ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರಿಗೆ ಕೈ ಮುಗಿದು ದೇವರನ್ನೆ ಎಗರಿಸಿದ ಭೂಪ !

Array

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ದೇವರಿಗೆ ಮುಖ ಕಾಣದಂತೆ ಹೆಲ್ಮೆಟ್ ಧರಿಸಿದ್ದ ಖದೀಮ, ದೇವರಿಗೆ ಕೈ ಮುಗಿದು ಕೊನೆಗೆ ಪುರಾತನ ಪಂಚ ಲೋಹ ವಿಗ್ರಹವನ್ನು ಕದ್ದು ಪರಾರಿಯಾಗಿದ್ದಾನೆ. ಘಟನೆ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ವಿಗ್ರಹ ಕಳ್ಳನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

Recommended Video

ದೇವರಿಗೆ ಕೈ ಮುಗಿದು , ದೇವರನ್ನೇ ಎಗರಿಸಿದ ಭೂಪ | Oneindia Kannada

ಬಂಧಿತ ಆರೋಪಿ ಹೆಸರು ರಘು. ಚಿಕ್ಕಜಾಲ ಸಮೀಪದ ಹುಣಸಮಾರನಹಳ್ಳಿಯಲ್ಲಿ ಗ್ರಾಮದಲ್ಲಿ ಮಠವಿದ್ದು, ಅದರಲ್ಲಿ ನೂರೈವತ್ತು ವರ್ಷದ ಪುರಾತನ ವಿಗ್ರಹವಿತ್ತು. ಪಂಚ ಲೋಹದಿಂದ ಕೂಡಿದ ಈ ವಿಗ್ರಹ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆ ಬಾಳುತ್ತದೆ. ರೈಸ್ ಪುಲ್ಲಿಂಗ್ ದಂಧೆಕೋರರ ಕೈಗೆ ಇಂತಹ ವಿಗ್ರಹ ಸಿಕ್ಕಿದ್ದಲ್ಲಿ ನೂರಾರು ನೋಟಿ ವ್ಯಯಿಸುತ್ತಾರೆ.

ದರೋಡೆಗೆ ಸಹಕಾರ ನೀಡಿದ ಪೊಲೀಸ್ ಕಾನ್ಸ್ಟೇಬಲ್ ಅಮಾನತು !ದರೋಡೆಗೆ ಸಹಕಾರ ನೀಡಿದ ಪೊಲೀಸ್ ಕಾನ್ಸ್ಟೇಬಲ್ ಅಮಾನತು !

ಈ ಬಗ್ಗೆ ತಿಳಿದಿದ್ದ ರಘು, ನವೆಂಬರ್ 25 ರಂದು ಹುಣಸಮಾರನಹಳ್ಳಿಯಲ್ಲಿದ್ದ ಚಂದ್ರಮೌಳೇಶ್ವರ ಮಠಕ್ಕೆ ಹೋಗಿದ್ದಾನೆ. ಯಾರಿಗೂ ಮುಖ ಕಾಣದಂತೆ ಹೆಲ್ಮೆಟ್ ಧರಿಸಿದ್ದಾನೆ. ಮೊದಲು ಪುಟ್ಟ ದೇಗುಲಕ್ಕೆ ಹೋಗಿ ಕೈ ಮುಗಿಯುವ ಕಳ್ಳ ಮತ್ತೆ ಗರ್ಭ ಗುಡಿಗೆ ಹೋಗಿ ದೇವರ ವಿಗ್ರಹ ಕದ್ದು ಎಸ್ಕೇಪ್ ಆಗಿದ್ದಾನೆ.

 Idol of God theft; man arrested by chikkajala police

ಮಠದ ದೇಗುಲದಲ್ಲಿದ್ದ ಸುಮಾರು ನಾಲ್ಕು ಅಡಿ ಎತ್ತರದ ಚಂದ್ರ ಮೌಳೇಶ್ವರ ವಿಗ್ರಹ ಕದ್ದು ಹೊರಗೆ ಬಂದಿದ್ದು, ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಹೆಲ್ಮೆಟ್ ಧರಿಸಿ ಒಳಗೆ ಹೋಗಿ ವಿಗ್ರಹ ಕದ್ದು ಹೊರ ಹೋಗುತ್ತಿರುವ ದೃಶ್ಯ ದೇಗುಲದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ವಿಗ್ರಹ ಕಳ್ಳತನ ಆಗಿರುವ ಬಗ್ಗೆ ಶ್ರೀ ಗುರು ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕದ್ದಿದ್ದ ಪಂಚ ಲೋಹ ವಿಗ್ರಹವನ್ನು ರೈಸ್ ಪುಲ್ಲಿಂಗ್ ದಂಧೆ ಮಾಡುವರಿಗೆ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿ ರಘು ನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಾರಲು ಯತ್ನಿಸಿದ್ದ ಕದ್ದ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ.

 Idol of God theft; man arrested by chikkajala police

ಪುರಾತನ ಕಾಲದ ಪಂಚಲೋಹ ವಿಗ್ರಹದಲ್ಲಿ ನಿಗೂಢ ಶಕ್ತಿ ಇರುತ್ತದೆ. . ಇದಕ್ಕೆ ನಾಸಾ ವಿಜ್ಞಾನಿಗಳೇ ಹಣ ಕೊಡುತ್ತಾರೆ ಎಂದು ನಂಬಿಸಿ ಇಂತಹ ವಿಗ್ರಹವನ್ನು ಮಾರಾಟ ಮಾಡಲು ಯತ್ನಿಸುತ್ತಾರೆ. ಇದಕ್ಕೆ ಸಂಬಂಧಿಸಿದ ನಕಲಿ ವೆಬ್ ತಾಣ ಸೃಷ್ಟಿಸಿ, ವಿಗ್ರಹವನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದೇವೆ. ರಿಸರ್ವ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಕಡತವಿದೆ.

ಈ ಕಡತ ವಿಲೇವಾರಿಗೆ ದುಡ್ಡು ಬೇಕಿದೆ ಎಂದು ನಂಬಿಸಿಯೂ ಜನರಿಗೆ ಟೋಪಿ ಹಾಕುತ್ತಾರೆ. ಇದನ್ನೇ ರೈಸ್ ಪುಲ್ಲಿಂಗ್ ದಂಧೆ ಎಂದು ಕರೆಯುತ್ತಾರೆ. ಕೆಲವು ಪ್ರಸಂಗದಲ್ಲಿ ಹಣ ಕೊಟ್ಟು ವಿಗ್ರಹ ಪಡೆಯುವ ವೇಳೆ ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿ ಹಣ ಮತ್ತು ವಿಗ್ರಹ ಕದ್ದು ಪರಾರಿಯಾಗುತ್ತಾರೆ. ಆದರೆ, ಆರೋಪಿ ರಘು ನೂರೈವತ್ತು ವರ್ಷದ ವಿಗ್ರಹವನ್ನು ಇದೇ ದಂಧೆಗಾಗಿ ಕದ್ದಿದ್ದ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾನೆ.

English summary
A thief has stolen an idol of God from a hundred and fifty years old and was caught by the chikkajala police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X