ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ಸನ್ಮಾನ ಮಾಡ್ತಾರಂತೆ ಯಡಿಯೂರಪ್ಪ!

|
Google Oneindia Kannada News

ಬೆಂಗಳೂರು, ನ. 20 : ಧರಣಿಯನ್ನು ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ನನ್ನ ಬಳಿಗೆ ಸಂಧಾನಕಾರರನ್ನು ಕಳುಹಿಸುವುದು ಬೇಡ, ಶಾದಿ ಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೆ ವಿಸ್ತರಣೆ ಮಾಡಿದರೆ, ಅವರಿಗೆ ನಾನು ಸನ್ಮಾನ ಮಾಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೆ ವಿಸ್ತರಿಸರಣೆ ಮಾಡಬೇಕು ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೂ ಪಡಿತರ ವಿತರಣೆ ಮಾಡಬೇಕು ಎಂಬ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ 20ನೇ ದಿನಕ್ಕೆ ಕಾಲಿಟ್ಟಿದೆ.

yeddyurappa

ಧರಣಿ ಸ್ಥಳದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಧರಣಿ ನಿಲ್ಲಿಸುವಂತೆ ಸಂಧಾನಕಾರರನ್ನು ಕಳುಹಿಸುವುದು ಬೇಡ, ಅವರು ನನ್ನ ಬೇಡಿಕೆ ಈಡೇರಿಸಿ, ಎಲ್ಲಾ ವರ್ಗಗಳಿಗೆ ಶಾದಿ ಭಾಗ್ಯ ಯೋಜನೆ ವಿಸ್ತರಣೆ ಮಾಡಿದರೆ ಅವರಿಗೆ ನಾನು ಸನ್ಮಾನ ಮಾಡುತ್ತೇನೆ ಎಂದು ಘೋಷಿಸಿದರು. (ಮನವೊಲಿಕೆ ಯತ್ನ ವಿಫಲ, ಮುಂದುವರಿದ ಬಿಎಸ್ವೈ ಧರಣಿ)

ಧರಣಿಯ 19ನೇದಿನ ಮಂಗಳವಾರ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಯಡಿಯೂರಪ್ಪ ಮನವೊಲಿಕೆಗೆ ಮುಂದಾಗಿದ್ದರು. ಅದಕ್ಕಾಗಿ ವೇದಿಕೆಯನ್ನು ಸಿದ್ದಗೊಳಿಸಿದ್ದರು. ವಾಟಾಳ್ ನಾಗರಾಜ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರೊಂದಿಗೆ ಧರಣಿ ಸ್ಥಳಕ್ಕೆ ತೆರಳಿ, ಯಡಿಯೂರಪ್ಪ ಅವರ ಮನವೊಲಿಸಲು ತೀರ್ಮಾನಿಸಿದ್ದರು.

ಆದರೆ, ಅದಕ್ಕೂ ಮೊದಲೇ ಜಯಚಂದ್ರ ಅವರಿಗೆ ಸ್ಪಷ್ಟ ಸಂದೇಶ ಕಳುಹಿಸಿದ ಯಡಿಯೂರಪ್ಪ ತಾವು ಧರಣಿ ಕೈ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದರು. ಇದರಿಂದ ಜಯಚಂದ್ರ ತಮ್ಮ ಆಲೋಚನೆಯನ್ನು ಹಿಂಪಡೆದಿದ್ದರು.

ಈ ಹಿನ್ನಲೆಯಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಸಂದೇಶ ಕಳಿಸಿರುವ ಯಡಿಯೂರಪ್ಪ, ನಮ್ಮ ಬೇಡಿಕೆ ಈಡೇರಿಸಿ ನಿಮಗೆ ಸನ್ಮಾನ ಮಾಡುತ್ತೇವೆ. ಆದರೆ, ಧರಣಿ ನಿಲ್ಲಿಸುವಂತೆ ಸಂಧಾಕಾರರನ್ನು ಕಳಿಸಬೇಡಿ ಎಂದು ಹೇಳಿದ್ದಾರೆ.

ನಮ್ಮ ಬೇಡಿಕೆ ಈಡೇರಿಸಿದರೆ ನಿಮಗೆ ಸನ್ಮಾನ ಮಾಡುತ್ತೇವೆ. ಇಲ್ಲದಿದ್ದರೆ ನ.24ರವರೆಗೆ ಧರಣಿ ಮುಂದುವರೆಸುತ್ತೇನೆ. ನಂತರ ಅಧಿವೇಶನದಲ್ಲಿಯೂ ಪ್ರತಿಭಟನೆ ಮುಂದುವರೆಸುವುದಾಗಿ ಅವರು ಹೇಳಿದರು.

English summary
I will honor CM Siddaramaiah if he agreed to extend shaadi bhagya scheme for all community said, KJP president, Former CM B.S.Yeddyurappa. On Wednesday, November 20 he addressed media and said, he will continue darana till November 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X