. ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ?, ಹೆಸೆರು ನೋಂದಣಿ ಹಂತಗಳಾವವು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಒಂದು ವರ್ಷದ ಅವಧಿಗೆ ಸ್ಕೋರ್ ಮಾನ್ಯ

ಒಂದು ವರ್ಷದ ಅವಧಿಗೆ ಸ್ಕೋರ್ ಮಾನ್ಯ

ಮುಂಬರುವ 2022ರ ನವೆಂಬರ್ 27ರಂದು ನಡೆಯಲಿರುವ CAT 2022 ಪರೀಕ್ಷೆಯ ಫಲಿತಾಂಶಗಳನ್ನು 2023ರ ಜನವರಿ ಎರಡನೇ ವಾರದಲ್ಲಿ ಪ್ರಕಟಿಸಲಾಗುತ್ತದೆ. ಈ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. 31 ಡಿಸೆಂಬರ್ 2023 ರವರೆಗೆ ಮಾತ್ರ ಈ ಫಲಿತಾಂಶ ಮಾನ್ಯವಾಗಿರುತ್ತದೆ. ಸದ್ಯದ ಮಾಹಿತಿ ಪ್ರಕಾರ, 2,50,000 ಅಭ್ಯರ್ಥಿಗಳು CAT 2022 ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

2022ರ ಸಿಎಟಿ ನೋಂದಣಿಗೆ ಅರ್ಜಿ ಸಲ್ಲಿಸುವ ವಿಧಾನ

2022ರ ಸಿಎಟಿ ನೋಂದಣಿಗೆ ಅರ್ಜಿ ಸಲ್ಲಿಸುವ ವಿಧಾನ

* ಸಿಎಟಿ 2022 ಅಧಿಕೃತ iimcat.ac.in ವೆಬ್‌ಸೈಟ್‌ಗೆ ಭೇಟಿ ನೀಡಿ -

* ಸಿಎಟಿ ಅರ್ಜಿಯ ಪುಟಕ್ಕೆ ಮರುನಿರ್ದೇಶಿಸುತ್ತದೆ. ಅಲ್ಲಿಂದ CAT ನೋಂದಣಿ ಫಾರ್ಮ್ 2022 ಅನ್ನು ಮಾನ್ಯ ಮತ್ತು ಅಗತ್ಯವಿರುವ ವಿವರಗಳನ್ನು ಬಳಸಿ ಭರ್ತಿ ಮಾಡಿ.

* CAT ಲಾಗಿನ್ ರುಜುವಾತುಗಳನ್ನು ಬಳಸಿ, ಡ್ಯಾಶ್‌ಬೋರ್ಡ್‌ಗೆ ಹೋಗಿ ಮತ್ತು CAT ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

* CAT ನೋಂದಣಿ 2022 ಗೆ ಅಗತ್ಯವಿರುವ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

* ಯಾವುದೇ ಪಾವತಿ ಗೇಟ್‌ವೇ ಬಳಸಿ ಆನ್‌ಲೈನ್ ಮೋಡ್‌ನಲ್ಲಿ CAT ನೋಂದಣಿ ಶುಲ್ಕವನ್ನು ಪಾವತಿಸಿ.

* ಭರ್ತಿ ಮಾಡಿದ CAT ಫಾರ್ಮ್ 2022 ಅನ್ನು ಸಲ್ಲಿಸಿ ಮತ್ತು ನಿಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

150 ನಗರಗಳಲ್ಲಿ ಮೂರು ಹಂತಗಳಲ್ಲಿ ಸಿಎಟಿ ಪರೀಕ್ಷೆ

150 ನಗರಗಳಲ್ಲಿ ಮೂರು ಹಂತಗಳಲ್ಲಿ ಸಿಎಟಿ ಪರೀಕ್ಷೆ

ದೇಶದಾದ್ಯಂತ CAT ಪರೀಕ್ಷೆಯು 150 ನಗರಗಳಲ್ಲಿ ನಡೆಯುತ್ತದೆ. ತಲಾ 2 ಗಂಟೆಗಳ ಮೂರು ಸ್ಲಾಟ್‌ಗಳಲ್ಲಿ - ಸ್ಲಾಟ್ 1 ಬೆಳಿಗ್ಗೆ 8:30 ರಿಂದ ರಾತ್ರಿ 10:30 ರವರೆಗೆ, ಸ್ಲಾಟ್ 2- 12:30 ರಿಂದ ಮಧ್ಯಾಹ್ನ 2:30 ರವರೆಗೆ ಮತ್ತು ಸ್ಲಾಟ್ 3 ರಂದು ಸಂಜೆ 4:30 ರಿಂದ 6:30 ರವರೆಗೆ ನಡೆಯುತ್ತದೆ.

ಸಿಎಟಿ ಪರೀಕ್ಷೆ ನಡೆಯುವ ಕಾಲೇಜುಗಳು

ಸಿಎಟಿ ಪರೀಕ್ಷೆ ನಡೆಯುವ ಕಾಲೇಜುಗಳು

CAT 2022 ಅಂಕಗಳನ್ನು 20 ಅಭ್ಯರ್ಥಿಗಳನ್ನು ದೇಶದ MDI ಗುರ್ಗಾಂವ್, FMS ದೆಹಲಿ, IIT ದೆಹಲಿ, IIT ಮುಂಬೈ, SPJIMR, GIM ಗೋವಾ, ಗ್ರೇಟ್ ಲೇಕ್ಸ್, FORE, IMT ಘಾಜಿಯಾಬಾದ್, TAPMI, MICA, ಮುಂತಾದ 100 ಕ್ಕೂ ಹೆಚ್ಚು ಉನ್ನತ MBA ಕಾಲೇಜುಗಳಲ್ಲಿ ತೆಗೆದುಕೊಳ್ಳಲಾಗುತ್ತದೆ.

English summary
The Indian Institute of Management, Bangalore (IIM-B) 3 August began the registration if Common Admission Test (CAT) 2022 through their official website iimcat.ac.in. The last day for registration is 14 September. Here are the steps to register.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X