ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 15ರ ಒಳಗೆ ಹಣ ವಾಪಸ್ ಕೊಡುತ್ತೇನೆ: ಐಎಂಎ ಮಾಲೀಕ

|
Google Oneindia Kannada News

ಬೆಂಗಳೂರು, ಜೂನ್ 11: ಬಹುಕೋಟಿ ಹಣ ವಂಚನೆ ಪ್ರಕರಣದ ಆರೋಪಿಯಾಗಿ ತಲೆಮರೆಸಿಕೊಂಡು ಅಜ್ಞಾತ ಸ್ಥಳದಿಂದ ಆಡಿಯೋಗಳನ್ನು ಬಿಡುಗಡೆ ಮಾಡುತ್ತಿರುವ ಐಎಂಎ ಜ್ಯುಲೆರ್ಸ್‌ ಮಾಲೀಕ ಮನ್ಸೂರ್ ಖಾನ್ ಜೂನ್ 15 ರ ಒಳಗಾಗಿ ಎಲ್ಲ ಗ್ರಾಹಕರ ಹಣ ವಾಪಸ್ ನೀಡುತ್ತೇನೆ ಎಂದಿದ್ದಾರೆ.

ಇಂದು ಮತ್ತೊಂದು ಆಡಿಯೋ ಬಿಡುಗಡೆ ಮಾಡಿರುವ ಮನ್ಸೂರ್ ಜೂನ್ 15 ರ ಒಳಗಾಗಿ ಎಲ್ಲ ಗ್ರಾಹಕರ ಹಣ ವಾಪಸ್ ಕೊಡುತ್ತೇನೆ, ನಾನು ದೇಶಬಿಟ್ಟು ಹೋಗಿಲ್ಲ, ಜೀವಂತವಾಗಿದ್ದು, ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಹೊಸ ಆಡಿಯೋನಲ್ಲಿ ಮನ್ಸೂರ್ ಹೇಳಿದ್ದಾರೆ.

ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ? ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ, ನನ್ನನ್ನು, ನನ್ನ ಕುಟುಂಬವನ್ನು ಇಲ್ಲಿಂದ ಓಡಿಸಲು ಯತ್ನಿಸಲಾಗುತ್ತಿದೆ, ನನ್ನ ಜೀವಕ್ಕೆ ಅಪಾಯವೂ ಇದೆ ಎಂದು ಮನ್ಸೂರ್ ಆಡಿಯೋ ನಲ್ಲಿ ಹೇಳಿದ್ದಾರೆ.

I will repay investors money before June 15: IMA jewelers owner Mansur Khan

ನ್ಯಾಯಯುತವಾಗಿ ನಾನು ನೀಡಬೇಕಿರುವ ಎಲ್ಲ ದುಡ್ಡನ್ನು ವಾಪಸ್ ಕೊಡುತ್ತೇನೆ, ಶಾಸಕ ರೋಶನ್ ಬೇಗ್, ಶಕೀಲ್ ಅಹ್ಮದ್, ರಾಹಿಲ್ ನನ್ನನ್ನು ಇಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಹೂಡಿಕೆದಾರರ ಹಣವನ್ನು ನಾನು ವಜ್ರ, ರಿಯಲ್ ಎಸ್ಟೇಟ್, ಆಸ್ಪತ್ರೆ, ಆಭರಣಗಳಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಅವರು ಆಡಿಯೋದಲ್ಲಿ ಹೇಳಿದ್ದಾರೆ.

IMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ? ಹೂಡಿಕೆದಾರರ ನೆರವಿಗೆ ಕಾಂಗ್ರೆಸ್ ನಾಯಕರುIMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ? ಹೂಡಿಕೆದಾರರ ನೆರವಿಗೆ ಕಾಂಗ್ರೆಸ್ ನಾಯಕರು

ವಜ್ರ ಮತ್ತು ಆಭರಣಗಳನ್ನು ರಾಹಿಲ್ ಕೈಯಲ್ಲಿ ಕೊಟ್ಟಿದ್ದೇನೆ, ಇಂದು ಸಂಜೆ ಸಭೆ ಕಕರೆದಿದ್ದೇನೆ, ಎಲ್ಲರ ಜೊತೆ ಮಾತನಾಡಿ, ಜೂನ್ 15 ರ ಒಳಗಾಗಿ ಎಲ್ಲರಿಗೂ ಹಣ ತಲುಪಿಸುತ್ತೇನೆ ಎಂದು ಮನ್ಸೂರ್ ಆಡಿಯೋದಲ್ಲಿ ಹೇಳಿದ್ದಾರೆ.

ಹೆಚ್ಚುತ್ತಿರುವ ವಂಚನೆ ಪ್ರಕರಣ : ಸರ್ಕಾರ ಎಚ್ಚೆತ್ತುಕೊಳ್ಳುವುದು ಯಾವಾಗ?ಹೆಚ್ಚುತ್ತಿರುವ ವಂಚನೆ ಪ್ರಕರಣ : ಸರ್ಕಾರ ಎಚ್ಚೆತ್ತುಕೊಳ್ಳುವುದು ಯಾವಾಗ?

ಐಎಂಎ ಜ್ಯುವೆಲರ್ಸ್‌ ವಂಚನೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿ ಇಂದು ಆದೇಶ ಹೊರಡಿಸಲಾಗಿದೆ.

English summary
IMA jewelers owner Mansur Khan said i will repay all investors money before June 15. He released a second audio today and said MLA Roshan Baig is trying execute me and my family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X