ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ತಿಂಗಳಿಗೆ ಬೇಕಾದಷ್ಟು ಮಾತ್ರ ಕಾವೇರಿ ನೀರು ಲಭ್ಯ: ಡಿಸಿಎಂ ಪರಮೇಶ್ವರ್

|
Google Oneindia Kannada News

ಬೆಂಗಳೂರು, ಜುಲೈ 6: ಕಾವೇರಿ ಜಲಾಯನ ಪ್ರದೇಶದಲ್ಲಿ ಮುಂಗಾರು ಮಳೆಯಾಗದೇ ಇದ್ದರೆ, ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗಬಹುದು ಎಂದು ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಹೇಳಿದ್ದಾರೆ.

ನಾವು ಸಂಪೂರ್ಣವಾಗಿ ಮಳೆಯನ್ನೇ ನಂಬಿದ್ದೆವೆ, ಬೇರೆ ಪರ್ಯಾಯ ಮಾರ್ಗಗಳೇ ನಮ್ಮಲ್ಲಿ ಇಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ, ನಗರಕ್ಕೆ ಕಾವೇರಿ ನೀರು ಸರಬರಾಜು ಸಮಸ್ಯೆ ಆಗಬಹುದು ಎಂದು ಡಿಸಿಎಂ ಹೇಳಿದ್ದಾರೆ.

'ಬೆಂಗಳೂರಿಗೆ ಶರಾವತಿ ನದಿಯಿಂದ ನೀರು ತರುವ ಯೋಜನೆ ಇಲ್ಲ''ಬೆಂಗಳೂರಿಗೆ ಶರಾವತಿ ನದಿಯಿಂದ ನೀರು ತರುವ ಯೋಜನೆ ಇಲ್ಲ'

ಕೆ ಆರ್ ಎಸ್ ನಲ್ಲಿ ಸದ್ಯ ಎಂಬತ್ತು ಅಡಿ ನೀರಿದೆ. ಈ ನೀರು, ಬೆಂಗಳೂರು ನಗರಕ್ಕೆ ಒಂದು ತಿಂಗಳು ಸರಬರಾಜು ಮಾಡಲು ಸಾಕಾಗುತ್ತದೆ. ಇದಾದ ನಂತರದ್ದೇ ಗಂಭೀರ ಸಮಸ್ಯೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

If rain not comes only for one month, we can able to give Cauvery water to Bengaluru

ಬೇರೆ ಎಲ್ಲಿಂದ ಬೆಂಗಳೂರಿಗೆ ನೀರು ತರಬಹುದು ಎಂದು ನೋಡುತ್ತಿದ್ದೇವೆ. ಲಿಂಗನಮಕ್ಕಿ ಜಲಾಶಯದಿಂದ ನೀರು ತರುವುದು ಅನಿವಾರ್ಯ ಎನ್ನುವ ಸ್ಥಿತಿಯಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಇಷ್ಟು ವರ್ಷದಲ್ಲೇ ಕೇಂದ್ರದ ಅತ್ಯಂತ ಕೆಟ್ಟ ಬಜೆಟ್ ಇದು: ಪರಮೇಶ್ವರ್ ಇಷ್ಟು ವರ್ಷದಲ್ಲೇ ಕೇಂದ್ರದ ಅತ್ಯಂತ ಕೆಟ್ಟ ಬಜೆಟ್ ಇದು: ಪರಮೇಶ್ವರ್

ಶರಾವತಿ ನೀರನ್ನು ಬೆಂಗಳೂರಿಗೆ ತರುವ ವಿಚಾರದಲ್ಲಿ ಹಲವು ವಿರೋಧಗಳು ಇವೆ ಎನ್ನುವುದನ್ನು ನಾವು ಅರಿತಿದ್ದೇವೆ. ಆದರೆ, ಇದರಿಂದ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಅರಬ್ಬಿ ಸಮುದ್ರ ಸೇರುತ್ತಿರುವ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಆದರೆ, ಪರಮೇಶ್ವರ್ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡುತ್ತಿದ್ದಾರೆ.

English summary
If rain not comes only for one month, we can able to give Cauvery water to Bengaluru, DCM Dr. Parameshwar shocking statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X