ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಯನ್ನು ಬೆಂಬಲಿಸಿ ನಾನು ತಪ್ಪು ಮಾಡಿದೆ: ಶಂಕರ್ ಬಿದರಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: "ಮೋದಿಯನ್ನು ಬೆಂಬಲಿಸಿ ನಾನು ಬಹಳ ದೊಡ್ಡ ತಪ್ಪು ಮಾಡಿದೆ" ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಲವು ಪೋಸ್ಟ್‌ಗಳನ್ನು ಮಾಡಿರುವ ಶಂಕರ ಬಿದರಿ, ಮೋದಿ ಹಾಗೂ ಬಿಜೆಪಿ ಸರ್ಕಾರ ತಮಗೆ ನಿರಾಸೆ ಮೂಡಿಸಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಹಲವು ವಿಷಯಗಳ ಕುರಿತು ಪ್ರಸ್ತಾಪ ಮಾಡಿರುವ ಅವರು, ಬಿಜೆಪಿ ತಮ್ಮ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಮೋದಿಯವರೂ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಜನರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಈಚೆಗಷ್ಟೆ ಬಿದರಿ ಬಿಜೆಪಿ ಮೇಲೆ ಆರೋಪಿಸಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ಸರ್ಕಾರದ ಕಾರ್ಯವೈಖರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಂಕರ್ ಬಿದರಿ ಬಿಜೆಪಿ ಸರ್ಕಾರದ ಕುರಿತು ಏನು ಹೇಳಿದ್ದಾರೆ? ಮುಂದೆ ಓದಿ...

"ನೀವೂ ವಿಫಲರಾದಿರಿ ಮೋದಿ"

ಭ್ರಷ್ಟಾಚಾರ ಹಾಗೂ ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳನ್ನು ಈ ವ್ಯವಸ್ಥೆಯಿಂದ ಮೋದಿಯವರು ತೆಗೆದುಹಾಕುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಏಳು ವರ್ಷಗಳು ಕಳೆದು ಹೋದವು. ನಮ್ಮ ಭರವಸೆಗಳು ಸುಳ್ಳಾಗಿವೆ. ನೀವೂ ವಿಫಲರಾಗಿದ್ದೀರಿ ಎಂದು ಮೋದಿಯವರ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಇಂಥ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು"

"ಒಂದು ಹನಿ ನೀರನ್ನೂ ವ್ಯರ್ಥಮಾಡುವುದಿಲ್ಲ ಎಂದಿದ್ದರು"

1999ರಿಂದಲೂ ಕೃಷ್ಣಾ ನದಿ ಕಣಿವೆ ಬಿಜೆಪಿಗೆ ನಿರಂತರ ಬೆಂಬಲ ನೀಡಿದೆ. ಆ ಸಮಯ ಮೋದಿಯವರು ಒಂದು ಹನಿ ನೀರನ್ನೂ ವ್ಯರ್ಥವಾಗಲು ನಾನು ಬಿಡುವುದಿಲ್ಲ ಎಂದಿದ್ದರು. ನಾವು ಅವರನ್ನು ನಂಬಿದ್ದೆವು. ಆದರೆ ಏಳು ವರ್ಷಗಳು ಕಳೆದವು. ಇಂದಿಗೂ ಕರ್ನಾಟಕಕ್ಕೆ ಮೀಸಲಾದ 300ಟಿಎಂಸಿ ನೀರು ವ್ಯರ್ಥವಾಗಿ ಹೋಗುತ್ತಿದೆ ಎಂದು ಹೇಳಿದ್ದಾರೆ.

"ಇಲ್ಲೇ ಇದ್ದುಕೊಂಡು ದೇಶಕ್ಕೆ ಮೋಸ ಮಾಡಬೇಡಿ"

ಜನರ ಸೇವೆಯನ್ನು ಮಾಡಲು ಹಾಗೂ ದೇಶಕ್ಕೆ ಕೈಲಾದಷ್ಟು ಒಳಿತನ್ನು ಮಾಡಲು ಸಾರ್ವಜನಿಕ ಸೇವೆಗೆ ಬರುತ್ತಾರೆ. ಆದರೆ ಈ ಕೆಲಸವನ್ನು ಅವರು ಮಾಡುತ್ತಿಲ್ಲ ಎಂದರೆ, ಅವರು ಸಾರ್ವಜನಿಕ ಜೀವನದಿಂದ ಹೊರಗೆ ಹೋಗಬೇಕು. ಆದರೆ ಇಲ್ಲೇ ಇದ್ದುಕೊಂಡು ತಮಗೆ ತಾವು, ಜನರಿಗೆ ಮತ್ತು ದೇಶಕ್ಕೆ ಮೋಸ ಮಾಡುವುದನ್ನು ಮುಂದುವರೆಸಬಾರದು ಎಂದಿದ್ದಾರೆ.

ಬಿಜೆಪಿಗೆ ಸೆಲ್ಯೂಟ್ ಹೊಡೆದ ಶಂಕರ ಬಿದರಿ (ಐಪಿಎಸ್)ಬಿಜೆಪಿಗೆ ಸೆಲ್ಯೂಟ್ ಹೊಡೆದ ಶಂಕರ ಬಿದರಿ (ಐಪಿಎಸ್)

"ಮೋದಿ ಅಧಿಕಾರಕ್ಕೆ ಬಂದಾಗ ಉತ್ಸಾಹದಲ್ಲಿದ್ದೆ"

ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ಉತ್ಸಾಹದಲ್ಲಿದ್ದೆ. ಮೋದಿ ಜನರನ್ನು ತನ್ನೊಂದಿಗೆ ಕೊಂಡೊಯ್ದು ದೇಶದ ಹಣೆ ಬರಹವನ್ನು ಬದಲಾಯಿಸುತ್ತಾರೆ ಎಂದು ನಂಬಿಕೊಂಡಿದ್ದೆ. ಈ ಕಾರಣಕ್ಕೇ ನಾನು ಅವರಿಗೆ ಅಪನಗದೀಕರಣ ಹಾಗೂ 370ರ ವಿಧಿ ಸಂಬಂಧ ಬೆಂಬಲ ವ್ಯಕ್ತಪಡಿಸಿದ್ದೆ. ಆದರೆ ಇಂದು ನನಗೆ ತುಂಬಾ ಬೇಸರವಾಗುತ್ತಿದೆ. ಮೋದಿ ಕೂಡ ಸೋತಿದ್ದಾರೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

Recommended Video

ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮದ ಹೊಸ ಶಕೆ-ನಮಾಮಿ ಬ್ರಹ್ಮಪುತ್ರ ಉತ್ಸವದಲ್ಲಿ ಮೋದಿ ಭಾಗಿ | Oneindia Kannada

"ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿಯವರು ಮೂರ್ಖರೇ?"

ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿಯವರು ಮೂರ್ಖರೇ? ದೇಶ ಬಡತನದಲ್ಲಿದ್ದಾಗ ವಿದೇಶಿ ತೈಲ, ವಿಮಾ ಕಂಪನಿಗಳು, ಪಿಎಸ್‌ಯುಗಳಂಥ ರಾಷ್ಟ್ರೀಯ ಸ್ವತ್ತುಗಳನ್ನು ಅವರು ಮಾಡಿದ್ದರು. ಅವರು ಮಾಡಿದ ಈ ರಾಷ್ಟ್ರೀಯ ಸ್ವತ್ತುಗಳು ಇಷ್ಟು ಬೇಗ ವಿದೇಶಿ ಕಂಪನಿಗಳಿಗೆ ಮಾರಾಟಕ್ಕೆ ಬರಲಿವೆ ಎಂದು ಊಹೆ ಕೂಡ ಮಾಡಿರಲಿಲ್ಲ. ಅಪನಗದೀಕರಣದ ನಂತರ ಕೋಟಿಗಟ್ಟಲೆ ಹಣ ಕರ್ನಾಟಕದ ಕೋಆಪರೇಟಿವ್ ಬ್ಯಾಂಕ್‌ಗಳಲ್ಲಿ ಹಾಗೂ ಇನ್ನಿತರ ರಾಜ್ಯಗಳಲ್ಲಿ ವಿನಿಯಮವಾಗಿದ್ದವು. ಆರ್ ಬಿಐ ತೆಗೆದುಕೊಂಡ ಕ್ರಮವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

English summary
I made a mistake by supporting modi. He also failed in this 7 year of administration, Said Former Police Commissioner Shankar Bidari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X