ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ವಿಚಾರದ ಬಗ್ಗೆ ಮುನಿರತ್ನ ಮಾತನಾಡುವುದಿಲ್ಲ!

|
Google Oneindia Kannada News

ಬೆಂಗಳೂರು, ನವೆಂಬರ್ 23 : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನಿರತ್ನ ಸಚಿವರಾಗಲಿದ್ದಾರೆಯೇ?. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಜೋರಾಗಿವೆ.

ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನಿರತ್ನ ಸೋಮವಾರ ಶಾಸಕರಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಎರಡ್ಮೂರು ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ಖಚಿತ!ಎರಡ್ಮೂರು ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ಖಚಿತ!

ಸಂಪುಟ ಸೇರುವ ಕುರಿತು ಮಾಧ್ಯಮದವರು ಕೇಳಿದಾಗ, "ಸಚಿವ ಸಂಪುಟ ವಿಸ್ತರಣೆ ನಮ್ಮ ಮುಖ್ಯಮಂತ್ರಿಗಳಿಗೆ ಸಂಬಂಧ ಪಟ್ಟ ವಿಚಾರ. ಸಚಿವ ಸ್ಥಾನ, ಸಚಿವ ಸಂಪುಟದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ" ಎಂದರು.

ಸಂಪುಟ ವಿಸ್ತರಣೆಗೆ ಸಿಗದ ಒಪ್ಪಿಗೆ: ಬಿಎಸ್‌ವೈ ಆಸೆಗೆ ತಣ್ಣೀರು, ಬರಿಗೈಲಿ ವಾಪಸ್ಸಂಪುಟ ವಿಸ್ತರಣೆಗೆ ಸಿಗದ ಒಪ್ಪಿಗೆ: ಬಿಎಸ್‌ವೈ ಆಸೆಗೆ ತಣ್ಣೀರು, ಬರಿಗೈಲಿ ವಾಪಸ್

"ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬುದು ಅಷ್ಟೇ ಸತ್ಯ. ನನ್ನ ಮೇಲೆ ಭರವಸೆ ಇಟ್ಟು ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುವೆ" ಎಂದು ಮುನಿರತ್ನ ಹೇಳಿದರು.

 I Will Not Talk About Cabinet Expansion Says BJP MLA Munirathna

"ವರಿಷ್ಠರು, ನಮ್ಮ ರಾಜ್ಯಾಧ್ಯಕ್ಷರು, ನಮ್ಮ ಮುಖ್ಯಮಂತ್ರಿಗಳು ಹೇಳುವುದುನ್ನು ಕೇಳುವುದು ಮಾತ್ರ ನನ್ನ ಕೆಲಸ. ಅವರು ಹೇಳಿದಂತೆ ಕೇಳುತ್ತೇನೆ" ಎಂದು ಮುನಿರತ್ನ ತಿಳಿಸಿದರು.

ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿಯಾದ ಯಡಿಯೂರಪ್ಪ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿಯಾದ ಯಡಿಯೂರಪ್ಪ

ನಾಳೆಯಿಂದ ಒಟ್ಟಾಗಿ ನೋಡುವಿರಿ : ಮುನಿರತ್ನ, ಎಸ್. ಟಿ. ಸೋಮಶೇಖರ್ ಮತ್ತು ಭೈರತಿ ಬಸವರಾಜ 'ಎಸ್‌ಬಿಎಂ' ಎಂದೇ ಖ್ಯಾತಿ ಪಡೆದಿದ್ದಾರೆ. ಮೂವರು ನಾಯಕರು ಕಾಂಗ್ರೆಸ್‌ನಲ್ಲಿದ್ದ ಕಾಲದಿಂದ ಒಟ್ಟಾಗಿ ಇದ್ದವರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೂವರು ಸಹ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಎಸ್. ಟಿ. ಸೋಮಶೇಖರ್ ಮತ್ತು ಭೈರತಿ ಬಸವರಾಜ ಸಚಿವರಾಗಿದ್ದಾರೆ. ಈಗ ನಿಮ್ಮಲ್ಲಿ ಬಿರುಕು ಮೂಡಿದೆಯೇ? ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದವು.

Recommended Video

Mohammed Siraj ಅವರ ತಂದೆಗೆ ಈ ಸರಣಿ ಅರ್ಪಣೆಯಂತೆ | Oneindia Kannada

"ನಾವು ಮೊದಲಿನಂತೆಯೇ ಇದ್ದೇವೆ. ನಾಳೆಯಿಂದ ನಾವು ಒಟ್ಟಿಗೆ ಕಾಣಿಸಿಕೊಳ್ಳುತ್ತೇವೆ" ಎಂದು ಶಾಸಕ ಮುನಿರತ್ನ ಹೇಳಿದರು. ಮುನಿರತ್ನ ಯಡಿಯೂರಪ್ಪ ಸಂಪುಟ ಸೇರಲಿದ್ದಾರೆಯೇ? ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.

English summary
Rajarajeshwari Nagar BJP MLA Munirathna said that he will not talk about cabinet expansion. Chief minister B. S. Yediyurappa will take decision on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X