• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಾವಶ್ಯಕ ಹಾರ್ನ್ ಕಿರಿಕಿರಿಗೆ ಬ್ರೇಕ್ ಹಾಕೋಣ ಬನ್ನಿ

By Rajendra
|

ಬೆಂಗಳೂರು, ಜೂ.27: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಸಹಭಾಗಿತ್ವದಲ್ಲಿ "ನಾನು ಹಾರ್ನ್ ಮಾಡುವುದಿಲ್ಲ" (I Won't Honk) ಕಾರ್ಯಕ್ರಮವನ್ನು ಶುಕ್ರವಾರ (ಜೂ.27) ಬೆಳಿಗ್ಗೆ 11.30 ಗಂಟೆಗೆ ಬಿಎಂಟಿಸಿ ಕೇಂದ್ರ ಕಛೇರಿ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಸಾರಿಗೆ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಖ್ಯಾತ ಕ್ರಿಕೆಟ್ ಪಟು ರಾಹುಲ್ ಡ್ರಾವಿಡ್ ಜಂಟಿಯಾಗಿ "ನಾನು ಹಾರ್ನ್ ಮಾಡುವುದಿಲ್ಲ" ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಬೆಂಮಸಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಬೆಂಗಳೂರು ನಗರ ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತರು ಬಿ.ದಯಾನಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ರಿಗೇಡ್ ಗ್ರೂಪ್, ಬ್ರಿಟಾನಿಯಾ, ಯುಎಲ್ ಸೈಬರ್ ಪಾರ್ಕ್ ನವರು ಈ ಕಾರ್ಯಕ್ರಮದ ಪ್ರಾಯೋಜಕರು.

ನಾನು ಹಾರ್ನ್ ಮಾಡುವುದಿಲ್ಲ ಎನ್ನುವುದು ಒಂದು ಉತ್ತಮವಾದ ಪ್ರತಿಜ್ಞೆ. ಇದು ಸುತ್ತಲಿನ ಶಬ್ದ ಮಾಲಿನ್ಯವನ್ನು ತಡೆದು ಜನರು ಆರಾಮವಾಗಿ ಗಾಡಿ ಚಲಾಯಿಸಲು ಸಹಾಯ ಮಾಡುತ್ತದೆ. ಈ ಪ್ರಚಾರದಲ್ಲಿ ಭಾಗವಹಿಸುವುದು ಬ್ರಿಗೇಡ್ ಗೆ ಖುಷಿಯ ಸಂಗತಿ. ಇನ್ನು ರಾಹುಲ್ ದ್ರಾವಿಡ್ ಇದಕ್ಕೆ ಬೆಂಬಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬ್ರಿಗೇಡ್ ಸಂಸ್ಥೆಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಉಪಾಧ್ಯಕ್ಷರಾದ ವಿಶ್ವ ಪ್ರತಾಪ್ ದೇಸು ತಿಳಿಸಿದರು.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು. ಶಬ್ದ ಮಾಲಿನ್ಯವನ್ನು ಸ್ವಲ್ಪಮಟ್ಟಿಗೆ ತಡೆಗಟ್ಟುವ ಸಲುವಾಗಿ ಅನಾವಶ್ಯಕವಾಗಿ ಬಳಸುವ ವಾಹನದ ಹಾರ್ನ್ ಶಬ್ದವನ್ನು ನಿಲ್ಲಿಸುವುದರ ಬಗ್ಗೆ ಅರಿವನ್ನು ಮೂಡಿಸುವುದು. ಆ ಮೂಲಕ ಶಬ್ದ ಮಾಲಿನ್ಯವನ್ನು ತಡೆಗಟ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಆಂದೋಲನದ ಮೂಲಕ ಜನರಿಗೆ ಅನಾವಶ್ಯಕವಾಗಿ ಹಾರ್ನ್ ಮಾಡುವುದರ ಮೂಲಕ ಸಂಚಾರ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೆಂಬ ಅರಿವು ಮೂಡಿಸಲಾಗುತ್ತದೆ. ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಿ ಬೆಂಗಳೂರು ನಗರ ವಾಸಯೋಗ್ಯವಾದ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ಪ್ರಯತ್ನವಾಗಿರುತ್ತದೆ.

ಬೆಂಗಳೂರು ನಗರ ಸಂಚಾರ ಪೊಲೀಸರು ಬೆಂಬಲ ನೀಡಿದರೆ ಈ ಆಂದೋಲನ ಹೆಚ್ಚು ಪರಿಣಾಮಕಾರಿಯಾಗುವುದು. ಅನಾವಶ್ಯಕವಾಗಿ ಹಾರ್ನ್ ಮಾಡದೆ ಇರುವ ಬಗ್ಗೆ ಅರಿವು ಮೂಡಿಸಲು ಬಿಎಂಟಿಸಿ ನೀಡಿರುವ ಬೆಂಬಲವನ್ನು ಪ್ರಶಂಸಿಸುವುದಾಗಿ ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಕ್ರಿಕೆಟ್ ಆಟಗಾರರಾದ ರಾಹುಲ್ ಡ್ರಾವಿಡ್ ತಿಳಿಸಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್ ರವರು ಈ ಆಂದೋಲನದ ಭಾಗಿಗಳಾಗಲು ಬಿಎಂಟಿಸಿ ಉತ್ಸುಕವಾಗಿದ್ದು. ಅನಾವಶ್ಯಕವಾಗಿ ಹಾರ್ನ್ ಮಾಡಬಾರದೆಂಬ ಸಂದೇಶವನ್ನು ಎಲ್ಲರಿಗೂ ತಲುಪುವಂತೆ ಮಾಡುವುದು ಅತೀ ಅವಶ್ಯಕ. ಈ ಆಂದೋಲನದಲ್ಲಿ ಭಾಗವಹಿಸಲು ಸಂಸ್ಥೆಯು ಇಚ್ಛಿಸುತ್ತದೆ ಎಂದು ತಿಳಿಸಿರುತ್ತಾರೆ.

ಸಾರ್ವಜನಿಕರು, ಸಂಚಾರ ಪೊಲೀಸರು, ರಾಜ್ಯ ಸಾರಿಗೆ ನಿಗಮಗಳು, ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು, ಶಾಲಾ ಕಾಲೇಜುಗಳನ್ನು ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಭಾಗಿಗಳಾಗುವಂತೆ ಮಾಡುವ ಮೂಲ ಉದ್ದೇಶ ಈ ಆಂದೋಲನವಾಗಿರುತ್ತದೆ. (ಒನ್ಇಂಡಿಯಾ ಕನ್ನಡ)

English summary
"I Won’t Honk" campaign jointly inaugurated by Rahul Dravid, Known Cricketer and Ramalinga Reddy, Hon’ble Minister for Transport, in-charge Minister, Bangalore and Chairman, KSRTC and BMTC, Mr.Anjum Parwez, IAS, Managing Director, BMTC and Mr.B.Dayanand, IPS, Additional Commissioneer, Bangalore Traffic Police at Shanthinagar BMTC bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more