ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಸಚಿವ ಶ್ರೀರಾಮುಲುಗೆ ಧೈರ್ಯ ಹೇಳಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜು. 16: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯೂ ಪ್ರತಿದಿನ ಶತಕ ದಾಟುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಜನತೆಗೆ ಧೈರ್ಯ ತುಂಬಬೇಕಾಗಿರುವ ರಾಜ್ಯ ಸರ್ಕಾರ ಕೈಚೆಲ್ಲಿದ ಹೇಳಿಕೆ ಕೊಡುತ್ತಿದೆ. ಇದು ಜನ ಸಮಾನ್ಯರ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಜವಾಬ್ದಾರಿಯುವ ಸ್ಥಾನದಲ್ಲಿದ್ದವರು ಮಾತನಾಡುತ್ತಿದ್ದಾರೆಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ಜನರಲ್ಲಿ ಧೈರ್ಯ ತುಂಬಬೇಕಾಗಿದ್ದ ಆರೋಗ್ಯ ಸಚಿವರೇ ಕೊರೊನಾ ವೈರಸ್‌ನಿಂದ ಮುಕ್ತ ಪಡೆಯಲು ದೇವರೇ ದಿಕ್ಕು ಎಂದಿರುವುದು ಹೆದರಿದವರ ಮೇಲೆ ಹಾವು ಎಸೆದಂತಾಗಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ಮಾತಿಗೆ ಇದೀಗ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಜೊತೆಗೆ ಕೊರೊನಾ ವೈರಸ್ ಸೋಂಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅಧಿಕಾರದಲ್ಲಿ ಏಕಿದ್ದೀರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದಾರೆ.

'ಕೊರೊನಾದಿಂದ ದೇವರೇ ಕಾಪಾಡಬೇಕು' ಹೇಳಿಕೆಗೆ ಶ್ರೀರಾಮುಲು ಸ್ಪಷ್ಟನೆ'ಕೊರೊನಾದಿಂದ ದೇವರೇ ಕಾಪಾಡಬೇಕು' ಹೇಳಿಕೆಗೆ ಶ್ರೀರಾಮುಲು ಸ್ಪಷ್ಟನೆ

ನೈತಿಕತೆ ಕಳೆದುಕೊಂಡಿದ್ದಾರೆ

ನೈತಿಕತೆ ಕಳೆದುಕೊಂಡಿದ್ದಾರೆ

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ, ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಸರ್ಕಾರ ತನ್ನೆಲ್ಲ ಪ್ರಯತ್ನಗಳನ್ನು ಮಾಡಿದ ಬಳಿಕವೂ ವಿಫಲವಾದಾಗ ದೇವರ ಮೊರೆ ಹೋಗುವುದು ಸರಿ. ಆದರೆ, ಸರ್ಕಾರದಲ್ಲಿ ಹಣ, ಕೈಯ್ಯಲ್ಲಿ ಅಧಿಕಾರ ಎಲ್ಲವೂ ಇದ್ದು ಯಾವುದೇ ಪ್ರಯತ್ನ ಮಾಡದೇ ಈ ರೀತಿ ಹೇಳಿಕೆ ಕೊಡುವ ಶ್ರೀರಾಮುಲು ಅವರು ರಾಜಿನಾಮೆ ಕೊಟ್ಟು ಹೋಗುವುದು ಉತ್ತಮ.

ಧೈರ್ಯ ತುಂಬಿದ ಸಿದ್ದರಾಮಯ್ಯ

ಧೈರ್ಯ ತುಂಬಿದ ಸಿದ್ದರಾಮಯ್ಯ

ಸೋಂಕು ನಿಯಂತ್ರಣಕ್ಕೆ ಶ್ರಮಿಸುವುದು ಸಚಿವರೂ ಸೇರಿದಂತೆ ಸರ್ಕಾರದ ಪ್ರಾಥಮಿಕ ಕರ್ತವ್ಯ. ಮೊದಲು‌ ನಮ್ಮ ಪ್ರಯತ್ನ ಮಾಡಬೇಕು. ಪರಿಹಾರ ಕಂಡು ಹಿಡಿಯಬೇಕು ಎಂದು ಸಿದ್ದರಾಮಯ್ಯ ಅವರು ಶ್ರೀರಾಮುಲು ಅವರಿಗೆ ಧೈರ್ಯ ಹೇಳಿದ್ದಾರೆ.

ಅಧಿಕಾರದಲ್ಲಿ ಜನರಿಗೆ ಧೈರ್ಯ ತುಂಬ ಬೇಕಾದವರು ಹೀಗೆ ಎದೆಗುಂದಬಾರದು. ಜನರಲ್ಲಿ ವಿಶ್ವಾಸ ತುಂಬುವಂತಿರಕಬೇಕು. ಇಲ್ಲದಿದ್ದರೆ ಅಧಿಕಾರ ತ್ಯಜಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ.

ಶ್ರೀರಾಮುಲು ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಲಿ: ಪೃಥ್ವಿ ರೆಡ್ಡಿಶ್ರೀರಾಮುಲು ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಲಿ: ಪೃಥ್ವಿ ರೆಡ್ಡಿ

ಶ್ರೀರಾಮುಲು ಹೇಳಿಕೆಗೆ ಆಕ್ಷೇಪ

ಶ್ರೀರಾಮುಲು ಹೇಳಿಕೆಗೆ ಆಕ್ಷೇಪ

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರವಲ್ಲ, ವಿರೋಧ ಪಕ್ಷಗಳ ಇತರ ನಾಯಕರು ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಆದರೆ ಆಡಳಿತ ಪಕ್ಷದ ನಾಯಕರು ಹಾಗೂ ಸಂಪುಟದ ಸದಸ್ಯರು ಶ್ರೀರಾಮುಲು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೇವರೇ ಕಾಪಾಡಬೇಕು ಎಂಬ ಹೇಳಿಕೆ ವಿಚಾರಕ್ಕೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ನಾವು ನೀವು ದೇವರಿಗೂ ಕೈ ಮುಗಿಯಲ್ಲವಾ? ರಾಮುಲು ಹೇಳಿಕೆ ವೈಭವೀಕರಣ ಮಾಡುವುದು ಬೇಡ. ಸಚಿವ ಶ್ರೀರಾಮುಲು ರಾಮುಲು ವಾಡಿಕೆ, ರೂಢಿಯಂತೆ ಹೇಳಿದ್ದಾರೆ ಹೊರತು ಬೇರೆ ಏನಿಲ್ಲ ಎಂದು ವಿ. ಸೋಮಣ್ಣ ಸಮರ್ಥಿಸಿಕೊಂಡಿದೆ. ಬಿಜೆಪಿ ಇತರ ನಾಯಕರೂ ಇದೇ ಮಾತನ್ನು ಹೇಳಿದ್ದಾರೆ.

ಹೇಳಿಕೆಗೆ ಬದ್ಧ ಎಂದ ಶ್ರೀರಾಮುಲು

ಹೇಳಿಕೆಗೆ ಬದ್ಧ ಎಂದ ಶ್ರೀರಾಮುಲು

ತೀವ್ರ ವಿರೋಧದ ಬಳಿಕವೂ ಆರೋಗ್ಯ ಸಚಿವ ಶ್ರೀರಾಮುಲು ಅವರು ತಮ್ಮ ಹೇಳಿಕೆಗೆ ಬದ್ಧವಿರುವುದಾಗಿ ಟ್ವೀಟ್ ಮಾಡಿದ್ದಾರೆ. 'ದೇವರು ದೊಡ್ಡವನು, ನಮ್ಮೆಲ್ಲ ಪ್ರಯತ್ನಗಳಿಗೆ ಅವನ ಕೃಪೆಯೂ ಇರಬೇಕು' ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮತ್ತು ಸೋಂಕಿತರ ಚಿಕಿತ್ಸೆಗೆ ಎಲ್ಲ ಅತ್ಯಗತ್ಯ ಕ್ರಮಗಳನ್ನು ಕೈಗೊಂಡಿದೆ.

ಮುಖ್ಯಮಂತ್ರಿಗಳ ಜತೆ ನಾವೆಲ್ಲರೂ ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ಬೆಳಗ್ಗೆ ನಾನು ಮಾತನಾಡುವಾಗ 'ದೇವರ ಕೃಪೆಯೂ ನಮ್ಮೆಲ್ಲರ ಮೇಲಿರಬೇಕು' ಎಂಬ ಮಾತನ್ನು ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು, ಹತಾಶೆಯಿಂದಲ್ಲ.

ಇಡೀ ಸರ್ಕಾರ ಸಮಸ್ತ ಜನರ ಪರವಾಗಿ ಕೆಲಸ ಮಾಡುತ್ತಿದೆ. ಯಾರಿಗೂ ಆತಂಕ ಬೇಡ. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೋಂಕು ನಿಯಂತ್ರಿಸುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಕೋರುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

English summary
Siddaramaiah has made a statement in Bengaluru saying that Health Minister Sriramulu has lost the morality of continuing ministerial position by saying that only God should protect from the coronavirus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X