ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈ ಮೇಲೆ ಸ್ಟ್ಯಾಂಪ್ ಬಿದ್ದವರು ಹೊರಗೆ ಓಡಾಡಿದರೆ, ಅರೆಸ್ಟ್ ಆಗೋದು ಗ್ಯಾರೆಂಟಿ!

|
Google Oneindia Kannada News

ಬೆಂಗಳೂರು, ಮಾರ್ಚ್ 24: ವಿದೇಶಗಳಿಂದ ಬಂದವರನ್ನ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅವರುಗಳ ಎಡಗೈ ಮೇಲೆ 'ಹೋಮ್ ಕ್ವಾರನ್ಟೈನ್' ಎಂದು ಸ್ಟ್ಯಾಂಪ್ ಹಾಕಲಾಗುತ್ತಿದೆ. ಹೀಗೆ ಕೈ ಮೇಲೆ ಸ್ಟ್ಯಾಂಪ್ ಹಾಕಿಸಿಕೊಂಡವರು ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು.

ಆದ್ರೆ, ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಕೆಲವರು ಉಡಾಫೆ ಮಾಡಿ, ಕೈಯಲ್ಲಿ ಸ್ಟ್ಯಾಂಪ್ ಇದ್ದರೂ.. 'ಕಡ್ಡಾಯವಾಗಿ ಹೋಮ್ ಕ್ವಾರೆಂಟೈನ್'ನಲ್ಲಿರಬೇಕಾಗಿದ್ದರೂ... ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ.

If You Find Home Quarantine Stamped Are Moving Around Call 100 Tweets Bhaskar Rao

ಕರ್ನಾಟಕ ಲಾಕ್ ಡೌನ್: ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ! ಕರ್ನಾಟಕ ಲಾಕ್ ಡೌನ್: ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ!

ಹಾಗೆ ಕೈ ಮೇಲೆ ಸ್ಟ್ಯಾಂಪ್ ಬಿದ್ದವರು ನಿಮ್ಮ ಕಣ್ಣಿಗೆ ಏನಾದರೂ ಬಿದ್ದರೆ, ಕೂಡಲೆ 100 ಗೆ ಫೋನ್ ಮಾಡಿ, ಅಂಥವರನ್ನು ಬಂಧಿಸಿ ಸರ್ಕಾರದ 'ಕ್ವಾರನ್ಟೈನ್'ನಲ್ಲಿ ಇರಿಸಲಾಗುವುದು ಎಂದು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

''ಸಾರ್ವಜನಿಕ ಹಿತಾಸಕ್ತಿಯಿಂದ ಕೊರೊನಾ ಪೀಡಿತ ದೇಶಗಳಿಂದ ವಾಪಸ್ ಆದ 5000 ಮಂದಿಗೆ 'ಹೋಮ್ ಕ್ವಾರೆಂಟೈನ್' ಸ್ಟ್ಯಾಂಪ್ ಹಾಕಲಾಗಿದೆ. ಸ್ಟ್ಯಾಂಪ್ ಹಾಕಿಸಿಕೊಂಡವರು ಬಿಎಂಟಿಸಿ ಬಸ್ ಗಳಲ್ಲಿ ಓಡಾಡುತ್ತಿದ್ದಾರೆ, ರೆಸ್ಟೊರೆಂಟ್ ನಲ್ಲಿ ಕುಳಿತಿದ್ದಾರೆ ಎಂದು ನನಗೆ ದೂರವಾಣಿ ಕರೆಗಳು ಬಂದಿವೆ. ಅಂಥವರೇನಾದರೂ ಕಣ್ಣಿಗೆ ಬಿದ್ದರೆ, ಕೂಡಲೆ 100ಗೆ ಫೋನ್ ಮಾಡಿ. ಅವರುಗಳನ್ನು ಬಂಧಿಸಿ, ಸರ್ಕಾರದ ಕ್ವಾರನ್ಟೈನ್ ನಲ್ಲಿ ಇರಿಸಲಾಗುವುದು'' ಎಂದು ಭಾಸ್ಕರ್ ರಾವ್ ಟ್ವೀಟಿಸಿದ್ದಾರೆ.

''ಎಲ್ಲರೂ ಮನೆಯಲ್ಲೇ ಇರಬೇಕು' ಎಂಬ ಆದೇಶವನ್ನು ನಾಗರೀಕರು ದಯವಿಟ್ಟು ಪಾಲಿಸಿ. ಕಾನೂನಿಗೆ ಭಯ ಪಡುವ ಬದಲು ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ. ನಿಮ್ಮ ಜೀವಕ್ಕಿಂತ ಬೇರೆ ಯಾವುದೂ ಮುಖ್ಯ ಅಲ್ಲ'' ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

English summary
If you find Home quarantine stamped are moving around call 100 tweets Bhaskar Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X