ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಜನಾ ಆಯೋಗಕ್ಕೆ ಇಬ್ರಾಹಿಂ, ದಿಲ್ಲಿಗೆ ನಾಡಗೌಡ

By Srinath
|
Google Oneindia Kannada News

ಬೆಂಗಳೂರು, ಜೂನ್ 14: ಹಿರಿಯ ಕಾಂಗ್ರೆಸ್ಸಿಗ ಸಿಎಂ ಇಬ್ರಾಹಿಂ ಅವರನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿ. ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹಾಗೆಯೇ, ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾಂಗ್ರೆಸ್ ಶಾಸಕ ಸಿಎಸ್ ನಾಡಗೌಡ ಅವರನ್ನು ನೇಮಿಸಲಾಗಿದೆ. ಎರಡೂ ಸ್ಥಾನಗಳು ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುತ್ತವೆ.

ಮಾಜಿ ಕೇಂದ್ರ ಸಚಿವ, ಸಿಎಂ ಸಿದ್ದರಾಮಯ್ಯನವರ ಆಪ್ತ ಸಿಎಂ ಇಬ್ರಾಹಿಂ ಅವರು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ (ಸಿದ್ದರಾಮಯ್ಯ) ಆಯೋಗದ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕ ನಾಡಗೌಡ ಅಪ್ಪಾಜಿ ಅವರನ್ನು ಕರ್ನಾಟಕ ಸರಕಾರದ ದೆಹಲಿಯ ಸ್ಥಾನಿಕ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಲಾಗಿದೆ.

ibrahim-chairman-planning-commission-nadagouda-karnataka-special-rep-in-delhi
ಕರ್ನಾಟಕ ರಾಜ್ಯಕ್ಕೆ ನಿಗದಿಯಾದ ಕೇಂದ್ರ ಸರಕಾರದ ಯೋಜನೆಗಳನ್ನು ತ್ವರಿತಗೊಳಿಸಲು ಮತ್ತು ರಾಜ್ಯ ಸರಕಾರಿ ಇಲಾಖೆಗಳಿಂದ ಶೀಘ್ರವಾಗಿ ಯೋಜನಾ ಅನುದಾನಗಳನ್ನು ಪಡೆಯುವಂತಾಗಲು ವಿಶೇಷ ಪ್ರತಿನಿಧಿಯಾಗಿ ಶಾಸಕ ನಾಡಗೌಡ ಅಪ್ಪಾಜಿ ಅವರು ನೆರವಾಗಲಿದ್ದಾರೆ.

1989ರಿಂದ ರಾಜ್ಯ ವಿಧಾಸನಭೆಗೆ ಅವರು 4 ಬಾರಿ ಆಯ್ಕೆಯಾಗಿದ್ದಾರೆ. 1999 ರಿಂದ 2004 ರವರೆಗೆ ಅವರು ವಿಧಾನಸಭೆಯಲ್ಲಿ ಸರಕಾರದ ಚೀಪ್ ವಿಪ್ ಆಗಿದ್ದರು. ಅವರು 1990 ರಿಂದ 1992ರವರೆಗೆ ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

English summary
CM Ibrahim, Former Union Minister is the new deputy Chairman of Karnataka Planning Commission and Congress MLA from Muddebihal, C.S. Nadagouda has been appointed Karnataka’s Special Representative in Delhi. A notification in this regard was issued by the Karnataka Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X