ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರಾಡಳಿತ ಖಾತೆ ದೊರೆಯುವ ವಿಶ್ವಾಸದಲ್ಲಿ ಸಚಿವ ಆರ್.ಶಂಕರ್

|
Google Oneindia Kannada News

ಬೆಂಗಳೂರು, ಜೂನ್ 18: ಸಂಪುಟ ವಿಸ್ತರಣೆ ಆಗಿ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿ ಐದು ದಿನ ಆಗಿದ್ದರೂ ಇನ್ನೂ ಅವರಿಗೆ ಖಾತೆ ಹಂಚಿಕೆ ಮಾಡಲಾಗಿಲ್ಲ.

ಪಕ್ಷೇತರ ಶಾಸಕರಾಗಿ ಗುರುತಿಸಿಕೊಂಡಿದ್ದ ಕೆಪಿಜೆಪಿಯ ಆರ್.ಶಂಕರ್ ಮತ್ತು ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಜೂನ್ 14 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಈವರೆಗೆ ಅವರಿಬ್ಬರಿಗೆ ಖಾತೆ ನೀಡಲಾಗಿಲ್ಲ.

ಸಂಪುಟ ವಿಸ್ತರಣೆ : ಇಬ್ಬರು ಹೊಸ ಸಚಿವರಿಗೆ ಇನ್ನೂ ಖಾತೆ ಸಿಕ್ಕಿಲ್ಲ ಸಂಪುಟ ವಿಸ್ತರಣೆ : ಇಬ್ಬರು ಹೊಸ ಸಚಿವರಿಗೆ ಇನ್ನೂ ಖಾತೆ ಸಿಕ್ಕಿಲ್ಲ

ಆದರೆ ಈ ಬಗ್ಗೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಆರ್.ಶಂಕರ್ ಅವರು, ನನಗೆ ಪೌರಾಡಳಿತ ಖಾತೆ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

I may get municipal administration portfolio: R Shankar

ಆರ್.ಶಂಕರ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ದಿನೇಶ್ ಗುಂಡೂರಾವ್ ಅವರಿಗೆ ಹೂಗುಚ್ಛ ನೀಡಿ, ಸಚಿವರನ್ನಾಗಿಸಿದ್ದಕ್ಕೆ ಧನ್ಯವಾದವನ್ನೂ ಹೇಳಿದರು.

ಸಂಪುಟ ವಿಸ್ತರಣೆ ಬಳಿಕ ಒಗ್ಗೂಡಿದ ಕಾಂಗ್ರೆಸ್‌ ಅತೃಪ್ತ ಶಾಸಕರು? ಸಂಪುಟ ವಿಸ್ತರಣೆ ಬಳಿಕ ಒಗ್ಗೂಡಿದ ಕಾಂಗ್ರೆಸ್‌ ಅತೃಪ್ತ ಶಾಸಕರು?

ಕಾಂಗ್ರೆಸ್‌ನ ಶಿವಳ್ಳಿ ಅವರು ಈ ಮೊದಲು ಪೌರಾಡಳಿತ ಇಲಾಖೆಯನ್ನು ಸಂಭಾಳಿಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ ಖಾತೆ ಖಾಲಿ ಉಳಿದಿದೆ. ಅದೇ ಖಾತೆ ದೊರೆಯುವ ವಿಶ್ವಾಸದಲ್ಲಿ ಆರ್.ಶಂಕರ್ ಅವರಿದ್ದಾರೆ. ನಾಗೇಶ್ ಅವರಿಗೆ ಯಾವ ಖಾತೆ ದೊರೆಯುತ್ತದೆ ಎಂಬ ಖಾತರ ಇದೆ.

English summary
New minister R Shankar said he may get municipal administration portfolio. He become minister few days back but he did not get any portfolio still.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X