ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಇಂದ 5 ಕೋಟಿ ಸಾಲ ಪಡೆದಿರುವ ಬಗ್ಗೆ ಜಮೀರ್ ಅಹ್ಮದ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜೂನ್ 12: ಐಎಂಎ ಜ್ಯುವೆಲರ್ಸ್‌ನ ಮಾಲೀಕ ಮನ್ಸೂರ್ ಖಾನ್ ಅವರಿಂದ ಐದು ಕೋಟಿ ಸಾಲ ಪಡೆದಿದ್ದೇನೆ ಎಂಬುದು ಸಂಪೂರ್ಣ ಸುಳ್ಳು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

2017 ರಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಅವರಿಗೆ ನನ್ನ ಒಂದು ಸೈಟನ್ನು ಮಾರಾಟ ಮಾಡಿದ್ದೆ ಅದರ ಅಡ್ವಾನ್ಸ್‌ ಆಗಿ ಐದು ಕೋಟಿ ಹಣ ಪಡೆದಿದ್ದೆ ಆ ನಂತರ ಅವರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದೆ ಎಂದು ಹೇಳಿದರು.

ಐಎಂಎ ಹಗರಣದಲ್ಲಿ ಭಾಗಿ ಆರೋಪ: ರೋಶನ್ ಬೇಗ್ ಹೇಳಿದ್ದು ಏನು?ಐಎಂಎ ಹಗರಣದಲ್ಲಿ ಭಾಗಿ ಆರೋಪ: ರೋಶನ್ ಬೇಗ್ ಹೇಳಿದ್ದು ಏನು?

ನಾನು ಈ ವರೆಗೆ ನಾಲ್ಕು-ಐದು ಬಾರಿ ಮನ್ಸೂರ್ ಖಾನ್ ಅವರನ್ನು ಭೇಟಿ ಮಾಡಿರಬಹುದು ಅಷ್ಟೆ, ಕಳೆದ ಕೆಲವು ದಿನಗಳ ಹಿಂದೆ ಇಫ್ತಾರ್ ಕೂಟದಲ್ಲಿ ಭೇಟಿ ಮಾಡಿದ್ದೆ ಹಾಗೂ ರಂಜಾನ್ ದಿನದಂದು ಅವರ ಮಳಿಗೆಗೆ ಆಹ್ವಾನದ ಮೇರೆಗೆ ಹೋಗಿದ್ದೆ ಬಿಟ್ಟರೆ ನನಗೂ ಅವರಿಗೂ ಯಾವುದೇ ವ್ಯಾವಹಾರಿಕ ಸಂಬಂಧ ಇಲ್ಲ ಎಂದು ಜಮೀರ್ ಅಹ್ಮದ್ ಹೇಳಿದರು.

I did not take 5 crore rupees loan from IMA owner: Zameer Ahmed

ಜಮೀರ್ ಅಹ್ಮದ್ ಅವರು ಐಎಂಎ ಜ್ಯುವೆಲರ್ಸ್‌ ಮಾಲೀಕ ಮನ್ಸೂರ್ ಖಾನ್ ಅವರಿಂದ ಐದು ಕೋಟಿ ಸಾಲ ಪಡೆದಿದ್ದಾರೆ ಎಂದು ಸುದ್ದಿ ಹರಿಡಿದ್ದ ಕಾರಣ ಅವರು ಮೇಲ್ಕಂಡೆ ಸ್ಪಷ್ಟನೆಯನ್ನು ಸುದ್ದಿಗೋಷ್ಠಿಯಲ್ಲಿ ಇಂದು ನೀಡಿದರು.

ಚಾರಿತ್ರ್ಯ ಹರಣ, ರಾಜಕೀಯ ಕುತಂತ್ರಕ್ಕೆ ಬಲಿಪಶುವಾಗಲಾರೆ: ಬೇಗ್ ಚಾರಿತ್ರ್ಯ ಹರಣ, ರಾಜಕೀಯ ಕುತಂತ್ರಕ್ಕೆ ಬಲಿಪಶುವಾಗಲಾರೆ: ಬೇಗ್

ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದು ಸ್ವಾಗತಾರ್ಹ, ಪ್ರಕರಣವನ್ನು ಸಿಬಿಐಗೆ ವಹಿಸಿದರೂ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.

English summary
Minister Zameer Ahmed told that he did not take 5 crore rupees loan from IMA jewels owner Mansur Khan. He said i sold my property to him so i took 5 crore advance that's it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X