ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್ ಫ್ಲೈಓವರ್ ಮೇಲೆ ಅಪಘಾತ ತಡೆಯಲು ಪ್ಲ್ಯಾನ್ ಏನದು?

|
Google Oneindia Kannada News

ಬೆಂಗಳೂರು, ಜೂನ್ 12: ನಗರದ ಏರ್‌ಪೋರ್ಟ್‌ ಫ್ಲೈಓವರ್‌ ಮೇಲೆ ಇನ್ನುಮುಂದೆ ಪಥ ಶಿಸ್ತು ಪಾಲನೆ ಮಾಡದಿದ್ದರೆ ದಂಡ ಕಟ್ಟಬೇಕಾಗೀತು.

ಅಪಘಾತ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸದಾ ವಾಹನಗಳಿಂದ ಗಿಜಿಗುಡುತ್ತಿರುವ ಫ್ಲೈಓವರ್ ಮೇಲೆ ಅಪಘಾತಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೇಗಂದರೆ ಹಾಗೆ ಮನಸ್ಸಿಗೆ ಬಂದಂತೆ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸುತ್ತಿವೆ.

ಟ್ರ್ಯಾಕ್ಟರ್ ಹಾಗೂ ಮೂರು ಚಕ್ರಗಳ ವಾಹನಗಳಿಗೆ ನಿರ್ಬಂಧ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಮಂಗಳವಾರದಿಂದಲೇ ಆರಂಭವಾಗಿದೆ.

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಆರಂಭಗೊಳ್ಳುವ ಫ್ಲೈಓವರ್ ದೇವನಹಳ್ಳಿ ಟೋಲ್ ಗೇಟ್‌ವರೆಗೂ ಇದೆ. ಆದರೆ ಮಾರ್ಗ ಮಧ್ಯೆ ರೈಲ್ವೆ ಮೇಲ್ಸೇತುವೆ ಸೇರಿದಂತೆ ವಿವಿಧ ಜಂಕ್ಷನ್‌ಗಳಲ್ಲಿ ಫ್ಲೈಓವರ್ ಮುಕ್ತಾಯಗೊಂಡು ಮತ್ತೆ ಮುಂದುವರೆಯುತ್ತಿದೆ.

ಒಂದು ವಾರ ಪಥಶಿಸ್ತಿನ ಕುರಿತು ಜಾಗೃತಿ

ಒಂದು ವಾರ ಪಥಶಿಸ್ತಿನ ಕುರಿತು ಜಾಗೃತಿ

ಒಂದು ವಾರ ಪಥಶಿಸ್ತಿನ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ನಂತರದ ದಿನಗಳಲ್ಲಿ ಯಾವಾಗ ಬೇಕಾದರೂ ದಂಡ ವಿಧಿಸಲಿದ್ದಾರೆ. ಫ್ಲೈಓವರ್ ಆರಂಭದಲ್ಲಿ ಜಂಕ್ಷನ್‌ಗಳಲ್ಲಿ ಮೈಕ್‌ಗಳ ಮೂಲಕ ಘೋಷಣೆ ಮಾಡಲಾಗುತ್ತದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಎಷ್ಟು ದಂಡ ವಿಧಿಸಲು ಅವಕಾಶ

ಎಷ್ಟು ದಂಡ ವಿಧಿಸಲು ಅವಕಾಶ

ಪಥ ಶಿಸ್ತು ಉಲ್ಲಂಘನೆ ಮಾಡಿದರೆ ಈಗಾಗಲೇ 100 ರೂ ದಂಡ ವಿಧಿಸಲು ಅವಕಾಶ ಇದೆ. ಆದರೆ, ಅಷ್ಟೊಂದು ಪಾಲನೆ ಆಗುತ್ತಿರಲಿಲ್ಲ. ಆದರೆ ಇನ್ನುಮುಂದೆ ವಿಶೇಷವಾಗಿ ವಿಮಾನ ನಿಲ್ದಾಣ ಫ್ಲೈಓವರ್ ಮೇಲೆ ಪಥಶಿಸ್ತು ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಲು ತೀರ್ಮಾನಿಸಲಾಗಿದೆ.

ಯಾವ ವಾಹನಗಳು ಯಾವ ಪಥದಲ್ಲಿ ಚಲಿಸಬೇಕು?

ಯಾವ ವಾಹನಗಳು ಯಾವ ಪಥದಲ್ಲಿ ಚಲಿಸಬೇಕು?

ಮಲ್ಟಿ ಎಕ್ಸೆಲ್, ಲಾರಿ, ಸೇರಿದಂತೆ ಎಲ್ಲಾ ರೀತಿಯ ಸರಕು ವಾಹನಗಳನ್ನು ಪ್ಲೈಓವರ್ ಎಡಬದಿಯಲ್ಲೇ ಸಂಚರಿಸುವಂತೆ ಪಥಶಿಸ್ತು ಮೂಡಿಸಲಾಗುತ್ತದೆ. ಅದಕ್ಕಾಗಿ ಟೋಲ್ ಗೇಟ್‌ , ಫ್ಲೈಓವರ್ ಆರಂಭವಾಗುವ ಸ್ಥಳಗಳು, ಜಂಕ್ಷನ್‌ಗಳಲ್ಲಿ ಮೈಕ್‌ಗಳ ಮೂಲಕ ಘೋಷಣೆ ಮಾಡಲಾಗುತ್ತದೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ! ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

ದಂಡ ವಿಧಿಸುವ ಬಗೆ ಹೇಗೆ?

ದಂಡ ವಿಧಿಸುವ ಬಗೆ ಹೇಗೆ?

ಡೌನ್ ರಾಂಪ್ ಮತ್ತು ಜಂಕ್ಷನ್ ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ, ಸಿಸಿ ಕ್ಯಾಮರಾಗಳು ಸೇರಿದಂತೆ ಇನ್ನಿತರೆ ಕ್ರಮಗಳ ಮೂಲಕ ಪಥಶಿಸ್ತು ಉಲ್ಲಂಘಿಸುವ ವಾಹನ ಸವಾರರನ್ನು ಪತ್ತೆ ಮಾಡಿ ಅವರಿಗೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ಯಾವ ವಾಹನಗಳಿಗೆ ನಿರ್ಬಂಧ

ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ಯಾವ ವಾಹನಗಳಿಗೆ ನಿರ್ಬಂಧ

ಅಪಘಾತಗಳನ್ನು ನಿಯಂತ್ರಿಸಲು ಟ್ರ್ಯಾಕ್ಟರ್‌ಗಳು, ಆಟೋ ಸೇರಿದಂತೆ ಮೂರು ಚಕ್ರಗಳ ಸರಕು ವಾಹನಗಳಿಗೆ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧಿಸಿ ಕೆಳ ಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಹೆಬ್ಬಾಳದಿಂದ ಪ್ರಾರಂಭವಾಗಿ ಟೋಲ್ ಗೇಟ್‌ವರೆಗಿನ ಫ್ಲೈಓವರ್ ಮೇಲೆ ಈ ಕ್ರಮ ಪಾಲಿಸಲಾಗುತ್ತದೆ. ಸರಕು ವಾಹನಗಳು ಕಡ್ಡಾಯವಾಗಿ ರಸ್ತೆ ಎಡಬದಿಯಲ್ಲೇ ಚಲಿಸಬೇಕು.

English summary
Traffic police decided fine the drivers if they change lane while driving. This will implemented first in Airport flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X