ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರು ನನಗೆ ಏಳೇಳು ಜನ್ಮ ಕೊಟ್ಟರೂ 'ಅವರ' ಸರಿ-ಸಮನಾಗಲು ಸಾಧ್ಯವಿಲ್ಲ!

|
Google Oneindia Kannada News

ಬೆಂಗಳೂರು, ಅ. 23: ರಾಜಕೀಯ ಗುಟ್ಟುಗಳ ಬಹಿರಂಗ, ಜೊತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ವಿಚಾರಗಳು ಈ ಉಪ ಚುನಾವಣೆಯಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುತ್ತಿವೆ. ಹಿಂದೆ ಒಂದೇ ಪಕ್ಷದಲ್ಲಿ ಇದ್ದವರು ಈಗ ಎದುರು ಬದುರಾಗಿ ತೊಡೆ ತಟ್ಟಿ ಯುದ್ಧಕ್ಕೆ ನಿಂತಿದ್ದಾರೆ. ಹೀಗಾಗಿ ಆರೋಪಕ್ಕೆ ಪ್ರತ್ಯಾರೋಪ, ಹೇಳಿಕೆಗೆ ಪ್ರತಿ ಹೇಳಿಕೆಗಳು ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಜೋರಾಗಿ ಕಂಡುಬರುತ್ತಿವೆ.

ಅದರಲ್ಲೂ ಆರ್ ಆರ್ ನಗರ ಉಪ ಚುನಾವಣೆ ರಂಗೇರಿದೆ. ನಿನ್ನೆ ಚುನಾವಣಾ ಪ್ರಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಇವತ್ತು ಬಜೆಪಿ ಅಭ್ಯರ್ಥಿ ಮುನಿರತ್ನ ಅವರು ತಿರುಗೇಟು ನೀಡಿದ್ದಾರೆ. ಯುದ್ಧದಲ್ಲಿ ಎದುರಾಳಿ ಸರಿಸಮ ಇದ್ದರೆ ಮಾತ್ರ ಹೊರಾಟ ಬಹುದೆಂದು ಮುನಿರತ್ನ ಅವರ ಕುರಿತು ಡಿ.ಕೆ. ಶಿವಕುಮಾರ್ ನಿನ್ನೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ‌ಮುನಿರತ್ನ ತಿರುಗೇಟು ನೀಡಿದ್ದಾರೆ.

ಡಿಕೆಶಿ ಹೇಳಿದ ಮಾತು ಸತ್ಯ

ಡಿಕೆಶಿ ಹೇಳಿದ ಮಾತು ಸತ್ಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ ಮಾತು ಸತ್ಯ. ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ. ಏಳೇಳು ಜನ್ಮದಲ್ಲೂ ಡಿಕೆಶಿ ಅವರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ. ಡಿಕೆಶಿ ಎಷ್ಟು ದೊಡ್ಡವರು? ಅವರ ಮುಂದೆ ನಾನು ಸಣ್ಣವನು.


ಅವರು ಇವತ್ತು ಯಾವ ಮಟ್ಟದಲ್ಲಿದ್ದಾರೆ? ನಾನು ಆ ಮಟ್ಟಕ್ಕೆ ತಲುಪಲು ಆಗಲ್ಲ. ದೇವರು ನನಗೆ ಏಳು ಜನ್ಮ ಕೊಟ್ರೂ ಅವರ ಸಮನಾಗಿ ಬರಲು ಸಾಧ್ಯವಿಲ್ಲ. ಡಿಕೆಶಿ ಅವರಿಗೂ ನನಗೂ ಹೋಲಿಕೆ ಮಾಡಿ ಮಾತನಾಡುವುದೇ ತಪ್ಪು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ಅವರು ನಿರುದ್ಯೋಗಿ ಆಗಿದ್ದಾರೆ

ಅವರು ನಿರುದ್ಯೋಗಿ ಆಗಿದ್ದಾರೆ

ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನಾವು ಹೊರಗೆ ಬಂದ ಮೇಲೆ ಅಲ್ಲಿ 65 ಜನ ಶಾಸಕರು ಉಳಿದಿದ್ದಾರೆ. ಈಗ ಅಲ್ಲಿ ಉಳಿದಿರುವ ಎಲ್ಲ 65 ಶಾಸಕರಿಗೂ ಮಾಡೋದಕ್ಕೆ ಕೆಲಸ ಇಲ್ಲ. ಅವರೆಲ್ಲರೂ ನಿರುದ್ಯೋಗಿಗಳಾಗಿದ್ದಾರೆ.

ಕಾಂಗ್ರೆಸ್ ಶಾಸಕರು ಉದ್ಯೋಗಸ್ಥರಲ್ಲ. ಹೀಗಾಗಿ ಅವರವರೇ ಒಂದೊಂದು ಸಂಘ‌ ಕಟ್ಟಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಮುನಿರತ್ನ ಅವರು ಕಾಂಗ್ರೆಸ್ ಪಕ್ಷದಲ್ಲಿನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕರ ಕುರಿತು ಮಾತನಾಡಿದ್ದಾರೆ.

ಅವರನ್ನು ದೇವರೇ ಕಾಪಾಡಬೇಕು

ಅವರನ್ನು ದೇವರೇ ಕಾಪಾಡಬೇಕು

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ಹಾಗೂ ಅದಕ್ಕೆ ಡಿಕೆಶಿ ಪ್ರತಿಕ್ರಿಯೆಗೆ ಮುನಿರತ್ನ ಅವರು ಲೇವಡಿ ಮಾಡಿದ್ದಾರೆ. ನಿನ್ನೆ ಕಾಂಗ್ರೆಸ್‌ ಪಕ್ಷದ ಒಬ್ಬ ಶಾಸಕರು ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಅಂತಾರೆ, ಅವರ ಹೇಳಿಕೆಗೆ ಮತ್ತೊಬ್ಬರು ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತ ಸೋನಿಯಾ ಗಾಂಧಿ ಹೇಳಿದ್ದಾರಾ ಎಂದು ಪ್ರಶ್ನೆ ಮಾಡುತ್ತಾರೆ?

ಕಾಂಗ್ರೆಸ್ ಪಕ್ಷದಲ್ಲಿ‌ ಈಗಲೇ ಈ ಪರಿಸ್ಥಿತಿ ಇದೆ. ಇನ್ಮುಂದೆ ಇನ್ನೆಂತಹ ಪರಿಸ್ಥಿತಿ ಬರುತ್ತದೆಯೋ ಗೊತ್ತಿಲ್ಲ. ಆ ಪಕ್ಷದವರನ್ನು ದೇವರೇ ಕಾಪಾಡಬೇಕು ಎಂದು ಡಿ.ಕೆ. ಶಿವಕುಮಾರ್ ಹೆಸರು ಹೇಳದೇ ಮುನಿರತ್ನ ಮಾತನಾಡಿದರು.

Recommended Video

ಯುವಜನತೆಗೆ ಉದ್ಯೋಗ ಕೊರತೆ | Raghuram Rajan | Oneindia Kannada
ಮತದಾರರು ಸಂತೋಷವಾಗಿದ್ದಾರೆ

ಮತದಾರರು ಸಂತೋಷವಾಗಿದ್ದಾರೆ

ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಮತದಾರರು ಸಂತೋಷವಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಪ್ರಚಾರ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮತದಾರರು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ನಿರುದ್ಯೋಗಿಗಳು, ನಾನೇಕೆ ಅವರ ಸಂಪರ್ಕ ಮಾಡಲಿ? ನಾನು ಕಾಂಗ್ರೆಸ್ ಪಕ್ಷದ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕವನ್ನು ನಾನು ಮಾಡುವುದಿಲ್ಲ ಎಂದು ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.

English summary
RR Nagar BJP candidate Munirathna said during the election campaign that I could not grow to be equal to KPCC president DK Shivakumar. Know more about his statement in Kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X