ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಕ್ರಿಯೆ: ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ

By ರಾಕೇಶ್ ಶೆಟ್ಟಿ
|
Google Oneindia Kannada News

ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರು ಸೋಮವಾರ ನಿಗೂಢವಾಗಿ ಮೃತಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಅಂತ್ಯವಾಗಿದೆ. ಅದರೆ, ಡಿಕೆ ರವಿ ಅವರ ಸಾವಿನ ತನಿಖೆ ಪಕ್ಷಪಾತವಿಲ್ಲದೆ ನಡೆಯುವುದೇ? ದಕ್ಷ ಅಧಿಕಾರಿಯನ್ನು ಬಲಿ ಪಡೆದುಕೊಂಡ ಭ್ರಷ್ಟ ವ್ಯವಸ್ಥೆ ಸರಿ ಹೋಗುವುದು ಹೇಗೆ? ಸೂತಕದ ನಡುವೆ ಸಾವಿನ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿಲುಮೆ ಸಮೂಹ ತನ್ನ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾಗಳ ವಿರುದ್ಧ ಸಮರ ಸಾರಿ,ತನ್ನ ದಕ್ಷತೆಯ ಕಾರಣದಿಂದಲೇ ಕೋಲಾರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿಸಲ್ಪಟ್ಟಿದ್ದ ದಕ್ಷ ಯುವ ಅಧಿಕಾರಿ ಡಿ.ಕೆ ರವಿಯಂತವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನನಗಂತೂ ನಂಬಲಾಗುತ್ತಿಲ್ಲ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

ನಿನ್ನೆ ಅವರ ಮರಣದ ಸುದ್ದಿ ತಿಳಿದಾಗಿನಿಂದ ಮನಸ್ಸು ಖಿನ್ನವಾಗಿದೆ. ಸತ್ಯ, ನ್ಯಾಯಕ್ಕಾಗಿ ಹೋರಾಡುವವರು ಹೀಗೆ ದುರಂತ ಅಂತ್ಯ ಕಾಣುತ್ತಾರೆಯೇ? ಅಂತವರ ಕುಟುಂಬದವರಿಗೆ ನೋವು ಕಟ್ಟಿಟ್ಟ ಬುತ್ತಿಯೇ? [ಡಿ.ಕೆ.ರವಿ ನಿಗೂಢ ಸಾವು : ಯಾರು, ಏನು ಹೇಳಿದರು? ]

ಕೋಲಾರದಿಂದ ರವಿಯವರನ್ನು ವರ್ಗಾವಣೆ ಮಾಡಿದಾಗ ಇಡೀ ಜಿಲ್ಲೆಯೇ ಬಂದ್ ಆಗಿತ್ತು.ಒಂದಿಡಿ ಜಿಲ್ಲೆಯ ಜನರ ಜೊತೆ ಅಧಿಕಾರಿಯೊಬ್ಬ ಬಾಂಧವ್ಯ ಈ ಮಟ್ಟಿಗಿರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವೇ ಸರಿ.

IAS officer DK Ravi Sad Demise Public demand justice

ಕೋಲಾರದಿಂದ ಎತ್ತಂಗಡಿಯಾಗಿ ಬಂದ ಮೇಲಾದರೂ ಈ ಮನುಷ್ಯ ತಣ್ಣಗಾಗುತ್ತಾರೆ ಎಂದುಕೊಂಡಿದ್ದವರಿಗೆ, ರವಿಯವರು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹುದ್ದೆ ವಹಿಸಿಕೊಂಡ ಮೇಲೆ ನಡೆಸಿದ ದಾಳಿಗಳು ಮತ್ತೆ ನಿದ್ದೆಗೆಡಿಸಿದ್ದವೇನೋ! [ರವಿ ಅವರ ಮನೆಯಲ್ಲಿ ಡೆತ್‌ನೋಟ್ ಸಿಕ್ಕಿಲ್ಲ]

ಐದೂವರೆ ತಿಂಗಳ ಹಿಂದೆ ತೆರಿಗೆ ಇಲಾಖೆಗೆ ಬಂದ ರವಿಯವರು ಈ ಕಡಿಮೆ ಅವಧಿಯಲ್ಲಿ ದೊಡ್ಡ ದೊಡ್ಡ ಬಿಲ್ಡರ್ ಗಳ ತೆರಿಗೆ ವಂಚನೆಯನ್ನು ಬಯಲಿಗೆಳೆದಿದ್ದರು.ವೃತ್ತಿಯಲ್ಲಿ ಖಡಕ್ ಆಗಿದ್ದ ರವಿಯವರು ಜನರೊಂದಿಗೆ ಸಾಮಾನ್ಯರಂತೆ ಬೆರೆಯುತಿದ್ದವರು.

ಇಂಥ ನಿಷ್ಠ ಯುವ IAS ಅಧಿಕಾರಿಯೊಬ್ಬರಿಗೆ ರಕ್ಷಣೆಯಿಲ್ಲದಾಯಿತೇ? ಉತ್ತರ ಭಾರತದಲ್ಲಿ ಕೇಳಿ ಬರುತ್ತಿದ್ದಂತ ಸುದ್ದಿಗಳು ಈಗ ನಮ್ಮ ಕರ್ನಾಟಕ ರಾಜ್ಯದಲ್ಲೂ ಕೇಳಿ ಬರುತ್ತಿರುವುದು ಆತಂಕಕಾರಿ.[ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆಗಳು]

ಭ್ರಷ್ಟಚಾರದ ವಿರುದ್ಧ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದು ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರಿಸಬೇಕಿದೆ.ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ಸತ್ಯವನ್ನು ಜನತೆಯ ಮುಂದಿಟ್ಟು ರವಿಯವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.

English summary
Ravi, a eminent IAS officer the additional commissioner in the commercial taxes department was found dead at his apartment on Monday evening. Public demand justice in the case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X