ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸೋದು ಗೊತ್ತಿತ್ತು: ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ನವೆಂಬರ್ 15: ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸುವುದು ನನಗೆ ಗೊತ್ತಿತ್ತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಶರತ್ ಬಚ್ಚೇಗೌಡರ ಸ್ಪರ್ಧೆ ವಿಚಾರ ರಾಜ್ಯಾಧ್ಯಕ್ಷರ ಬಳಿ ಮಾತನಾಡಿದ್ದೇನೆ, ಈ ಬಗ್ಗೆ ಅವರು ಏನು ಕ್ರಮ ಕೈಗೊಳ್ಬೇಕೋ ಕೈಗೊಳ್ಳಲಿದ್ದಾರೆ, ಅವರು ನಾಮಪತ್ರ ಸಲ್ಲಿಕೆ ಮಾಡುವ ವಿಚಾರ ನನಗೆ ತಿಳಿದಿತ್ತು ಎಂದರು.

ಟಿಕೆಟ್ ಇಲ್ಲ ಆದ್ರೆ ಆರ್‌ ಶಂಕರ್‌ಗೆ ಯಡಿಯೂಪ್ಪರಿಂದ ಹೊಸ ಆಫರ್ಟಿಕೆಟ್ ಇಲ್ಲ ಆದ್ರೆ ಆರ್‌ ಶಂಕರ್‌ಗೆ ಯಡಿಯೂಪ್ಪರಿಂದ ಹೊಸ ಆಫರ್

ನನ್ನ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

I knew That Sharat Bachegowda Would Submit The Nomination

15 ಜನರನ್ನು ಸೋಲಿಸುವುದೇ ನನ್ನ ಗುರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬೇರೆ ಪಕ್ಷದ ನಾಯಕರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನಾಯ್ತು ನನ್ನ ಪಕ್ಷವಾಯ್ತು, ನನ್ನ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಗ್ಗೆ ಅಷ್ಟೇ ನಾನು ಮಾತನಾಡೋದು ಎಂದಿದ್ದಾರೆ.

ಅವರವರ ಅನುಕೂಲಕ್ಕೆ ತಕ್ಕಂತೆ ಅವರು ಮಾತನಾಡುತ್ತಾರೆ, ಆದರೆ ಅವರ ಮಾತಿಗೆ ನನ್ನ ಆಕ್ಷೇಪ ಇಲ್ಲ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂದು ಜನರು ತೀರ್ಮಾನ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನಾವು 15 ಕ್ಷೇತ್ರ ಗೆದ್ದೇ ಗೆಲ್ತೀವಿ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ.

ಶರತ್ ಬಚ್ಚೇಗೌಡರ ಸ್ಪರ್ಧೆ ವಿಚಾರ ರಾಜ್ಯಾಧ್ಯಕ್ಷರ ಬಳಿ ಮಾತನಾಡಿದ್ದೇನೆ, ಈ ಬಗ್ಗೆ ಅವರು ಏನು ಕ್ರಮ ಕೈಗೊಳ್ಬೇಕೋ ಕೈಗೊಳ್ಳಲಿದ್ದಾರೆ, ಅವರು ನಾಮಪತ್ರ ಸಲ್ಲಿಕೆ ಮಾಡುವ ವಿಚಾರ ನನಗೆ ತಿಳಿದಿತ್ತು ಎಂದರು.

ಇನ್ನು ಆರ್ ಶಂಕರ್ ವಿಚಾರ ಕುರಿತು ಮೌನ ಮುರಿದಿರುವ ಅವರು, ಆರ್ ಶಂಕರ್ ರಾಣಿಬೆನ್ನೂರಿನಿಂದ ಸ್ಪರ್ಧೆ ಮಾಡಬೇಕು ಅಂತಾ ಆಸೆ ಪಟ್ಟಿದ್ದು ನಿಜ.ಆದರೆ ಅದರದೇ ಆದ ವಿಶೇಷ ಕಾರಣಗಳಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ,ಈಗಾಗಲೇ ಅವರನ್ನು ನಾನು ಮನವೊಲಿಸಿದ್ದೇನೆ.

ನಿನಗೆ ಒಂದು ರೂಪಾಯಿ ಖರ್ಚು ಇಲ್ಲದರ ನಿನ್ನ ಎಂಎಲ್ಸಿ ಮಾಡಿ ಮಂತ್ರಿ ಮಾಡ್ತೇನೆ ಎಂದು ಭರವಸೆ ನೀಡಿದ್ದೇನೆ. ನಿನ್ನ ನಂಭಿಕೆಗೆ ದ್ರೋಹ ಮಾಡಲ್ಲ ಎಂದು ಹೇಳಿದ್ದೇನೆ.

ಆರ್ ಶಂಕರ್ ಮೇಲೆ ಅವರ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸೋದು ಸಹಜ. ಆದರೆ ಈ ಚಟುವಟಿಕೆಗಳು ಒಂದು ಹಂತಕ್ಕೆ ಬಂದ ನಂತರ ಈ ಎಲ್ಲಾ ಸಮಸ್ಯೆಗಳು ನಿವಾರಣೆ ಯಾಗಲಿವೆ ಎಂದು ಹೇಳಿದ್ದಾರೆ.

English summary
Chief Minister BS Yediyurappa Said that 'I knew That Sharat Bachegowda Would Submit The Nomination'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X