ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಗಾವಣೆಯಾದ ರೋಹಿಣಿ ಸಿಂಧೂರಿಗೆ ಸ್ಥಳ ನಿಯೋಜನೆ: ಈಗ ಯಾವ ಇಲಾಖೆ?

|
Google Oneindia Kannada News

Recommended Video

ವರ್ಗಾವಣೆಯಾದ ರೋಹಿಣಿ ಸಿಂಧೂರಿಗೆ ಸ್ಥಳ ನಿಯೋಜನೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 27: ಸರ್ಕಾರದ ತಾಳಕ್ಕೆ ಕುಣಿಯಲಿಲ್ಲವೆಂಬ ಕಾರಣ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿದ್ದ ಬಿಜೆಪಿ ಸರ್ಕಾರ, ವರ್ಗಾವಣೆ ಆದೇಶದ ಮೂರು ದಿನ ಬಳಿಕ ಅವರಿಗೆ ಸ್ಥಳ ನಿಯೋಜನೆ ಮಾಡಿದೆ.

ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಆಗಿದ್ದ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರವು ಮೂರು ದಿನಗಳ ಹಿಂದೆ ವರ್ಗಾವಣೆ ಮಾಡಿತ್ತು. ನಿನ್ನೆ ಅವರಿಗೆ ಸ್ಥಳ ನಿಯೋಜನೆ ಆಗಿದ್ದು, ರೋಹಿಣಿ ಅವರಿನ್ನು ರೇಷ್ಮೆ ಅಭಿವೃದ್ಧಿ ಆಯುಕ್ತರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಭ್ರಷ್ಟಾಚಾರ ತಡೆದಿದ್ದಕ್ಕೇ ರೋಹಿಣಿ ಸಿಂಧೂರಿ ವರ್ಗಾವಣೆ?ಭ್ರಷ್ಟಾಚಾರ ತಡೆದಿದ್ದಕ್ಕೇ ರೋಹಿಣಿ ಸಿಂಧೂರಿ ವರ್ಗಾವಣೆ?

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ನೆರೆ ಪರಿಹಾರ ಹಾಗೂ ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡದ ಕಾರಣಕ್ಕೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿತ್ತು.

IAS Rohini Sindhuri Appointed As Silk Development Commissioner

ದಿಟ್ಟ IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆಯ ಆಘಾತದಿಟ್ಟ IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆಯ ಆಘಾತ

ದಕ್ಷ ಅಧಿಕಾರಿ ಎನಿಸಿಕೊಂಡಿರುವ ರೋಹಿಣಿ ಸಿಂಧೂರಿ ಅವರು ಈ ಮುಂಚೆ ಹಾಸನ ಜಿಲ್ಲಾಧಿಕಾರಿಗಳು ಹಲವು ಅತ್ಯುತ್ತಮ ಕಾರ್ಯಗಳನ್ನು ಮಾಡಿ ಜನರಿಂದ ಪ್ರಶಂಸೆಗೆ ಒಳಗಾಗಿದ್ದವರು. ಆಗಲೂ ವರ್ಗಾವಣೆ ಕಾಟಕ್ಕೆ ತುತ್ತಾಗಿದ್ದ ಅವರು ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡಿ ಜಯಿಸಿದ್ದರು.

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿದ್ದ 8 ಸಾವಿರ ಕೋಟಿಯಲ್ಲಿ 3 ಸಾವಿರ ಕೋಟಿಯನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಬೇಕು. ಕಾರ್ಮಿಕರು ಹಾಗೂ ಅವರ ಮಕ್ಕಳ ಕಲ್ಯಾಣಕ್ಕಾಗಿ ತಂತ್ರಜ್ಞಾನ ಆಧಾರಿತ ಸೇವೆಯನ್ನು ಟೆಂಡರ್ ಕರೆಯದೇ ಕಿಯೋನಿಕ್ಸ್‌ಗೇ ಕೊಡಬೇಕು ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಒತ್ತಡ ಹಾಕುತ್ತಿದ್ದರು. ಇದಕ್ಕೆ ಒಪ್ಪದ ಕಾರಣ ರೋಹಿಣಿ ಸಿಂಧೂರಿ ಅವರಿಗೆ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಲಾಗಿತ್ತು.

English summary
IAS officer Rohini Sindhuri appointed as silk development board commissioner. She transfers from labor board director post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X