ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ICSE ಫಲಿತಾಂಶ: ಬೆಂಗಳೂರಿನ ಬಾಲಕಿ ವಿಭಾ ದೇಶಕ್ಕೆ ಪ್ರಥಮ

|
Google Oneindia Kannada News

ಬೆಂಗಳೂರು, ಮೇ 8 : ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಂಗಳೂರಿನ ಮಲ್ಯ ಅದಿತಿ ಶಾಲೆಯ ವಿಭಾ ಸ್ವಾಮಿನಾಥನ್ ದೇಶದಲ್ಲೇ ಅಗ್ರಸ್ಥಾನ ಗಳಿಸಿದ್ದಾರೆ.

ವಿಭಾ ಶೇಕಡಾ ನೂರಕ್ಕೆ ನೂರರಷ್ಟು ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾಳೆ. ಕೋಲ್ಕತ್ತದ ದೇವಾಂಗ್ ಅಗರ್‌ವಾಲ್ ಕೂಡ 100 ರಷ್ಟು ಅಂಕಗಳಿಸಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಅದೇ ಶಾಲೆಯ ಇನ್ನಿಬ್ಬರು ವಿದ್ಯಾರ್ಥಿಗಳು ಕೂಡ ಎರಡು ಹಾಗೂ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ICSE, ISC ಪರೀಕ್ಷೆ ಫಲಿತಾಂಶ, 98.54% ತೇರ್ಗಡೆ ICSE, ISC ಪರೀಕ್ಷೆ ಫಲಿತಾಂಶ, 98.54% ತೇರ್ಗಡೆ

ಫಜಲ್ ನಯೀರ್ ಎರಡನೇ ಸ್ಥಾನವನ್ನು ಗಳಿಸಿದರೆ, ದೀಕ್ಷಾ ಬಾಲಾಜಿ ವಿಶ್ವನಾಥನ್ ಹಾಗೂ ಮಿಹಿರ್ ರಾಜೇಂದ್ರ ರಾಜಮಾನೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ICSE results 2019 ICSE Bengaluru girl tops

10ನೇ ತರಗತಿಯಲ್ಲಿ ಶ್ರೀ ವಾಣಿ ಪಬ್ಲಿಕ್ ಶಾಲೆಯ ಸಾಧನಾ 99.20 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟು 60 ವಿಷಯಗಳಿಗೆ ಐಸಿಎಸ್‌ಇ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 22 ಭಾರತೀಯ ಭಾಷೆ ಹಾಗೂ 10 ವಿದೇಶಿ ಭಾಷೆಗಳು ಹಾಗೂ ಎರಡು ಶಾಸ್ತ್ರೀಯ ಭಾಷೆಗಳಿದ್ದವು.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ

ಇಂಗ್ಲಿಷ್‌ ಹಾಗೂ ಇತರೆ ಮೂರು ಆಯ್ದ ಉತ್ತಮ ವಿಷಯಗಳಲ್ಲಿ ಇವರು 400 ಕ್ಕೆ 400 ಅಂಕಗಳಿಸಿ ಶೇ. 100ರಷ್ಟು ಅಂಕಗಳಿಸಿದ್ದಾಳೆ. ವಿಭಾ ಸ್ವಾಮಿನಾಥನ್ ಬೆಂಗಳೂರಿನ ಮಲ್ಯ ಅದಿತಿ ಶಾಲೆಯ ವಿದ್ಯಾರ್ಥಿನಿ.

ಕೋಲ್ಕತ್ತಾದ ದೇವಾಂಗ ಕುಮಾರ್‌ ಅಗರ್ವಾಲ್‌ ಕೂಡ 100ಕ್ಕೂ 100 ಪ್ರತಿಶತ ಅಂಕ ಪಡೆದಿದ್ದಾರೆ. ಈ ಇಬ್ಬರೂ ಐಎಸ್‌ಸಿ ಪರೀಕ್ಷೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಐಎಸ್‌ಸಿ ಬೋರ್ಡ್‌ 12ನೇ ತರಗತಿ ಪರೀಕ್ಷೆಯಲ್ಲಿ ಇದುವರೆಗೂ ವಿದ್ಯಾರ್ಥಿಗಳು ಶೇ.100 ಸ್ಕೋರ್‌ ಮಾಡಿರುವುದು ಇದೇ ಮೊದಲು.

ರಾಜ್ಯದ ಐವರು ಟಾಪರ್‌ಗಳ ವಿವರ

1. ವಿ.ಸಾಧನಾ - ಶೇ. 99.20
2. ನಿತಿನ್ ಅರವಿಂದ್ ಬೀರೂರು - ಶೇ. 99.00
3. ಅನಘಾ ಎಚ್‌.ಸಿ - ಶೇ. 99.00
4. ಸನಾ ದತ್ - ಶೇ. 99.00
5. ನಿತ್ಯಾ ಅಗರ್‌ವಾಲ್ - ಶೇ. 99.00

ಸಿಬಿಎಸ್‌ಇ 10ನೇ ತರಗತಿ: ಶೇ.91.1ರಷ್ಟು ಫಲಿತಾಂಶಸಿಬಿಎಸ್‌ಇ 10ನೇ ತರಗತಿ: ಶೇ.91.1ರಷ್ಟು ಫಲಿತಾಂಶ

ಐಸಿಎಸ್‌ಇ ಪರೀಕ್ಷೆಯಲ್ಲಿ ರಾಜ್ಯದ 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಶೇ. 99.77 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 99.89 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರೆ, ಬಾಲಕರು ಶೇ. 99.65 ರಷ್ಟು ತೇರ್ಗಡೆ ಹೊಂದಿದ್ದಾರೆ.

English summary
Vibha Swaminathan from Bengaluru and Dewang Kumar Agarwal from Kolkata have achieved a perfect 100percent aggregate in their Class XII exams conducted by the Council for Indian School Certificate Examination (CISCE) on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X