ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂಆರ್‌ ವಿದ್ಯಾರ್ಥಿ‌ಗಳಿಗೆ ಐಬಿಎಂನ ಪಠ್ಯ

By Ashwath
|
Google Oneindia Kannada News

IBM collaborates with CMR University
ಬೆಂಗಳೂರು. ಮೇ.21: ನಗರದ ಮುಂಚೂಣಿಯಲ್ಲಿರುವ ಸಿಎಂಆರ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ‌ಗಳು ಇನ್ನು ಮುಂದೆ ಐಬಿಎಂ ಕಂಪೆನಿ ಸಿದ್ದಪಡಿಸಿದ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಲಿದ್ದಾರೆ.

ದೇಶದಲ್ಲಿ ಐಬಿಎಂ ಜತೆಗೆ ಈ ರೀತಿಯ ಶೈಕ್ಷಣಿಕ ಪಾಲುದಾರಿಕೆ ಹಂಚಿಕೊಂಡ ಮೊದಲ ವಿಶ್ವವಿದ್ಯಾಲಯ ಸಿಎಂಆರ್‌ ಆಗಿದ್ದು ವಿದ್ಯಾರ್ಥಿ‌ಗಳಿಗೆ ಪದವಿಯನ್ನು ಸಿಎಎಂಆರ್‌ ನೀಡಿದರೆ, ಪದವಿ ಮತ್ತು ಸ್ನಾತಕೋತ್ತರ ಪಠ್ಯವನ್ನು ಐಬಿಎಂ ಕಂಪೆನಿಯ ಅಧಿಕಾರಿಗಳು ಸಿದ್ದಪಡಿಸಲಿದ್ದಾರೆ.

ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಅನುಕೂಲವಾಗುವಂತೆ ಇಂದಿನ ವಿದ್ಯಾರ್ಥಿಗಳನ್ನು ತಯಾರಿಸಲು ಸಿಎಂಆರ್‌ ನಿರ್ಧರಿಸಿದ್ದು, ಇದಕ್ಕೆ ಐಬಿಎಂ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂಆರ್‌ನ ಉಪ ಕುಲಪತಿ ಡಾ. ಆನಂದ್ ಕೆ ಜೋಶಿ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ನೈಪುಣ್ಯತ ಹೆಚ್ಚಿಸಲು ಸಿಎಂಆರ್ ಮತ್ತು ಐಬಿಎಂ ಈ ಹೆಜ್ಜೆ ಇರಿಸಿದ್ದು, ಕ್ಲೌಡ್ ಕಂಪ್ಯೂಟಿಂಗ್, ಬಿಸಿನೆಸ್‌ ಅನಾಲಿಟಿಕ್ಸ್ , ಆಡಳಿತ ನಿರ್ವ‌ಹಣೆ ಸಂಬಂಧಿಸಿದ ವಿಷಯಗಳಿಗೆ ಐಬಿಎಂ ಪಠ್ಯವನ್ನು ರೂಪಿಸಲಿದೆ.

ಸಿಎಂಆರ್‌ನಲ್ಲಿರುವ ಉಪನ್ಯಾಸಕರಿಗೆ ಐಬಿಎಂ ಟ್ರೈನ್ ಎ ಟೀಚರ್ ಹೆಸರಿನ ಕಾರ್ಯ‌ಗಾರವನ್ನು ಐಬಿಎಂ ಆಯೋಜಿಸಲಿದ್ದು, ಐಬಿಎಂನ ತಜ್ಞರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.

ಹೊಸ ರೀತಿಯ ಪಠ್ಯಕ್ರಮ ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದ್ದು. ವಿದ್ಯಾರ್ಥಿ‌ಗಳಿಗೂ ಐಬಿಎಂ ತಜ್ಞರು ಪಾಠ ಮಾಡಲಿದ್ದಾರೆ ಎಂದು ಸಿಎಂಆರ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

English summary
CMR University (CMRU) of Bangalore, India, is collaborating with IBM to offer graduate and post graduate level program curricula focused on Cloud Computing, Business Analytics and IT Applications in Finance / Management, to provide students with the needed skills for jobs in these fields
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X