ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಹೆಂಡತಿಯಿಂದ ಒತ್ತಡ, ದೂರು ನೀಡಿದ ಪತಿ

|
Google Oneindia Kannada News

ಬೆಂಗಳೂರು, 05: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ನನಗನ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಪತಿಯೋಬ್ಬ ಪತ್ನಿ ಮೇಲೆ ದೂರು ದಾಖಲಿಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ನ ಅಶೋಕಪುರಂನಲ್ಲಿ ನಡೆದಿದೆ.

ತನ್ನ ಹಾಗೂ ತನ್ನ ತಂದೆ ತಾಯಿ, ಸಹೋದರನಿಗೆ ಮತಾಂತರ ಆಗಲು ಒತ್ತಾಡ ಹೇರುತ್ತಿದ್ದಾರೆ ಎಂದು ಆರೋಪಿಸಿ 28 ವರ್ಷದ ದೀಪಕ್ ಎಂಬುವವರು ಖಾಸಗಿ ದೂರು ದಾಖಲಿಸಿದ್ದಾರೆ.

ಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮತಾಂತರಕ್ಕೆ ಒತ್ತಡ ಆರೋಪ: ವ್ಯಕ್ತಿ ಬಂಧನಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮತಾಂತರಕ್ಕೆ ಒತ್ತಡ ಆರೋಪ: ವ್ಯಕ್ತಿ ಬಂಧನ

ದೂರಿನ ಹಿನ್ನೆಲೆ ತನಿಖೆ ನಡೆಸುವಂತೆ ಸಿಟಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Husband complains of pressure from his wife to convert to Christianity

ಮಹಾಲಕ್ಷ್ಮಿ ಲೇಔಟ್‌ನ ಅಶೋಕಪುರಂನಲ್ಲಿ ವಾಸವಾಗಿರುವ ದೀಪಕ್ ಎಂಬಾತ ತನ್ನ 26 ವರ್ಷದ ಪತ್ನಿ ಸುನೀತಾ ಗ್ರೇಸಿ ಸೇರಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ದೀಪಕ್ ಮತ್ತು ಗ್ರೇಸಿ ಅವರು ಜನವರಿ 18, 2019 ರಂದು ಎಲೆಕ್ಟ್ರಾನಿಕ್ಸ್ ಸಿಟಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಇವರಿಬ್ಬರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ದೀಪಕ್ ಕೆಲಸದ ನಿಮಿತ್ತ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತಾರೆ, ಈ ಬಗ್ಗೆ ಹೆಂಡತಿಗೆ ತಿಳಿಸಿದ್ದರೂ ಕೂಡ ಆಕೆ ಪತಿಯ ಬಗ್ಗೆ ನಾಪತ್ತೆ ದೂರು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ತಾನು ಹಣ ನೀಡಿದರೂ ಕೂಡ ಹೆಂಡತಿ ಬಾಡಿಗೆ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಪತಿಯ ಹೆಸರನ್ನು ಬಳಸಿ ಸಾಲ ಪಡೆದಿರುವ ಆರೋಪವೂ ಅವರ ಮೇಲಿದೆ. ಸಾಲವನ್ನು ವಾಪಸ್ ನೀಡಿ ಎಂದುಜನ ಪೀಡಿಸಲು ಆರಂಭಿಸಿದಾಗ ತನ್ನ ಗಂಡನ ಕೆಲಸದ ಸ್ಥಳಕ್ಕೆ ಕಳುಹಿಸಿ ತೆಗೆದುಕೊಳ್ಳುವಂತೆ ಹೇಳುತ್ತಾರೆ ಎಂಬ ಆರೋಪ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಖಾಸಗಿ ದೂರಿನಲ್ಲಿ ದೀಪಕ್, ತನ್ನ ಪತ್ನಿ ತನಗೆ, ತನ್ನ ಹೆತ್ತವರಿಗೆ ಮತ್ತು ಸಹೋದರನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮತಾಂತರವಾಗದಿದ್ದರೆ ಅವರ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆಯ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಆಕೆಗೆ ಬೆಂಬಲ ನೀಡಿದ್ದಾರೆ. ತನ್ನ ಹೆಂಡತಿ ನನ್ನ ಹೆತ್ತವರ ಮನೆಗೆ ನುಗ್ಗಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

"ದಂಪತಿ ನಡುವೆ ಸೌಹಾರ್ದಯುತ ಸಂಬಂಧವಿಲ್ಲ. ಪತಿ ಕೆಲಸದ ಮೇಲೆ ಹೊರಗೆ ಹೋದಾಗಲೂ ಗ್ರೇಸಿ ಮೂರು ನಾಪತ್ತೆ ದೂರುಗಳನ್ನು ದಾಖಲಿಸಿದ್ದಾರೆ. ದೀಪಕ್ ಹೆಸರು ಬಳಸಿ ಹಲವು ಕಡೆಗಳಲ್ಲಿ ಹಣ ಸಾಲ ಪಡೆದಿರುವ ಬಗ್ಗೆ ಆತನು ಕಂಗಾಲಾಗಿದ್ದಾನೆ. ಹೀಗಾಗಿ ನಗರದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಲವಂತದ ಮತಾಂತರದ ಬಗ್ಗೆ ದೀಪಕ್ ಅವರ ಆರೋಪ ಸಾಭೀತಾದರೇ, ಅದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗುವುದು" ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳಲ್ಲಿ ಒಬ್ಬರು ತಿಳಿಸಿದ್ದಾರೆ.

(ಮಾಹಿತಿ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)

English summary
Bengaluru man complains against his wife and five others over to forcing him to convert to Christianity. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X