ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕು: ಬೆಡ್ ಸಿಗದೇ ರೈಲ್ವೇ ಪಿಎಸ್ಐ ಸಾವು

|
Google Oneindia Kannada News

ಬೆಂಗಳೂರು, ಮೇ. 12: ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ನಿಯಮ ಕಟ್ಟು ನಿಟ್ಟಾಗಿ ಜಾರಿಗೊಳಿಸುವವರು ಪೊಲೀಸರು. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಜರುಗಿಸುವವರು ಪೊಲೀಸರು. ಇದರ ನಡುವೆ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಬೇಕು. ತಮ್ಮ ಜೀವ ಪಣಕ್ಕೆ ಇಟ್ಟು ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ರಾಜ್ಯದಲ್ಲಿ ಬೆಡ್ ಸಿಗದೇ ಜೀವ ಕಳೆದುಕೊಳ್ಳುತ್ತಿದ್ದಾರೆ.

ಯಶವಂತಪುರ ರೈಲ್ವೆ ವಿಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ ಅವರು, ಮಂಗಳವಾರ ರಾತ್ರಿ ಐಸಿಯು ಬೆಡ್ ಸಿಗದೆ ಸಾವನ್ನಪ್ಪಿದ್ದಾರೆ. 59 ವರ್ಷ ವಯಸ್ಸಿನ ಗುರುಮೂರ್ತಿ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತು.

ICU Bed Scarcity: Railway PSI dies due coronavirus

Recommended Video

ಜನರನ್ನು ಒಳಗೆ ಕರೆದು ಬಾಗಿಲು ಹಾಕಿದ ಸೀರೆ ಅಂಗಡಿ ಮಾಲೀಕ | Oneindia Kannada

ಮಂಗಳವಾರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವೆಂಟಿಲೇಟರ್ ಐಸಿಯು ಬೆಡ್‌ನ ಅಗತ್ಯ ಬಿದ್ದಿದೆ. ಗುರುಮೂರ್ತಿ ಗೆಳೆಯರು, ಇಲಾಖೆ ಅಧಿಕಾರಿಗಳೂ ಎಷ್ಟೇ ಸಾಹಸ ಮಾಡಿದರೂ ಗುರುಮೂರ್ತಿ ಅವರಿಗೆ ವೆಂಟಿಲೇಟರ್ ಲಭ್ಯವಾಗಲಿಲ್ಲ. ಮಂಗಳವಾರ ರಾತ್ರಿ 9 ಗಂಟೆಗೆ ಬೆಡ್ ಸಿಗುವಷ್ಟರಲ್ಲಿ ಗುರುಮೂರ್ತಿ ಸಾವನ್ನಪ್ಪಿದ್ದಾರೆ. ಗುರುಮೂರ್ತಿ ಅವರ ಸಾವಿನ ಬಗ್ಗೆ ಬೆಂಗಳೂರು ನಗರ ರೈಲ್ವೆ ಎಸ್ಪಿ ಘಟಕದ ವತಿಯಿಂದ ಸಂತಾಪ ಸೂಚಿಸಿದ್ದಾರೆ.

English summary
ICU Bed Scarcity: Railway PSI died due corona virus in Bengaluru Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X