• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸಾಮ್ರಾಟ್ ರೆಸ್ಟೋರೆಂಟ್‌ಗೆ ಸೋಮವಾರ ಕೊನೆಯ ದಿನ

|
Google Oneindia Kannada News

ಬೆಂಗಳೂರು, ಸೆ. 25: ಉದ್ಯಾನನಗರಿಯಲ್ಲಿ ಕೆಲ ಐಕಾನಿಕ್ ಹೋಟೆಲ್‌ಗಳ ಪೈಕಿ ಒಂದೆಂದು ಗುರುತಿಸಲಾಗುವ ಸಾಮ್ರಾಟ್ ರೆಸ್ಟೋರೆಂಟ್ ಇನ್ಮುಂದೆ ಕಾಣಸಿಗುವುದಿಲ್ಲ. ಹೋಟೆಲ್ ಚಾಳುಕ್ಯದಲ್ಲಿರುವ ಸಾಮ್ರಾಟ್ ರೆಸ್ಟೋರೆಂಟ್ ನಾಳೆ ಸೆಪ್ಟೆಂಬರ್ 26ರಂದು ಬಾಗಿಲು ಬಂದ್ ಮಾಡಲಿದೆ.

ರೇಸ್‌ಕೋರ್ಸ್ ರಸ್ತೆಯ ತುದಿಯಲ್ಲಿರುವ ಹಾಗೂ ಪ್ಲಾನಿಟೋರಿಯಂ ಮತ್ತು ವಿಧಾನಸೌಧಕ್ಕೆ ಹತ್ತಿರದಲ್ಲೇ ಇರುವ ಸಾಮ್ರಾಟ್ ರೆಸ್ಟೋರೆಂಟ್ ಹಲವು ದಶಕಗಳಿಂದ ಬೆಂಗಳೂರಿಗರ ಅನೇಕರಿಗೆ ನೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಒಂದೆನಿಸಿದೆ. ಇಲ್ಲಿಯ ದಕ್ಷಿಣ ಭಾರತೀಯ ತಿನಿಸುಗಳು ಜನಪ್ರಿಯವೆನಿಸಿವೆ. ಮಸಾಲದಸೆ, ಇಡ್ಲಿ ಇಲ್ಲಿ ಫೇಮಸ್. ಹಳೆಯ ತಲೆಮಾರಿನ ಜನರ ನೆಚ್ಚಿನ ತಿಂಡಿ ಅಡ್ಡಾ ಇದು.

'ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್' ಕೃತಿ ಬಿಡುಗಡೆ ಮಾಡಿದ ಸಿದ್ದರಾಮಯ್ಯ'ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್' ಕೃತಿ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಡಾ. ರಾಜಕುಮಾರ್, ಪುನೀತ್ ರಾಜಕುಮಾರ್ ಮೊದಲಾದ ಸಿನಿ ನಟರು ಇಲ್ಲಿಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಅನೇಕ ರಾಜಕಾರಣಿಗಳು, ಉದ್ಯಮಿಗಳೂ ಇಲ್ಲಿ ನಿಯಮಿತವಾಗಿ ಬಂದು ಆಹಾರ ಸೇವಿಸುತ್ತಾರೆ. ಇದೀಗ ಅದೆಲ್ಲಾ ಹಳೆಯ ನೆನಪಾಗಲಿದೆ.

ಸೋಮವಾರ ಹೋಟೆಲ್ ಚಾಳುಕ್ಯದಲ್ಲಿ ಸಾಮ್ರಾಟ್ ರೆಸ್ಟೋರೆಂಟ್ ಕೊನೆಯ ಬಾರಿ ಬಾಗಿಲು ತೆರೆಯುತ್ತದೆ. ಆದರೆ, ಸಾಮ್ರಾಟ್ ರೆಸ್ಟೋರೆಂಟ್ ಖಾಯಂ ಆಗಿ ಬಂದ್ ಆಗುತ್ತಿಲ್ಲ. ಹೋಟೆಲ್ ಚಾಳುಕ್ಯ ಕಟ್ಟಡದಿಂದ ಮಾತ್ರ ಇದು ಬಂದ್ ಆಗುತ್ತದೆ. ಬೇರೆಡೆಗೆ ಇದು ಸ್ಥಳಾಂತರವಾಗುತ್ತಿದೆ. ಹೊಸ ಸ್ಥಳ ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ.

ಸಾಮ್ರಾಟ್ ರೆಸ್ಟೋರೆಂಟ್ ಬಾಗಿಲು ಮುಚ್ಚಲಿರುವ ಸುದ್ದಿ ಹರಿದಾಡುತ್ತಿದ್ದಂತೆಯೇ ಅನೇಕ ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಕೂಡ ಸಾಮ್ರಾಟ್ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

"ಇವತ್ತು ಬೆಳಗ್ಗೆ ನಾವು ಚಾಳುಕ್ಯ ಹೋಟೆಲ್‌ಗೆ ಭೇಟಿ ನೀಡಿದೆವು. ಸಾಮ್ರಾಟ್ ರೆಸ್ಟಾರೆಂಟ್ ಸೆಪ್ಟೆಂಬರ್ 26ರಂದು ಮುಚ್ಚುತ್ತಿದೆ. ನಮಗೆ ಧನ್ಯವಾದ ಹೇಳುತ್ತಾ ಮತ್ತೆ ಭೇಟಿ ನೀಡಬೇಕೆಂದು ಬಿಲ್ ಹೇಳುತ್ತಿದೆ. ಆದರೆ, ಇನ್ಮುಂದೆ ಭೇಟಿ ಸಾಧ್ಯವಾಗುವುದಿಲ್ಲ," ಎಂದು ಬ್ರಿಜೇಶ್ ಕಾಳಪ್ಪ ಹೇಳಿಕೊಂಡಿದ್ದಾರೆ.

"ಸಾಮ್ರಾಟ್ ರೆಸ್ಟೋರೆಂಟ್ ಅಂತಿಮ ದಿನಗಳ ಎಣಿಕೆಯಾಗುತ್ತಿದೆ. ಬೆಂಗಳೂರಿನ ಅತ್ಯುತ್ತಮ ಹೋಟೆಲ್‌ಗಳಲ್ಲಿ ಅದೂ ಒಂದಾಗಿತ್ತು. ಇತ್ತೀಚೆಗೆ ಅದರ ಸೊಗಡು, ರುಚಿ ಮತ್ತು ನಗೆಯನ್ನು ಕಳೆದುಕೊಂಡಿರುವುದು ಹೌದು. ವಿದಾಯ ಹೇಳಲು ಇವತ್ತು ಅಲ್ಲಿಗೆ ಹೋಗಿದ್ದೆವು" ಎಂದು ಪತ್ರಕರ್ತ ಜೋಗಿ ಬರೆದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
One of the famous food joints for Bengalureans Samrat restaurant will be shutting down on Sep 26th in Hotel Chalukya on Race Cource Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X