ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ಜಾರಕಿಹೊಳಿಗೆ ಹೇಳಿದ್ದೆ !

|
Google Oneindia Kannada News

ಬೆಂಗಳೂರು, ಮಾರ್ಚ್ 09: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಬಗ್ಗೆ ನಾಲ್ಕು ತಿಂಗಳ ಬಗ್ಗೆ ಎಚ್ಚರಿಸಿದ್ದೆ. ಅಂತಹ ಯಾವುದೇ ಕೃತ್ಯ ನಾನು ಮಾಡಿಲ್ಲ ಎಂದು ರಮೇಶ್ ಹೇಳಿದ್ದರು. ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯ ಮುಗಿಸಲು ನಡೆಸಿದ ಷಡ್ಯಂತ್ರ ಎಂದು ಮಾಜಿ ಶಾಸಕ ನಾಗರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Recommended Video

ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು'-'ಸಿಡಿ 100 ಪರ್ಸೆಂಟ್ ನಕಲಿ, ನನ್ನ ವಿರುದ್ಧ ನಡೆದ ಷಡ್ಯಂತ್ರ' | Oneindia Kannada

ನನಗೆ ಬಾಲಚಂದ್ರ ಹೇಳಿಕೆ ನಾಲ್ಕು ತಿಂಗಳ ಹಿಂದೆ ಹೇಳಿದ್ದರು. ರಮೇಶ್ ಅಣ್ಣ ಬಗ್ಗೆ ಸಿಡಿ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಾನು ಕೇಳಿದೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಹೀಗಾಗಿ ನಾನು ರಮೇಶ್ ಅಣ್ಣ ಅವರನ್ನು ಕೇಳಿದ್ದೆ. ಆದರೆ ನಂದೆಲ್ಲಿ ಅಂತಹ ಸಿಡಿ ಇರಲಿಕ್ಕೆ ಸಾಧ್ಯವಿಲ್ಲ. ಅಂತಹ ತಪ್ಪು ನಾನು ಮಾಡಿಲ್ಲ ಅಂತ ಹೇಳಿದ್ದರು. ಅದನ್ನು ನಾನು ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೇಳಿದ್ದೆ. ಹೀಗಾಗಿ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇದು ಹೊರತು ಪಡಿಸಿ ನನಗೆ ಬೇರೆ ಯಾವುದೇ ಮಾಹಿತಿ ಗೊತ್ತಿಲ್ಲ. ಆದರೆ ಜಾರಕಿಹೊಳಿ ಕುಟುಂಬಕ್ಕೆ ಹೋಗಿರುವ ಮರ್ಯಾದೆ ವಾಪಸು ಬರಬೇಕು ಎಂದು ನಾಗರಾಜ್ ಹೇಳಿದರು.

ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ: ರಮೇಶ್ ಜಾರಕಿಹೊಳಿಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ: ರಮೇಶ್ ಜಾರಕಿಹೊಳಿ

ಕೆಲ ದಿನಗಳ ಹಿಂದೆ ಸಿಡಿ ವಿವಾದ ಕುರಿತು ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಜಾರಕಿಹೊಳಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ರಮೇಶ್ ಜಾರಕಿಹೊಳಿ ವಿರುದ್ಧದ ಷಡ್ಯಂತ್ರದ ಬಗ್ಗೆ ಕೇಳಿದಾಗ, ಅಂತದ್ದು ಏನೂ ಆಗೇ ಇಲ್ಲ ಅಂತ ಹೇಳಿದ್ದರು. ನಕಲಿ ಸಿಡಿ ತಯಾರಿಸಿ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಇವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ರಮೇಶ್ ಜಾರಕಿಹೊಳಿ ಮನವೊಲಿಸಲಾಗುವುದು.

I told Ramesh jarkiholi about CD 4 months ago: says ex MLA Nagaraj,

ಎರಡು ಮೂರು ದಿನದಲ್ಲಿ ಮಾಧ್ಯಮಗಳ ಮುಂದೆ ಅವರು ಬಂದು ತನ್ನ ಅಭಿಪ್ರಾಯ ಹೇಳಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಅದರಂತೆ ರಮೇಶ್ ಜಾರಕಿಹೊಳಿ ಕೂಡ ಇಂದು ಸುದ್ದಿಗೋಷ್ಠಿ ನಡೆಸಿ ಇದೊಂದು ನಕಲಿ ಸಿಡಿ, ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದಿದ್ದರು. ಈ ಎಲ್ಲಾ ಬೆಳವಣಿಗೆ ನೋಡಿದರೆ ಜಾರಕಿಹೊಳಿ ಬ್ರದರ್ಸ್ ಉನ್ನತ ಮಟ್ಟದ ತನಿಖೆ ನಡೆಸಲು ತೀರ್ಮಾನಿಸಿದ್ದಾರೆಯೇ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

English summary
Former MLA Nagaraj has said that I told Ramesh jarkiholi about CD 4 months back only. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X