ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ನೇಣು ಬಿಗಿದುಕೊಂಡು ಐಎಫ್‌ಎಸ್ ಅಧಿಕಾರಿ ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 08 : ಐಎಫ್‌ಎಸ್ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

1990ನೇ ಬ್ಯಾಚ್ ಐಎಫ್‌ಎಸ್ ಅಧಿಕಾರಿ ಅವತಾರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡವರು. ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಅವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಐಎಎಸ್ ಅಧಿಕಾರಿಗಳ ರಾಜೀನಾಮೆ; ಸಂವಿಧಾನಕ್ಕೆ ಅಪ್ಪಳಿಸಿದ ಧೂಮಕೇತು?ಐಎಎಸ್ ಅಧಿಕಾರಿಗಳ ರಾಜೀನಾಮೆ; ಸಂವಿಧಾನಕ್ಕೆ ಅಪ್ಪಳಿಸಿದ ಧೂಮಕೇತು?

Recommended Video

ಬೆಂಗಳೂರಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನ ಬಂಧನ | Oneindia Kannada

ಯಲಹಂಕದಲ್ಲಿರುವ ಪ್ರೆಸ್ಟೀಜ್ ಮೌಂಟ್ ಕಾರ್ಲೋ ಅಪಾರ್ಟ್‌ಮೆಂಟ್‌ನಲ್ಲಿ ಅವತಾರ್ ಸಿಂಗ್ ಶವ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಕೆಲಸಕ್ಕೆ ಹಾಜರಾಗಿದ್ದ ಅವರು ಸಂಜೆ ಮನಗೆ ಮರಳಿದ್ದರು.

ಎಸ್. ಸಸಿಕಾಂತ್ ಸೆಂಥಿಲ್ ರಾಜೀನಾಮೆ : ಯಾರು, ಏನು ಹೇಳಿದರು?ಎಸ್. ಸಸಿಕಾಂತ್ ಸೆಂಥಿಲ್ ರಾಜೀನಾಮೆ : ಯಾರು, ಏನು ಹೇಳಿದರು?

IFS officer Commits Suicide In Bengaluru

ಹರ್ಯಾಣದ ಯಮುನಾ ನಗರದ ನಿವಾಸಿಯಾದ ಅವತಾರ್ ಸಿಂಗ್ 1990ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದಾರೆ. ಅರಣ್ಯ ಭವನದ ಅನೇಕ ಸಿಬ್ಬಂದಿಗಳು ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ.

ಶಿವಮೊಗ್ಗ ಜನತೆಗೆ ಭಾವುಕ ವಿದಾಯ ಪತ್ರ ಬರೆದ ಕೆ. ದಯಾನಂದಶಿವಮೊಗ್ಗ ಜನತೆಗೆ ಭಾವುಕ ವಿದಾಯ ಪತ್ರ ಬರೆದ ಕೆ. ದಯಾನಂದ

ಯಲಹಂಕ ಠಾಣೆ ಪೊಲೀಸರು, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

English summary
1990 batch Indian Forest Service officer Avtar Singh committed suicide at Prestige mount carlo apartments Bengaluru on September 8, 2019. Yelahanka police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X