ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಹೆಚ್ಚು ಓದಿದವನಲ್ಲ, 48 ವರ್ಷಕ್ಕೆ ಪದವಿ ಪಡೆದವನು: ಡಿಕೆ ಶಿವಕುಮಾರ್

|
Google Oneindia Kannada News

Recommended Video

Karnataka Crisis: ನಾನು ಹೆಚ್ಚು ಓದಿದವನಲ್ಲ, 48 ವರ್ಷಕ್ಕೆ ಪದವಿ ಪಡೆದವನು: ಡಿಕೆ ಶಿವಕುಮಾರ್

ಬೆಂಗಳೂರು, ಜುಲೈ 23: ನಾನು ಹೆಚ್ಚು ಓದಿದವನಲ್ಲ 48 ವರ್ಷಕ್ಕೆ ಪದವಿ ಪೂರೈಸಿದವನು ಎಂದು ಸಚಿವ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಇಂದು ಪ್ರಸ್ತಾಪಿಸಿದರು.

ನಾನು ಹೆಚ್ಚು ಓದಿಲ್ಲ, ಹೆಚ್ಚು ಪುಸ್ತಕಗಳನ್ನೂ ಕೂಡ ಓದಿಲ್ಲ, ಕಾಲೇಜಿನಲ್ಲಿದ್ದಾಗಲೇ ಚುನಾವಣೆಗೆ ನಿಂತವನು. ಏನು ಓದಿಲ್ಲ ಆದರೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾನೆ ಎಂದು ಅಂದುಕೊಂಡವರೆಷ್ಟೋ ಮಂದಿ ಇದ್ದಾರೆ.

ಆದರೆ ಹೆಚ್ಚು ಓದಿಲ್ಲ ಎನ್ನುವ ಕೊರಗು ಯಾವಾಗಲೂ ಇತ್ತು, ಮನೆಯಲ್ಲಿ ಪತ್ನಿ ಮಕ್ಕಳಿಗೆ ಓದಿಸುತ್ತಿರುವಾಗಲೂ ಇದನ್ನೇ ಯೋಚಿಸುತ್ತಿದ್ದೆ. ಕೊನೆಗೆ 48ನೇ ವಯಸ್ಸಿಗೆ ಡಿಗ್ರಿ ಪಡೆಯಬೇಕು ಎಂದು ನಿರ್ಧಾರ ಮಾಡಿ ಓದಿಯೇ ಬಿಟ್ಟೆ. ಸಚಿವನಾಗಿದ್ದೇನೆ ಎನ್ನುವ ಖುಷಿಗಿಂತ ಡಿಗ್ರಿ ಪದವಿ ಪಡೆದಿದ್ದೇನೆ ಎನ್ನುವ ಖುಷಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

I Completed degree in 48 years of my age

ಹೆಚ್ಚು ಓದಿದವನಲ್ಲ. ಕಾಲೇಜಿನಲ್ಲಿದ್ದಾಗಲೇ ಚುನಾವಣೆಗೆ ನಿಂತವನು. 48ನೇ ವಯಸ್ಸಿನಲ್ಲಿ ಪದವಿ ಪಡೆದವನು. ಆಗ ಪುಸ್ತಕಗಳನ್ನು ಓದಿ ರೂಢಿ ಇಲ್ಲ. ಕೃಷ್ಣಬೈರೇಗೌಡ, ಸುರೇಶ್ ಕುಮಾರ್ ಅವರ ಒಡನಾಟದಿಂದ ಕಲಿತವನು. 'ನಮಸ್ತೇ ಸದಾ ವತ್ಸಲೇ' ಪ್ರಾರ್ಥನೆಯ ಸಂದರ್ಭದಿಂದ ನನ್ನ ಮತ್ತು ಸುರೇಶ್ ಕುಮಾರ್ ಒಡನಾಟ ಶುರುವಾಗಿದ್ದು ಎಂದು ನೆನಪು ಮೆಲುಕು ಹಾಕಿದರು.

ಶಾಸಕರ ರಾಜೀನಾಮೆ ಕುರಿತು ಮಾತನಾಡಿ, ರಾಜೀನಾಮೆ ಕೊಟ್ಟ ಸಂಗತಿ ತಿಳಿದಾಗ ಕನಕಪುರದಿಂದ ಓಡೋಡಿ ಬಂದೆ. ಮುನಿರತ್ನ, ಸೋಮಶೇಖರ್ ಎಲ್ಲ ಇದ್ದರು. ರಾಜೀನಾಮೆ ಪತ್ರ ಕಿತ್ತು ಹರಿದು ಹಾಕಿದೆ. ಇಲ್ಲ ಎನ್ನುವುದಿಲ್ಲ.ರಾಜೀನಾಮೆ ನೀಡಿದ ಶಾಸಕರೊಂದಿಗೆ ನಮ್ಮದು 30-40 ವರ್ಷದ ಸ್ನೇಹ. ಭಾವಪೂರ್ಣ ಶ್ರದ್ಧಾಂಜಲಿ ಎಂಬ ಫೋಟೊ ಹಾಕುತ್ತಿದ್ದಾರೆ. ನಿಮ್ಮ ನಾಯಕತ್ವದಲ್ಲಿಯೇ ಹೊರಟು ಹೋಗೋಣ ಎಂದು ನನಗೆ ಮುನಿರತ್ನ ಬುದ್ಧಿವಾದ ಹೇಳಿದ್ದರು. ಜನ ಒಪ್ಪೊಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್‌ನ ಒಂದು ನಿರ್ದೇಶನವಿದೆ. ಇದರಲ್ಲಿ ಅವರ ಹಾಜರಾತಿ ಕಡ್ಡಾಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಒತ್ತಾಯ ಮಾಡುವಂತಿಲ್ಲ ಎಂದು ನಿರ್ದಿಷ್ಟ ಸೂಚನೆ ಇದೆ. ಅವರು ಬಂದಿಲ್ಲ.

ವಿಪ್ ಕೊಟ್ಟರೆ ಅದು ಸುಪ್ರೀಂ ಕೋರ್ಟ್‌ನ ಆಜ್ಞೆ ಉಲ್ಲಂಘನೆ ಒಂದು ಕಡೆ ಆಗುತ್ತದೆ. ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಸ್ಪೀಕರ್ ಅವರಿಗೆ ವಿಪ್ ಉಲ್ಲಂಘನೆ ಅರ್ಜಿ ಸಲ್ಲಿಸಬೇಕು. ಸ್ಪೀಕರ್ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಶಿವಕುಮಾರ್ ಅವರಿಗೆ ಕನಸು ಬಿದ್ದಿದೆಯೇ ಎಂದು ಹೇಳಿದರು.

English summary
Minister DK shivakumar said that I did not study much, I have completed My degree in 48 years of my age.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X