ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನ್ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗಳಲ್ಲಿ ತಲೆ ಹಾಕಲಿ: ರೇವಣ್ಣ

By Nayana
|
Google Oneindia Kannada News

ಬೆಂಗಳೂರು, ಜು.23: ನಾನು ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಯಗಳಲ್ಲಿ ತಲೆ ಹಾಕಲಿ ಎಂದು ಸಚಿವ ಎಚ್‌ಡಿ ರೇವಣ್ಣ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಜರಾಯಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು, ನಾನು ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಇಲಾಖೆಗಳ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಲಿ ಎಂದು ಮಾಧ್ಯಮದವರ ವಿರುದ್ಧ ಗರಂ ಆಗಿದ್ದಾರೆ.

ಸಚಿವ ರೇವಣ್ಣ ಮೇಲೆ ಸಿಟ್ಟಾದ ಕೃಷ್ಣಬೈರೇಗೌಡ, ಪರಮೇಶ್ವರ್‌ಗೆ ದೂರುಸಚಿವ ರೇವಣ್ಣ ಮೇಲೆ ಸಿಟ್ಟಾದ ಕೃಷ್ಣಬೈರೇಗೌಡ, ಪರಮೇಶ್ವರ್‌ಗೆ ದೂರು

ಇತ್ತೀಚೆಗಷ್ಟೇ ಸಚಿವ ಎಚ್‌ಎಂ ರೇವಣ್ಣ ಅವರು ಮುಜರಾಯಿ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು ಎನ್ನುವ ಸುದ್ದಿ ಕೇಳಿಬಂದಿತ್ತು, ಆಗ ಲೋಕೋಪಯೋಗಿ ಸಚಿವ ಮುಜರಾಯಿ ಇಲಾಖೆ ಅಧಿಕಾರಿಗಳ ಜತೆಗೆ ಯಾಕೆ ಸಭೆ ನಡೆಸಿದ್ದಾರೆ ಎಂದು ಎಲ್ಲರೂ ಪ್ರಶ್ನೆ ಮಾಡಲು ಆರಂಭಿಸಿದ್ದರು.

 HD Revanna

ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಎಚ್‌ಡಿ ರೇವಣ್ಣ ನನ್ನ ವಿರುದ್ಧ ಸುಳ್ಳಿ ಸುದ್ದಿ ಪ್ರಸಾರ ಮಾಡುವುದನ್ನು ಬಿಡಿ, ನಾನು ಬೇರೆ ಯಾವ ಇಲಾಖೆಯ ಅಧಿಕಾರಿಗಳ ಜತೆಯಲ್ಲೂ ಸಭೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಎಚ್‌ಡಿ ರೇವಣ್ ಸರ್ಕಾರಿ ಮನೆ ನವೀಕರಣ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ ಕೇವಲ ಸುಣ್ಣಬಣ್ಣ ಹೊಡೆದಿರುವುದು ಎಷ್ಟೇ ಅದನ್ನೇ ಅಷ್ಟು ದೊಡ್ಡ ವಿಚಾರವನ್ನಾಗಿ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

English summary
PWD minister HD Revanna clarified that he was not attend any other department meetings and as well as he will never interfere in other department activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X