ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Pink slip:ಟೆಕ್ಕಿಗಳಿಂದ ಲ್ಯಾಪ್ಟಾಪ್ ಕಿತ್ಕೊಂಡ ಐಬಿಎಂ

By Srinath
|
Google Oneindia Kannada News

IBM India layoffs - 2000 techies lose job in Bangalore
ಬೆಂಗಳೂರು, ಫೆ.13: ಜಗದ್ವಿಖ್ಯಾತ ಸಾಫ್ಟ್ ವೇರ್ ಕಂಪನಿ ಐಬಿಎಂನಲ್ಲಿ ಉದ್ಯೋಗಿಗಳು ಆತಂಕಕ್ಕೀಡಾಗಿದ್ದಾರೆ. ಭಾರತದಲ್ಲಿ 2,000 ಮಂದಿ ಉದ್ಯೋಗ ಕಳೆದುಕೊಂಡಿದ್ದು, ವಿಶ್ವದ ಇತರೆಡೆ 13,000 ಲೇ ಆಫ್ ಗಳು ಕಾಡತೊಡಗಿವೆ.

ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿರುವ IBM ಕಂಪನಿ ಕಚೇರಿ ನಿನ್ನೆಯಿಂದ ಇದ್ದಕ್ಕಿದ್ದಂತೆ ಉದ್ಯೋಗಿಗಳನ್ನು ಮನೆಗೆ ಕಳಿಸಲಾರಂಭಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಳಪೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಪಿಂಕ್ ಸ್ಲಿಪ್ ಹಾವಳಿ ಶುರುವಾಗಿರಬಹುದು ಎಂದು ಮನೆ ಸೇರಿಕೊಂಡ ಉದ್ಯೋಗಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಜತೆಗೆ ಹಾರ್ಡ್ ವೇರ್ ಆದಾಯದಲ್ಲಿ ಶೇ. 26ರಷ್ಟು ಕುಸಿತ ಎದುರಾಗಿದ್ದೂ ಕಂಪನಿಯ ಈ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

IBM ಕಂಪನಿಯಲ್ಲಿ ಭಾರತದಲ್ಲಿ 1.3 ಲಕ್ಷ ಮಂದಿ ಇದ್ದಾರೆ. ವಿಶ್ವದಾದ್ಯಂತ 4.3 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ಇವರ ಪೈಕಿ ಒಟ್ಟು 15,000 ಮಂದಿಯನ್ನು ಮನೆಗೆ ಕಳುಹಿಸಲು ಕಂಪನಿ ನಿರ್ಧರಿಸಿದೆ. ಈ ನಿರ್ಧಾರದಿಂದ ಕಂಪನಿಗೆ 1 ಶತಕೋಟಿ ಡಾಲರ್ ಉಳಿತಾಯವಾಗುವ ಅಂದಾಜಿದೆ. ಇನ್ನು ಕಂಪನಿಯಲ್ಲೇ ಇನ್ನೂ ಉಳಿದುಕೊಂಡವರಿಗೆ ಈ ಬಾರಿ ಯಾವುದೇ ಇಂಕ್ರಿಮೆಂಟ್ ನೀಡದಿರಲು ಸಹ ಕಂಪನಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕಂಪನಿಯ ಈ ಅನಿರೀಕ್ಷಿತ ನಿರ್ಧಾರದಿಂದ ಬೆಂಗಳೂರಿನಲ್ಲಿರುವ IBM ಟೆಕ್ಕಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆಕ್ಕಿಗಳಿಗೆ ನೀಡಿದ್ದ ಲ್ಯಾಪ್ ಟಾಪ್ ಗಳನ್ನು ನಿರ್ದಾಕ್ಷ್ಯಿಣ್ಯವಾಗಿ ಕಿತ್ಕೊಂಡಿದೆ. ಅಕೇನ ಟೆಕ್ಕಿಗಳು IBM ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂದಿದೆ. ನಿನ್ನೆ ಒಂದೇ ದಿನ ಇದ್ದಕ್ಕಿದ್ದಹಾಗೆ ಸುಮಾರು 1,000 ಮಂದಿಯನ್ನು ಕಂಪನಿ ಮನೆಗೆ ಕಳುಹಿಸಿರುವ ಅಂದಾಜಿದೆ. ಹೆಬ್ಬಾಳದಲ್ಲಿ Manyata Embassy Business Park ಮತ್ತು ದೊಮ್ಮಲೂರಿನ ಬಳಿ Embassy Golf Linksನಲ್ಲಿ IBM ಕಚೇರಿಗಳಿವೆ.

Intel ಮತ್ತು Texas Instruments ಕಂಪನಿಗಳೂ ಸಹ ಸದ್ಯದಲ್ಲೇ 5,000 ಮತ್ತು 1,100 ಉದ್ಯೋಗಿಗನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿವೆ ಎಂದು ಹೇಳಲಾಗಿದೆ.

English summary
IBM India layoffs - 2000 techies lose job in Bangalore. Poor fourth-quarter results reported last month, marked by a 26% slump in hardware revenue, is suspected to be the main cause of layoffs. Worldwide, IBM employs 4.3 lakh people and reports say some 13,000 jobs are likely to be cut as the tech major performs a global rebalancing act that could save about $1 billion in costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X