ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನ್ಸೂನ್ ಮಾರುತಗಳ ಅಸ್ಥಿರತೆ ಕುರಿತು ಕಾರ್ಯಾಗಾರ

ಮಾನ್ಸೂನ್ ಮಾರುತಗಳಲ್ಲಿ ಅಸ್ಥಿರತೆ ಕುರಿತು ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಸಂಸ್ಥೆಯು ಸುಲೋಚನಾ ಗಾದ್ಗಿಲ್ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಿದೆ.

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 25: ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಸಂಸ್ಥೆ (ICTS-TIFR) ಪ್ರತಿ ತಿಂಗಳು ಆಯೋಜಿಸುವ 'ಕಾಪಿ ವಿತ್ ಕ್ಯೂರಿಯಾಸಿಟಿ' ಕಾರ್ಯಕ್ರಮದ ಭಾಗವಾಗಿ 'ಮಾನ್ಸೂನ್ ಮಾರುತಗಳಲ್ಲಿ ಅಸ್ಥಿರತೆ' ಕುರಿತು ಈ ತಿಂಗಳು ಸುಲೋಚನಾ ಗಾದ್ಗಿಲ್ ಅವರ ಉಪನ್ಯಾಸವನ್ನು ಏರ್ಪಡಿಸಿದೆ.

ಜವಹರ್ ಲಾಲ್ ನೆಹರೂ ತಾರಾಲಯ ಮತ್ತು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಲಾಯ ಸಹಯೋಗದಲ್ಲಿ ಸಂಸ್ಥೆ ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.

ICTS organised 'Vagaries of the Mansoon' a monthly public lecture

ಸುಲೋಚನಾ ಗಾದ್ಗಿಲ್ ಅವರು ಪ್ರಖ್ಯಾತ ಪವನ ತಜ್ಞರಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ವಾತಾವರಣ ಸಾಗರ ವಿಜ್ಞಾನ ವಿಭಾಗದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಮಾನ್ಸೂನ್ ಮಾರುತಗಳು ಪ್ರತಿ ವರ್ಷ ದೇಶವನ್ನು ಪ್ರವೇಶಿಸುತ್ತಿವೆ. ಆದರೆ ವರ್ಷದಿಂದ ವರ್ಷಕ್ಕೆ ಮಾರುತಗಳ ಅವುಗಳ ಪ್ರಭಾವ ತೀರಾ ಭಿನ್ನವಾಗಿರುತ್ತದೆ. ಬೇಸಿಗೆಯಲ್ಲೂ ಇದೇ ಪ್ರಭಾವ ಇರುತ್ತದೆ.

ಈ ಸಮಸ್ಯೆ ಕೇವಲ ರೈತರಷ್ಟೇ ಅಲ್ಲದೆ ಆರ್ಥಿಕ ತಜ್ಞರು, ವಾತಾವರಣ ತಜ್ಞರನ್ನೂ ಕಾಡುತ್ತಿದೆ. ಮಾನ್ಸೂನ್ ಮಾರುತಗಳಲ್ಲಿ ಆಗುತ್ತಿರುವ ಈ ಬದಲಾವಣೆ ಕುರಿತು ಗಾದ್ಗಿಲ್ ಅವರು ಉಪನ್ಯಾಸ ನೀಡಲಿದ್ದಾರೆ.

ಶನಿವಾರ (ನವೆಂಬರ್ 26) ಸಂಜೆ 4 ರಿಂದ 6 ಗಂಟೆ ವರೆಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ https://www.icts.res.in/outreach/kaapi-with-kuriosity ವೆಬ್ ಸೈಟ್ ಸಂಪರ್ಕಿಸಿ.

English summary
'Vagaries of the Mansoon' is a monthly public lecture organised by the International Centre for Theoretical Sciences (ICTS-TIFR), in collaboration with the Jawaharlal Nehru Planetarium and the Visvesvaraya Industrial and Technological Museum, on November 26. in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X