ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಟಿಕೆಟ್ ನೀಡದಿದ್ದರೆ, ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ: ಶರತ್ ಬಚ್ಚೇಗೌಡ

|
Google Oneindia Kannada News

ಬೆಂಗಳೂರು, ನವೆಂಬರ್ 2: ಒಂದೊಮ್ಮೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಶರತ್ ಬಚ್ಚೇಗೌಡ ತಿಳಿಸಿದ್ದಾರೆ.

ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಕೊಂಡು ಕೋರ್ಟ್​ಗಳಿಗೆ ಅಲೆದಾಡಿದವರಿಗೆ ಇಂದು ವಂಚನೆಯಾಗಿದೆ.ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂದು ಟಿಕೆಟ್ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

ಹೊಸಕೋಟೆ ಉಪಚುನಾವಣೆ: ಶರತ್ ಬಚ್ಚೇಗೌಡ ಮಹತ್ವದ ಸ್ಪಷ್ಟನೆ ಹೊಸಕೋಟೆ ಉಪಚುನಾವಣೆ: ಶರತ್ ಬಚ್ಚೇಗೌಡ ಮಹತ್ವದ ಸ್ಪಷ್ಟನೆ

ಹೊಸಕೋಟೆ ತಾಲೂಕಿನ ಸ್ವಾಭಿಮಾನಕ್ಕಾಗಿ ಮತ್ತು ಇಲ್ಲಿನ ಜನರ ಆಶ್ವಾಸನೆ ಪೂರೈಸಲು ನಾನು ಚುನಾವಣೆಗೆ ಸ್ಪರ್ಧಿಸಲೇ ಬೇಕಾಗಿದೆ. ನನ್ನ ಈ ನಿಲುವು ಬಿಜೆಪಿ ಮುಖಂಡರ ವಿರುದ್ದ ಅಲ್ಲ ಎಂದು ಶರತ್ ಸ್ಪಷ್ಟನೆಯನ್ನು ನೀಡಿದ್ದಾರೆ.

If the BJP Does Not Issue A Ticket I Will Contest As A Independent Candidate

ಪಕ್ಷವನ್ನು ನಮ್ಮ ಕಾರ್ಯಕರ್ತರು ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದರು, ಈ ಕ್ಷೇತ್ರದಲ್ಲಿ 3 ಸಾವಿರ ಇದ್ದ ಬಿಜೆಪಿ ಮತಗಳನ್ನು ಶಾಸಕರನ್ನು ಗೆಲ್ಲಿಸುವ ಹಂತಕ್ಕೆ ತಂದು ನಿಲ್ಲಿಸಲಾಗಿದೆ.

ಇದೇ ವೇಳೆ ನನ್ನ ತಂದೆ ಮಗನ ಪರ ಬರಲ್ಲ, ಅವರ ಬದಲು ನೀವೇ ನಿಂತು ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕ್ಷೇತ್ರದ ಜನರಿಗೆ ಶರತ್ ಬಚ್ಚೇಗೌಡ ಕರೆ ನೀಡಿದ್ದಾರೆ.'ಉಪ ಚುನಾವಣೆಗೆ ನೂರಕ್ಕೆ ನೂರು ನಾನೇ ಅಭ್ಯರ್ಥಿ. ಇಂದಿಗೂ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಹೊಸ ಚಿಹ್ನೆ ಕ್ಷೇತ್ರಕ್ಕೆ ಬರುತ್ತದೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಈ ಬಾರಿ ನನ್ನ ಪರ ಕೆಲಸ ಮಾಡಿ. ಗ್ರಾಮ ಮನೆ ಹೊಲ ತೋಟಗಳಿಗೆ ಹೋಗಿ ಮತದಾರರಿಗೆ ಹೊಸ ಚಿಹ್ನೆ ಗುರುತು ಮಾಡಿಕೊಡಿ. ಪಕ್ಷ ಬಿಟ್ಟು ಪ್ರಚಾರ ಮಾಡುವಾಗ ನನ್ನ ತಂದೆ ಬಚ್ಚೇಗೌಡರು ನನ್ನ ಪರ ನಿಲ್ಲಲು ಸಾಧ್ಯವಾಗಲ್ಲ. ನೀವೇ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಮತ್ತು ಜನರಿಗೆ ಕರೆ ನೀಡಿದ್ದಾರೆ.

English summary
Youth BJP leader Sharath Bachegowda Says that If BJP Will not Give Party Ticket I will Contest As a Independent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X