ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ನಿಯಮ ಉಲ್ಲಂಘಿಸಿದರೆ ಪರೀಕ್ಷೆ; ಶೇ 60ರಷ್ಟು ಅಂಕ ಕಡ್ಡಾಯ!

|
Google Oneindia Kannada News

ಬೆಂಗಳೂರು, ನವೆಂಬರ್ 04: ಬೆಂಗಳೂರು ನಗರ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಪದೇ ಪದೇ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಅವರು ಪದೇ-ಪದೇ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿ ಬೀಳುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ಪರೀಕ್ಷೆ ಮೊರೆ ಹೋಗಿದ್ದಾರೆ.

ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್

10 ಕ್ಕಿಂತ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂತಹ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ನಂತರ ಆ ಸವಾರರಿಗೆ ಪರೀಕ್ಷೆ ನಡೆಸಲಾಗುತ್ತದೆ. ಶೇ 60ಕ್ಕಿಂತ ಹೆಚ್ಚು ಅಂಕ ಪಡೆದರೆ ಮಾತ್ರ ವಾಹನ ವಾಪಸ್ ನೀಡಲಾಗುತ್ತದೆ.

ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ

ಬೆಂಗಳೂರು ನಗರ ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಬಿ. ಆರ್. ರವಿಕಾಂತೇ ಗೌಡ ಅವರ ಮಾರ್ಗದರ್ಶನದಲ್ಲಿ ಇಂತಹ ಯೋಜನೆ ರೂಪಿಸಲಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ಮೊದಲು ಸವಾರರು ಮತ್ತೊಮ್ಮೆ ಆಲೋಚಿಸಬೇಕಿದೆ.

ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು

ವಾಹನ ಸವಾರರಿಗೆ ಪರೀಕ್ಷೆ

ವಾಹನ ಸವಾರರಿಗೆ ಪರೀಕ್ಷೆ

ಯಾವುದೇ ವಾಹನ ಸವಾರರು 10ಕ್ಕಿಂತ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅವರ ವಾಹನವನ್ನು ವಶಕ್ಕೆ ಪಡೆಯಲಾಗುತ್ತದೆ. ಬಳಿಕ ಸವಾರರು ಪರೀಕ್ಷೆಗಳನ್ನು ಬರೆಯಬೇಕು. ಶೇ 60ಕ್ಕಿಂತ ಹೆಚ್ಚು ಅಂಕಗಳಿಸಿದರೆ ಮಾತ್ರ ವಾಹನ ವಾಪಸ್ ಸಿಗಲಿದೆ.

ಪ್ರಮಾಣ ಪತ್ರ ನೀಡಲಾಗುತ್ತದೆ

ಪ್ರಮಾಣ ಪತ್ರ ನೀಡಲಾಗುತ್ತದೆ

ಒಂದು ವೇಳೆ ವಾಹನ ಸವಾರರು ಶೇ 60ಕ್ಕಿಂತ ಕಡಿಮೆ ಅಂಕಗಳಿಸಿದರೆ ಥಣಿಸಂದ್ರದಲ್ಲಿರುವ ಸಂಚಾರಿ ತರಬೇತಿ ಮತ್ತು ರಸ್ತೆ ಸುರಕ್ಷತಾ ಕೇಂದ್ರದಲ್ಲಿ ಅವರಿಗೆ ಅರಿವು, ತರಬೇತಿ ನೀಡಲಾಗುತ್ತದೆ. ಅಲ್ಲಿನ ಅಧಿಕಾರಿಗಳು ಅವರಿಗೆ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಮೂಲಕ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಮುಗ್ಧರು ಬಲಿಯಾಗುತ್ತಿದ್ದಾರೆ

ಮುಗ್ಧರು ಬಲಿಯಾಗುತ್ತಿದ್ದಾರೆ

ಹಲವಾರು ವಾಹನ ಸವಾರರು ಮಾನ್ಯತೆ ಪಡೆದ ಲೈಸೆನ್ಸ್ ಹೊಂದಿದ್ದಾರೆ. ಆದರೆ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದ ಕಾರಣ ಮುಗ್ಧ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದ್ದರಿಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.

Recommended Video

The Real Reason Behind Arnab Gosami Arrest : ಇದೆ ಕಾರಣಕ್ಕೆ ಅರೆಸ್ಟ್ ಆಗಿರೋದು | Oneindia Kannada
108 ಜನರ ತರಬೇತಿ ಮುಗಿದಿದೆ

108 ಜನರ ತರಬೇತಿ ಮುಗಿದಿದೆ

ರಸ್ತೆಯಲ್ಲಿ ಸಿಗ್ನಲ್‌ ನಿಯಮಗಳನ್ನು ಹೇಗೆ ಪಾಲನೆ ಮಾಡಬೇಕು?, ಹೆಲ್ಮೆಟ್ ಧರಿಸುವ ಮಹತ್ವವೇನು? ಮುಂತಾದ ನಿಯಮಗಳ ಬಗ್ಗೆ ಹೋಂಡಾ ಕಂಪನಿಯ ಅಧಿಕಾರಿಗಳು ತರಬೇತಿ ನೀಡುತ್ತಾರೆ. ಬಳಿಕ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕಳೆದ ವಾರ 108 ವಾಹನ ಸವಾರರಿಗೆ ತರಬೇತಿಯನ್ನು ನೀಡಲಾಗಿದೆ.

English summary
If you violate traffic rules more than 10 time Bengaluru police will seize vehicles and hand over it owners only if they score 60% in a test on traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X