• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದುವೆ ಮೊದಲ ರಾತ್ರಿ ದಿನವೇ ಗಂಡನಿಂದ ಹೆಂಡತಿಗೆ ಕಿರುಕುಳ !

|

ಬೆಂಗಳೂರು, ಡಿಸೆಂಬರ್ 03: ವರನಿಗೆ ಓಡಾಡಲಿಕ್ಕೆ ಬೆಂಜ್ ಕಾರು ಉಡುಗೊರೆ. ವಧುವಿಗೆ ಐದು ಕೆ.ಜಿ ಚಿನ್ನ ! ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ಮದುವೆ ಮಾಡಿಸಲಾಗಿತ್ತು. ಆದರೆ, ವಿವಾಹವಾದ ದಿನವೇ ಕುಡಿದ ಅಮಲಿನಲ್ಲಿ ಮೊದಲ ರಾತ್ರಿ ಗಂಡ ಕಿರಿಕ್ ಮಾಡಿಕೊಂಡು ಜೈಲು ಪಾಲಾಗಿದ್ದಾನೆ. ಶ್ರೀಮಂತ ಕುಟುಂಬದ ವರನೆಂದು ಹೆಣ್ಣಿನ ಜತೆಗೆ ಚಿನ್ನ ಧಾರೆ ಎರೆದ ಕುಟುಂಬ ಮಗಳ ಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದೆ.

ಕುಡಿದ ಅಮಲಿನಲ್ಲಿ ಬಂದ ಗಂಡನನ್ನು ಹತ್ತಿರ ಬಿಟ್ಟಿಕೊಳ್ಳದ ನವ ವಿವಾಹಿತೆ ಮೇಲೆ ಅತ್ತೆ ಮಾವ ಕೂಡ ಹಲ್ಲೆ ಮಾಡಿದ್ದಾರೆ. ದೆವ್ವ ಹಿಡಿದೆದೆ ಎಂಬ ನೆಪ ಹಿಟ್ಟುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದ ಹೆಣ್ಣು ಮಗಳು ಗಂಡ ಹಾಗೂ ಆತನ ಕುಟುಂಬದ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನವ ವಿವಾಹಿತೆ ಗಂಡ ಭರತ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಅತ್ತೆ ಮಾವನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಹೆಂಡತಿ ಆತ್ಮಹತ್ಯೆ

ಅದ್ಧೂರಿ ವಿವಾಹ:

ಅದ್ಧೂರಿ ವಿವಾಹ:

ಬಾಣಸವಾಡಿಯ ನಿವಾಸಿ ಬಾಬುರೆಡ್ಡಿ ಪುತ್ರಿ ಶ್ರಾವಣಿ. ಎಲ್‌ಬಿಎಸ್ ನಗರದ ಲೋಕೇಶ್‌ ರೆಡ್ಡಿ ಎಂಬುವರ ಪುತ್ರ ಭರತ್ ಅವರ ನಡುವೆ ವಿವಾಹ ನಿಶ್ಚಯವಾಗಿತ್ತು. ಭರತ್ ಶ್ರೀಮಂತ ಕುಟುಂಬದ ಹಿನ್ನೆಲೆಯಿದ್ದ ಕಾರಣಕ್ಕೆ ಅದಕ್ಕೆ ತಕ್ಕ ಹಾಗೆ ತನ್ನ ಮಗಳು ಚೆನ್ನಾಗಿರಲಿ ಎಂದು ಬಾಬುರೆಡ್ಡಿ ಕೂಡ ಅದ್ಧೂರಿ ಮದುವೆ ಮಾಡಲು ನಿಶ್ಚಯಿಸಿದ್ದರು. ಹಿರಿಯರ ನಿಶ್ಚಯದಂತೆ ಶ್ರಾವಣಿ ಹಾಗೂ ಭರತ್ ಮದುವೆ ಅಕ್ಟೋಬರ್ 29 ರಂದು ಅದ್ಧೂರಿಯಾಗಿ ನಡೆದಿತ್ತು. ಅದ್ಧೂರಿ ಮದವೆಗೆ ತಕ್ಕ ಹಾಕೆ ವರ ಭರತ್ ಗೆ ಉಡುಗೊರೆಯಾಗಿ ಟಾಪ್ ಮಾಡಲ್ ಬೆಂಜ್ ಕಾರ್ ಉಡುಗೊರೆ ನೀಡಲಾಗಿತ್ತು. ತನ್ನ ಮಗಳಿಗೆ ಐದು ಕೆ.ಜಿ ಚಿನ್ನಾಭರಣಗಳನ್ನು ನೀಡಿದ್ದರು ಅದ್ಧೂರಿಯಾಗಿ ಮದುವೆಯನ್ನು ಮಾಡಿಕೊಟ್ಟಿದ್ದರು. ಮಗಳ ಭವಿಷ್ಯ ಚೆನ್ನಾಗಿರಬೇಕು ಎಂದು ನಿಶ್ಚಯಿಸಿ ಬಾಬುರೆಡ್ಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರು. ಆದರೆ ಅಂದುಕೊಂಡಂತೆ ಶ್ರೀಮಂತ ಮನೆತನದ ಹುಡುಗನಲ್ಲಿ ಹೃದಯ ಶ್ರೀಮಂತಿಕೆ ಇರಲಿಲ್ಲ. ಬದಲಿಗೆ ಆತ ತೋರಿದ್ದು ನೀಚ ಬುದ್ಧಿ ಎಂಬುದು ಮೊದಲ ದಿನವೇ ಗೊತ್ತಾಗಿದೆ.

ಕುಡಿದು ಬಂದು ಕುಣಿದಾಡಿದ್ದ :

ಕುಡಿದು ಬಂದು ಕುಣಿದಾಡಿದ್ದ :

ಮದುವೆಯಾದ ದಿನವೇ ನವ ದಂಪತಿಗೆ ಬಾಣಸವಾಡಿಯ ವಧುವಿನ ಮನೆಯಲ್ಲಿ ಮೊದಲ ರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದರು. ಭರತ್ ಶಯನ ಕೋಣೆಗೆ ಹೋಗುವ ಮೊದಲೇ ಕಂಠಪೂರ್ತಿ ಕುಡಿದಿದ್ದ. ಕುಡಿದ ಅಮಲಿನಲ್ಲಿ ಬಂದಿದ್ದ ಗಂಡನ ಕುಣಿತ ನೋಡಿ ಪತ್ನಿ ದೂರ ತಳ್ಳಿದ್ದಳು. ಅವತ್ತು ಮೊದಲ ರಾತ್ರಿ ಕಾರ್ಯವನ್ನು ಮಾಡಲು ನವ ವಧು ಬಿಟ್ಟಿರಲಿಲ್ಲ. ಭರತನ ಕುಡಿತದ ಚಟ ನೋಡಿ ಬೆಚ್ಚಿ ಬಿದ್ದಿದ್ದಳು ಮೊದಲ ದಿನ ನಡೆದಿದ್ದು ಹೇಳಿಕೊಂಡರೆ ಹೆತ್ತವರು ನೋವು ತಿನ್ನುತ್ತಾರೆ ಎಂಬ ಕಾರಣಕ್ಕೆ ಶ್ರಾವಣಿ ಪೋಷಕರ ಬಳಿ ಏನೂ ಹೇಳಿರಲಿಲ್ಲ. ಹೀಗಾಗಿ ಎಲ್ಲವೂ ಸರಿಯಿದೆ ಎಂದು ಭಾವಿಸಿದ್ದರು. ಈ ಬಗ್ಗೆ ತನ್ನ ಅಕ್ಕನ ಬಳಿ ಹೇಳಿಕೊಂಡಿದ್ದು, ಮದುವೆ ಸಂಭ್ರಮದಲ್ಲಿ ಆಕಸ್ಮಿಕ ಆಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು.

ಮತ್ತೆ ಕುಡಿದು ಕಿರಿಕ್ :

ಮತ್ತೆ ಕುಡಿದು ಕಿರಿಕ್ :

ಮರುದಿನ ಅಕ್ಟೋಬರ್ 30 ರಂದು ಗಂಡನ ಮನೆಯಲ್ಲಿ ಮಡಿಲು ತುಂಬಿಸುವ ಹಾಗೂ ಮೊದಲ ರಾತ್ರಿ ಕಾರ್ಯ ಏರ್ಪಡಿಸಲಾಗಿತ್ತು. ಹುಡುಗಿಯ ಮನೆಯಲ್ಲಿ ಕುಡಿದು ಬಂದವನು ಇನ್ನ ಸ್ವಂತ ಮನೆಯಲ್ಲಿ ಸುಮ್ಮನೆ ಇರತ್ತಾನೆಯೇ ? ಎಂದಿನಂತೆ ಕುಡಿದು ಬಂದಿದ್ದಾನೆ. ಈತನ ಕುಡಿತದ ಅಮಲಿನ ಆಟ ನೋಡಿ ಶ್ರಾವಣಿ ಹತ್ತಿರ ಬರಬೇಡ, ನನ್ನನ್ನು ಮುಟ್ಟಲು ಬೇಡ ಎಂದು ದೂರ ತಳ್ಳಿದ್ದಾಳೆ. ಇದರಿಂದ ಕುಪಿತಗೊಂಡ ದಂಪತಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಮದುವೆಯಾದ ಎರಡನೇ ದಿನಕ್ಕೆ ವಿಷಯ ಪೋಷಕರಿಗೆ ಗೊತ್ತಾದರೆ ನೋವು ತಿನ್ನುತ್ತಾರೆ ಎಂದು ಯಾರಿಗೂ ಹೇಳಿಕೊಂಡಿಲ್ಲ. ಹೀಗೆ ಎರಡನೇ ಸಲ ಏರ್ಪಡಿಸಿದ್ದ ಮಧುಚಂದ್ರ ರಾತ್ರಿ ಅಮಲಿನ ಗಲಾಟೆಯೊಂದಿಗೆ ಅಂತ್ಯವಾಗಿದೆ

ಕೊಠಡಿಯಲ್ಲಿ ಕೂಡಿಹಾಕಿ ಹಿಂಸೆ:

ಕೊಠಡಿಯಲ್ಲಿ ಕೂಡಿಹಾಕಿ ಹಿಂಸೆ:

ಪತಿ ಭರತನ ಅಮಲಿನ ಆಟಕ್ಕೆ ಬೇಸತ್ತ ಶ್ರಾವಣಿ ಗಂಡನ ಮನೆಯಲ್ಲಿಯೇ ಇದ್ದಳು. ನನ್ನನ್ನು ಮುಟ್ಟಿಸಿಕೊಳ್ಳಲು ಬಿಡುತ್ತಿಲ್ಲ, ಮೊದಲ ರಾತ್ರಿಯೇ ಆಗಿಲ್ಲ ಎಂದು ಭರತ್ ತನ್ನ ತಾಯಿ ಕಮಲಮ್ಮ ಮತ್ತು ತಂದೆ ಲೋಕೇಶ್ ರೆಡ್ಡಿ ಬಳಿ ಹೇಳಿಕೊಂಡಿದ್ದಾರೆ. ತನ್ನ ಪುತ್ರನ ತಪ್ಪು ಅರಿಯದೇ ದಂಪತಿ ಸೊಸೆ ಶ್ರಾವಣಿಯನ್ನೇ ದೂಷಿಸಿದ್ದಾರೆ. ದೆವ್ವ ಹಿಡಿದಿದೆ ಎಂದು ಭಾವಿಸಿ ಶ್ರಾವಣಿ ಮುಖಕ್ಕೆ ಬೂದಿ ಎರಚಿದ್ದಾರೆ. ಅಲ್ಲದೇ ತಿನ್ನುವ ಅನ್ನದಲ್ಲಿ ಬೂದಿ ಬೆರೆಸಿ ಕೊಟ್ಟಿದ್ದಾರೆ. ತಲೆ ಮೇಲೆ ನಿಂಬೆ ಹಣ್ಣು ಇಟ್ಟು ಕತ್ತರಿಸಿ ಭಯ ಹುಟ್ಟಿಸಿದ್ದಾರೆ. ಶ್ರಾವಣಿ ಮಲಗುತ್ತಿದ್ದ ಕೋಣೆಯಲ್ಲಿ ಮಾಟ ಮಂತ್ರ ಮಾಡಿಸಿದ್ದಾರೆ. ಇದೆಲ್ಲವೂ ಬೇಡ ಎಂದು ಕಾಲು ಹಿಡಿದು ಕೇಳಿ ಕೊಂಡರೂ ಬಿಟ್ಟಿಲ್ಲ. ಮಾಟಗಾರ್ತಿಯನ್ನು ಕರೆಸಿ ಆಕೆಯಿಂದಲೂ ಹಿಂಸೆ ನೀಡಿದ್ದಾರೆ. ನೀನು ಸತ್ತರೇ ಇಲ್ಲೇ ಸಾಯಬೇಕು, ನಿನ್ನ ನೋಡಲು ಯಾರೂ ಬರಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಹಲವಾರು ದಿನ ಕೊಠಡಿಯಲ್ಲಿಯೇ ಕೂಡಿ ಹಾಕಿದ್ದಾರೆ. ಹೀಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾಗಿ ಶ್ರಾವಣಿ ತನ್ನ ದೂರಿನಲ್ಲಿ ನೋವು ತೊಡಿಕೊಂಡಿದ್ದಾರೆ.

  10 ಕೋಟಿ ಕೊಡ್ತೀನಿ ನನ್ನ ಬಿಡುಗಡೆ ಮಾಡಿ ಅಂತ ಹಟ | Shashikala | Oneindia Kannada
  ಕತ್ತು ಹಿಸುಕಿ ರಾಡ್ ನಿಂದ ಹಲ್ಲೆ :

  ಕತ್ತು ಹಿಸುಕಿ ರಾಡ್ ನಿಂದ ಹಲ್ಲೆ :

  ಹೀಗೆ ಹದಿನೈದು ದಿನ ಕಳೆದಂತೆ ನವೆಂಬರ್ 19 ರಂದು ಭರತ್ ಮತ್ತು ಅವರ ತಾಯಿ ಕೋಮಲಮ್ಮ ಮಾಟಗಾರ್ತಿಯನ್ನು ಮನೆಗೆ ಕರೆಸಿದ್ದಾರೆ. ಕೋಣೆಗೆ ಎಳೆದೊಯ್ದು ಅಲ್ಲಿ ಮಾಟ ಮಾಡಿಸಲು ಮುಂದಾಗಿದ್ದು, ತಿರಸ್ಕರಿಸಿದ ಶ್ರಾವಣಿ ಕತ್ತು ಹಿಡಿದು ಅತ್ತೆ ಹಲ್ಲೆ ಮಾಡಿದ್ದಾರೆ. ಪತಿ ಭರತ್ ಕಬ್ಬಿಣದ ರಾಡ್ ನಿಂದ ಬೆನ್ನು ಮೇಲೆ ಹೊಡೆದು ಹಲ್ಲೆ ನಡೆಸಿದ್ದಾರೆ. ಇದರಿಂದ ಶ್ರಾವಣಿಗೆ ತೀವ್ರತರ ಗಾಯಗಳಾಗಿವೆ. ಅತ್ತೆ ಮತ್ತು ಪತಿಯ ಹಿಂಸೆ ತಾಳಲಾರದೇ ಕಿಟಕಿಯಿಂದ ಕೂಗಿ ಕೋಂಡಿದ್ದು, ಅದೇ ಸಮಯಕ್ಕೆ ಶ್ರಾವಣಿ ಅವರ ಅಕ್ಕ ಮತ್ತು ಭಾವ ಬಂದಿದ್ದಾರೆ. ಬಳಿಕ ಅವರ ಮನೆಗೆ ಶ್ರಾವಣಿಯವರನ್ನು ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ನಡೆದ ಎಲ್ಲಾ ಘಟನೆ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಪೋಷಕರ ಸಲಹೆ ಪಡೆದು ಪತಿ ಭರತ್, ಅತ್ತೆ ಕಮಲಮ್ಮ, ಮಾವ ಲೋಕೇಶ್ ರೆಡ್ಡಿ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅತ

  ಶ್ರಾವಣಿ ನೀಡಿದ ದೂರಿನ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆರೋಪಿ ಪತಿ ಭರತ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದ್ದು, ಆರೋಪಿತ ದಂಪತಿಯನ್ನು ಬಂಧಿಸುವ ಸಾಧ್ಯತೆಯಿದೆ.

  English summary
  Sadist husband tortures wife on first wedding night in bengaluru. He married girl by hiding his first marriage.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X