ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟರ್ ಐಡಿ ಸಿಕ್ಕಿದ ಫ್ಲ್ಯಾಟ್ ಗೂ ನನಗೂ ಸಂಬಂಧವಿಲ್ಲ: ರಾಕೇಶ್

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 9: 9,746ನಕಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ವ್ಯಾಪ್ತಿಯ ಜಾಲಹಳ್ಳಿಯ ಫ್ಲ್ಯಾಟ್ ಗೂ ನನಗೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕ ರಾಕೇಶ್ ಹೇಳಿದ್ದಾರೆ.

ಜೊತೆಗೆ ಫ್ಲ್ಯಾಟ್ ಮಾಲಿಕರಾದ ಮಂಜುಳಾ ನಂಜಾಮರಿ ನನಗೆ ದೂರದ ಸಂಬಂಧಿಯಾಗಿದ್ದು, ಅವರೊಂದಿಗೆ ಕಳೆದ 10 ವರ್ಷಗಳಿಂದ ಯಾವುದೇ ಸಂಬಂಧವಿಲ್ಲ ಎಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಕಲಿ ವೋಟರ್ ಐಡಿ ಎಂಬ 'ಬೃಹನ್ನಾಟಕ'ದ ಈವರೆಗಿನ ಬೆಳವಣಿಗೆನಕಲಿ ವೋಟರ್ ಐಡಿ ಎಂಬ 'ಬೃಹನ್ನಾಟಕ'ದ ಈವರೆಗಿನ ಬೆಳವಣಿಗೆ

ಇದೇ ವೇಳೆ ಈ ಮನೆಯಲ್ಲಿ ಮತದಾರರ ಗುರುತಿನ ಚೀಟಿ ಇರುವ ಬಗ್ಗೆ ನಿಮಗೆ ಹೇಗೆ ಮಾಹಿತಿ ಸಿಕ್ಕಿತು ಎಂಬ ಪ್ರಶ್ನೆ ವರದಿಗಾರರಿಂದ ಎದುರಾಯಿತು. ಇದಕ್ಕೆ ಉತ್ತರಿಸಿದ ರಾಕೇಶ್, "ಮನೆಯೊಳಗೆ ಮತದಾರರ ಗುರುತಿನ ಚೀಟಿಗಳನ್ನು ಇಡಲಾಗಿದೆ ಎಂಬ ಖಚಿತ ಮಾಹಿತಿ ಸಿಕ್ಕ ನಂತರವಷ್ಟೇ ನಾವು ಮನೆಯಲ್ಲಿ ಹುಡುಕಾಡಿದೆವು. ಮನೆಗೆ ಕಾರುಗಳು ಬರುವುದು ಹೋಗುವುದರ ಮೇಲೆ ನಾವು ನಿಗಾ ಇಟ್ಟಿದ್ದೆವು," ಎಂದು ವಿವರಿಸಿದ್ದಾರೆ.

I have no connection with that flat: Rakesh

ಈ ಸಂದರ್ಭ ಮತ್ತೆ ಪತ್ರಕರ್ತರು ಮತ್ತೆ, 'ಅದೇ ಮನೆಯ ಮೇಲೆ ಹೇಗೆ ನಿಗಾ ಇಟ್ಟಿದ್ರಿ?' ಎಂದು ಪ್ರಶ್ನಿಸಿದರು. ಇದರಿಂದ ಸ್ವಲ್ಪ ತಬ್ಬಿಬ್ಬಾದ ರಾಕೇಶ್ ಮತ್ತೆ ಹಳೇ ಕಥೆ ಉರು ಹೊಡೆದರು. ಆಗ ಪಕ್ಕದಲ್ಲಿದ್ದ ಅನ್ವರ್ ಮಾಣಿಪ್ಪಾಡಿ 'ಪ್ರಚಾರಕ್ಕೆ ಹೋದಾಗ ಎಂದು ಹೇಳಿ' ಎಂದು ಕಿವಿಯಲ್ಲಿ ಉಸುರಿದರು. ನಂತರ ರಾಕೇಶ್ ಕೂಡ ಅದೇ ಮಾತನ್ನು ಪುನರುಚ್ಛರಿಸಿದರು.

ಇನ್ನು ಈ ಸಂಬಂಧ ಬಿಜೆಪಿ ನಾಯಕರ ನಿಯೋಗ ಇಂದು ಸಂಜೆ 6 ಗಂಟೆಗೆ ಚುನಾವಣಾ ಆಯೋಗಕ್ಕೆ ತೆರಳಿ ದೂರು ನೀಡಲಿದೆ. ಸ್ಮೃತಿ ಇರಾನಿ, ಮುಖ್ತಾರ್ ಅಬ್ಬಾಸ್ ನಕ್ವಿ, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಅವರ ನಿಯೋಗ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಲಿದೆ.

English summary
"I have no connection with that flat, neither do I have any relation with that aunt (Manjula Nanjundmuri) for last 10 years,” said BJP Supporter Rakesh, who Congress alleged was tenant of the flat in Bengaluru where 9746 voter IDs were seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X