ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬಸ್ ಚಾಲಕಿಯಾದ ಐಎಎಸ್ ಅಧಿಕಾರಿ ಶಿಖಾ

|
Google Oneindia Kannada News

ಬೆಂಗಳೂರು, ಜನವರಿ 14: ಐಎಎಸ್ ಅಧಿಕಾರಿ ಹಾಗೂ ಬಿಎಂಟಿಸಿ ಎಂಡಿ ಸಿ.ಶಿಖಾ ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಬಿಎಂಟಿಸಿ ವೋಲ್ವಾ ಬಸ್ ಚಲಾಯಿಸಿದ್ದು, ಇದೀಗ ಹಲವರ ಕೆಂಗಣ್ಣಿಗೂ ಇದು ಕಾರಣವಾಗಿದೆ. ಶಿಖಾ ಬಿಎಂಟಿಯ ಎಂಡಿ ಆಗಿದ್ದು ಅವರು ಬಿಎಂಟಿಸಿಯ ವೋಲ್ವೊ ಬಸ್‌ನ್ನು ಓಡಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಕೂಡ ಈ ಮೊದಲು ಸರ್ಕಾರಿ ಬಸ್‌ನ್ನು ಓಡಿಸಿದ್ದರು.

4 ಮೆಟ್ರೋ ನಿಲ್ದಾಣಗಳು, 9 ನೂತನ ಮಾರ್ಗ: 90 ಫೀಡರ್ ಬಸ್‌ಗಳು4 ಮೆಟ್ರೋ ನಿಲ್ದಾಣಗಳು, 9 ನೂತನ ಮಾರ್ಗ: 90 ಫೀಡರ್ ಬಸ್‌ಗಳು

ಆದರೆ ಅವರು ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

IAS Officer C Shikha Driving Government Bus

ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ಉಜ್ಜನಿಪುರ ತಾಂಡ, ಹುಡ್ಕಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳಿಗೆ ತೆರಳಿ ನಂತರ ಇದೇ ಗ್ರಾಮಗಳ ಮೂಲಕ ಹೊನ್ನಾಳಿ ತಲುಪಿದ್ದ ಶಾಸಕರು, ಸಂಜೆ ಹೊನ್ನಾಳಿ ಖಾಸಗಿ ಬಸ್‌ ನಿಲ್ದಾಣದಿಂದ ರಾಮೇಶ್ವರ, ನ್ಯಾಮತಿ ಮಾರ್ಗವಾಗಿ ಶಿವಮೊಗ್ಗ ತಲುಪಿದ್ದರು. ರೇಣುಕಾಚಾರ್ಯ ತಮ್ಮ ಫೇಸ್‌ಬುಕ್‌ ಖಾತೆಯಲ್ಲೂ ಬಸ್‌ ಓಡಿಸಿದ್ದ ಬಗ್ಗೆ ಫೋಟೋ ಶೇರ್‌ ಮಾಡಿದ್ದರು.

ರೇಣುಕಾಚಾರ್ಯ ಅವರು ಯಾರ ಪರವಾನಗಿ ಪಡೆದು ಸಾರಿಗೆ ಸಂಸ್ಥೆಯ ಬಸ್‌ ಚಲಾವಣೆ ಮಾಡಿದ್ದಾರೆಂಬ ವಿಷಯ ವೈರಲ್‌ ಆಗುತ್ತಿದ್ದಂತೆಯೇ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಡಿಪೋ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆಂಬ ವಿಷಯ ಕೇಳಿಬಂದಿತ್ತು. ಈಗ ಶಿಖಾ ಅವರ ವಿರುದ್ಧವೂ ಇಂಥದೇ ಆರೋಪ ಕೇಳಿಬಂದಿದೆ.

English summary
BMTC MD C Shikha faces criticism for driving government bus. A section of BMTC employees have accused her for violating traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X