ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಸಮಗೊಳ್ಳುವ ಹಂತದಲ್ಲಿದೆ ಬೆಂಗಳೂರಿನ 91 ವರ್ಷ ಹಳೆಯ ಸರ್ಕಾರಿ ಶಾಲೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01: 1930ರಲ್ಲಿ ಶುರುವಾಗಿದ್ದ ಅತ್ಯಂತ ಹಳೆಯ ಸರ್ಕಾರಿ ಶಾಲೆಯೊಂದು ನೆಲಸಮಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಈ ಕುರಿತು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಸರ್ಕಾರದ ವತಿಯಿಂದ ಯಾವುದೇ ವೆಚ್ಚಗಳೂ ಇಲ್ಲದೆ ಶಾಲೆಯನ್ನು ಪುನಃ ಸ್ಥಾಪಿಸಲು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಚ್) ಮುಂದೆ ಬಂದಿತ್ತು. ಆದರೆ, ಪ್ರಬಲ ರಿಯಲ್ ಎಸ್ಟೇಟ್ ಲಾಬಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆ

ಈ ಮೊದಲು ಈ ಶಾಲೆಯಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದರು. ಆದರೀಗ ಶಾಲೆಯಲ್ಲಿ ಕೇವಲ 9 ವಿದ್ಯಾರ್ಥಿಗಳಿದ್ದು, ಓರ್ವ ಶಿಕ್ಷಕರು ಮಾತ್ರ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.

If Authorities Continue To Neglect 91-Year-Old Bengaluru Govt School Faces Demolition

1930ರಲ್ಲಿ ಪ್ರಾರಂಭವಾದ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆಯು ವಿಧಾನಸೌಧದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಅಶೋಕ್ ನಗರದಲ್ಲಿ ಕಮಿಸ್ಸರಿಯಟ್ ರಸ್ತೆಯಲ್ಲಿದೆ.

ಶಾಲೆಯು 15,500 ಚದರ ಅಡಿ ಭೂಮಿಯಲ್ಲಿದ್ದು, ಈ ಭೂಮಿಯ ಮೌಲ್ಯವು ಕೋಟ್ಯಾಂತರ ರೂಪಾಯಿಗಳಿವೆ. ಹೀಗಾಗಿ ಈ ಭೂಮಿಯ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣುಬಿದ್ದಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಶಾಲೆ ಪುನಃಸ್ಥಾಪಿಸುವ ಕುರಿತು ಸರ್ಕಾರದಿಂದಲೂ ಕೂಡ ಯಾವುದೇ ರೀತಿಯ ಪ್ರಗತಿಗಳು ಕಂಡು ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

1930 ರಲ್ಲಿ ಚಾಮರಾಜಪೇಟೆಯಲ್ಲಿ ಪ್ರಾರಂಭವಾದ ಫೋರ್ಟ್ ಹೈಸ್ಕೂಲ್ ಅನ್ನು ಇತ್ತೀಚೆಗೆ ಪುನಃಸ್ಥಾಪಿಸಲಾಗಿತ್ತು. ಅಶೋಕನಗರ ಶಾಲೆಯನ್ನೂ ಕೂಡ ಪುನಃಸ್ಥಾಪನೆ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಸಂಪರ್ಕಿಸಲಾಗಿತ್ತು. ಈ ಕುರಿತು ರೂ. 27 ಲಕ್ಷ ಅಂದಾಜು ಮೊತ್ತದ ವಿಸ್ತೃತ ಯೋಜನಾ ವರದಿಯನ್ನೂ ಸಲ್ಲಿಸಲಾಗಿತ್ತು.

ರೋಟರಿ ಕ್ಲಬ್ ಸಿಎಸ್ಆರ್ ನಿಧಿಯ ಮೂಲಕ ಹಣವನ್ನು ನೀಡಲು ಮುಂದೆ ಬಂದಿತ್ತು, ಆದರೆ ಸರ್ಕಾರದ ವತಿಯಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ವಿದ್ಯಾರ್ಥಿಗಳ ಸ್ಥಳಾಂತಕ ಕುರಿತು ಪ್ರತಿಕ್ರಿಯೆ ನೀಡಿರುವ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್ ಅವರು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸವುದಕ್ಕೂ ಮುನ್ನ ಪೋಷಕರ ಅಭಿಪ್ರಾಯ ಪಡೆಯಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

English summary
If authorities continue to neglect the Government Tamil Higher Primary School at Ashoknagar, which is one of the oldest buildings in Bengaluru, it could be done and dusted soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X