ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

73 ಸಾವಿರ ಸಸಿ ನೆಟ್ಟು ಅಗಲಿದ ಪತಿಯ ನೆನಪು 'ಹಸಿರಾಗಿಸಿದ' ಪತ್ನಿ

|
Google Oneindia Kannada News

ಬೆಂಗಳೂರು, ಜೂನ್ 6: ಗಂಡನ ಸ್ಮರಣಾರ್ಥ ಮನೆಯಲ್ಲಿ ಫೋಟೊಗಳನ್ನು ಹಾಕುವುದು, ಕಾರ್ಯಕ್ರಮ ಆಯೋಜಿಸುವುದು, ವರ್ಷಕ್ಕೆ ಒಂದು ದಿನ ಗಿಡ ನೆಡುವುದನ್ನೂ ನೋಡಿದ್ದೇವೆ ಆದರೆ ಈ ಮಹಿಳೆ ಗಂಡನ ನೆನಪಿಗಾಗಿ 73 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಿ ಎಲ್ಲರಿಗೆ ಮಾದರಿಯಾಗಿದ್ದಾರೆ.

68 ವರ್ಷದ ಜೆನೆಟ್ 2005ರ ಜೂನ್ 5ರಿಂದ ಗಿಡಗಳನ್ನು ನೆಡಲು ಆರಂಭಿಸಿದ್ದರು. 13 ವರ್ಷಗಳ ನಂತರ ನೋಡಿದರೆ ಒಟ್ಟು 73 ಸಾವಿರ ಮರಗಳನ್ನು ನೆಟ್ಟು ಜನರು ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

ಮಂಗಳೂರು ಕ್ರೈಸ್ತ ಧರ್ಮಪ್ರಾಂತದಲ್ಲಿ ಹಸಿರು ಕ್ರಾಂತಿಮಂಗಳೂರು ಕ್ರೈಸ್ತ ಧರ್ಮಪ್ರಾಂತದಲ್ಲಿ ಹಸಿರು ಕ್ರಾಂತಿ

ಮೆಜೆಸ್ಟಿಕ್‌ನಿಂದ ತಮ್ಮ ಸಸಿ ನಡೆವ ಕೆಲಸವನ್ನು ಆರಂಭಿಸಿದ್ದರು. ಬಳಿಕ ಕರ್ನಾಟಕದ ಹಲವು ಭಾಗಗಳಲ್ಲಿ ಈ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮನೆಯ ಆಸುಪಾಸಿನ ಪ್ರದೇಶಗಳಲ್ಲೂ ಗಿಡಗಳನ್ನು ಬೆಳೆಸಿದ್ದಾರೆ.

Husbands memory woman planted 73 thousand trees

ಜನೆತ್ ಅವರ ಗಿಡ ನೆಡುವ ಕಾಯಕ 2005ರ ಸೆಪ್ಟೆಂಬರ್‌ನಿಂದ ಆರಂಭವಾಯಿತು.ಅವರ ಪತಿ ಯಗ್ನೇಶ್ವರನ್ ಅವರ ಸಾವಿನ ಬಳಿಕ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ

ಜನೆಟ್ ಅವರ ಮಾತು'ಬೆಂಗಳೂರಲ್ಲಿ ನಿತ್ಯ ಹಲವು ಕಾಮಗಾರಿಗಳು, ಮನೆ ನಿರ್ಮಾಣ ಇತ್ಯಾದಿಗಳಿಗಾಗಿ ಮರಗಳನ್ನು ಕಡಿಯುತ್ತಾರೆ ಇದರ ವಿರುದ್ಧ ಹೋರಾಟ ಮಾಡೋಣ ಧರಣಿ ಕೂರೋಣ ಎಂದು ಕೆಲ ಸ್ನೇಹಿತರು ನಿರ್ಧರಿಸಿದ್ದರು.

ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್‌ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್‌

ಆದರೆ ನಾನು ವಿಶೇಷವಾಗಿ ಬೇರೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆ.ರಾಜಾನೆಟ್ ಯಜ್ಞೇಶ್ವರನ್ ಚಾರಿಟೆಬಲ್ ಟ್ರಸ್ಟ್‌ ಸ್ಥಾಪಿಸಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾದೆ'' ಎನ್ನುತ್ತಾರೆ.

ಕೃಷ್ಣರಾಜಪುರ, ಪೈ ಲೇಔಟ್‌, ಎಲೆಕ್ಟ್ರಾನಿಕ್ಸ್‌ ಸಿಟಿ, ತಾತಗುಣಿ,ತಲಘಟ್ಟಪುರ, ಕೇಂಬ್ರಿಡ್ಜ್ ಲೇಔಟ್‌, ಕೋರಮಂಗಲ, ಜಕ್ಕೂರು ಇತರೆ ಕಡೆಗಳಲ್ಲಿ 5ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿದ್ದಾರೆ.

English summary
68year old Janet yagneswaran planted 73 thousand trees across the state memory of her husband Yagneswaran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X