ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೈವೋರ್ಸ್ ಕೊಡ್ತೀನಿ ಎಂದ ಗಂಡ ಹೆಂಡ್ತಿ ಹೆಸರಲ್ಲಿ ಫೋರ್ಜರಿ ಸಾಲ ಎತ್ತಿದ !

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಪೋರ್ಜರಿ ಸಹಿ ಮಾಡಿ ಪತ್ನಿಯ ಹೆಸರಲ್ಲಿ ಭರ್ಜರಿ ಸಾಲ ಪಡೆದ ಪತಿರಾಯನೊಬ್ಬ ಇಎಂಐ ಕಟ್ಟದೇ ಮಜಾ ಉಡಾಯಿಸುತ್ತಿದ್ದ ! ಮಾಸಿಕ ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿ ನೋಟಿಸಸ್ ನೀಡುತ್ತಿದ್ದಂತೆ ಪತ್ನಿ ಹೌರಾರಿದ್ದಾಳೆ. ಆಕೆಯ ಸಹಿ ಇಲ್ಲದೇ ಆಕೆಯ ಹೆಸರಿನಲ್ಲಿ ನಕಲಿ ಸಹಿ ಮಾಡಿ ಗಂಡನೇ ಸಾಲ ಪಡೆದಿರುವ ಅಂಶ ಬೆಳಕಿಗೆ ಬಂದಿದೆ. ಇದು ಗೊತ್ತಾದ ಬಳಿಕ ಪತ್ನಿ ಮಾಡಿದ ಕೆಲಸ ನೋಡಿ ಇದೀಗ ಗಂಡನೇ ಬಾಯಿ ಬಡಿದುಕೊಳ್ಳುವಂತಾಗಿದೆ.

ಶಂಕಪುರಂ ನಿವಾಸಿ ರಾಜೀವ್ ಬನ್ಸಾಲಿ ಮತ್ತು ಸವಿತಾ ಬನ್ಸಾಲಿ ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸವಿತಾ ಬನ್ಸಾಲಿ ಖಾಸಗಿ ಕಂಪನಿಯಲ್ಲಿಕೆಲಸ ಮಾಡುತ್ತಿದ್ದಾರೆ. ಪತಿ ರಾಜೀವ್ ಬನ್ಸಾಲಿ ನಾನು ಬಟ್ಟೆ ವ್ಯಾಪಾರ ಮಾಡುವುದಾಗಿ ನಂಬಿಸಿ ಸಾಲ ಪಡೆದು ಮೋಸ ಮಾಡಿದ್ದಾನೆ. ಕೆಲ ವರ್ಷಗಳ ಹಿಂದೆ ಬಟ್ಟೆ ವ್ಯಾಪಾರ ಮಾಡಲಿಕ್ಕೆ ಎಂದು ಹೇಳಿ ಪತ್ನಿಯ ಹೆಸರಿನಲ್ಲಿ ನಾಲ್ಕು ಲಕ್ಷ ಸಾಲ ಪಡೆದಿದ್ದ. ಸಾಲವನ್ನು ಪತ್ನಿಯೇ ಕೊಡಿಸಿ ಮಾಸಿಕ ಕಂತನ್ನೂ ಕಟ್ಟುತ್ತಿದ್ದರು. ಆದರೆ ಯಾವ ಬಟ್ಟೆ ವ್ಯಾಪಾರವನ್ನೂ ಮಾಡಿಲ್ಲ. ಸಾಲದ ಹಣದಲ್ಲಿ ಕುಡಿದು ಮಜಾ ಉಡಾಯಿಸಿದ್ದ. 2014 ರಲ್ಲಿ ನಾಲ್ಕು ಲಕ್ಷ ಸಾಲ ಕೊಡಿಸಿದ್ದ ಪತ್ನಿ ಐದು ವರ್ಷ ಮಾಸಿಕ ಕಂತು ಪಾವತಿಸಿದ್ದರು. ಮತ್ತೆ 2017 ರ ಲ್ಲಿ ಸಾಲ ಕೊಡಿಸುವಂತೆ ಪೀಡಿಸಿದ್ದ.

ಇಬ್ಬರ ನಡುವೆ ಪರಸ್ಪರ ಜಗಳ ನಡೆದಿತ್ತು. ಕುಡಿದು ಬರುತ್ತಿದ್ದ ಗಂಡನಿಂದ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದ ಪತ್ನಿ ಮಹಿಳಾ ಪೊಲೀಸ್ ಠಾಣೆ ಮೊರೆ ಹೋಗಿದ್ದಳು. 2017 ರಲ್ಲಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಮೋಗಿದ್ದರು. ಇಬ್ಬರು ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆಯಲು ಸಲಹೆ ಮಾಡಲಾಗಿತ್ತು. ಇದಕ್ಕೆ ಒಪ್ಪಿದ್ದ ಗಂಡ ರಾಜೀವ್ ಬನ್ಸಾಲಿ ಮತ್ತೆ ಪತ್ನಿಯ ಮನೆಗೆ ಹೋಗಿಲ್ಲ. ಪತ್ನಿ ಹಾಗೂ ಇಬ್ಬರು ಮಕ್ಕಳು ಪ್ರತ್ಯೇಕವಾಗಿದ್ದರು. ಹಾಗಂತ ಗಂಡ ಸುಮ್ಮನೆ ಬಿಟ್ಟಿಲ್ಲ.

Bengaluru : Husband Cheats Wife by Creating Fake Documents

ಬಸವನುಗಡಿ ಡಿವಿಜಿ ರಸ್ತೆಯಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ. ಸಾಲವನ್ನು ಪತ್ನಿ ಸವಿತಾ ಹೆಸರಿನಲ್ಲಿ ಆಕೆಯ ಹೆಸರಿನಲ್ಲಿರುವ ಮನೆಯ ಮೇಲೆ ಸಾಲ ಪಡೆದಿದ್ದಾರೆ. ಪತ್ನಿಯ ನಕಲಿ ಸಹಿ ಮಾಡಿ ಎತ್ತಿದ ಸಾಲವನ್ನು ಮಜಾ ಉಡಾಯಿಸಿದ್ದಾನೆ. ಇಎಂಐ ಕಟ್ಟದ ಕಾರಣಕ್ಕೆ ಫೈನಾನ್ಸ್ ಕಂಪನಿಯವರು ರಾಜೀವ್ ಪತ್ನಿಗೆ ನೋಟಿಸ್ ನೀಡಿದ್ದಾರೆ. ಯಾವುದೇ ದಾಖಲೆ ಗಳನ್ನು ನೀಡದೇ ಸಾಲ ಕೊಟ್ಟ ಬಗ್ಗೆ ಪತ್ನಿ ಪರಿಶೀಲಿಸಿದಾಗ ಗಂಡ ಫೋರ್ಜರಿ ಸಹಿ ಮಾಡಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಬೇಸತ್ತ ಪತ್ನಿ ಸವಿತಾ, ಗಂಡ ರಾಜೀವ್ ವಿವಿಧ ಕಂಪನಿಗಳಲ್ಲಿ ಮಾಡಿರುವ ಸಾಲದ ವಿವರಗಳನ್ನು ಸೇರಿಸಿ ಶಂಕರಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.

Bengaluru : Husband Cheats Wife by Creating Fake Documents

Recommended Video

Union budget 2021 | Budget ಮಂಡಿಸಿದ ಮೊದಲ ಮಹಿಳೆ ಯಾರು ಗೊತ್ತಾ? | Oneindia Kannada

ಕಂಪನಿಗೂ ಕಷ್ಟ : ತನ್ನ ಗಂಡ ಪೋರ್ಜರಿ ಸಹಿ ಮಾಡಿ ತನ್ನ ಹೆಸರಿನಲ್ಲಿ ಸಾಲ ಪಡೆದಿರುವ ಬಗ್ಗೆ ಗಂಡನ ವಿರುದ್ಧ 420 ದೂರು ದಾಖಲಿಸಿದ್ದಾರೆ. ಇದು ಫೈನಾನ್ಸ್ ಕಂಪನಿಗೂ ತೊಡಕಾಗಲಿದೆ. ಯಾಕೆಂದರೆ ಪತ್ನಿ ಹೆಸರಿನಲ್ಲಿ ಪತಿ ಸಾಲ ಕೇಳಿದಾಗ, ಸಹಿ ಮತ್ತು ದಾಖಲೆಗಳ ಬಗ್ಗೆ ಫೈನಾನ್ಸ್ ಕಂಪನಿ ಖಾತ್ರಿ ಪಡಿಸಿಕೊಳ್ಳಬೇಕಿತ್ತು. ಹೀಗಾಗಿ ಕಂಪನಿಗೂ ತೊಂದರೆಯಾಗಲಿದೆ. ವಿಚ್ಛೇಧನ ಕೊಡ್ತೀನಿ ಎಂದ ಗಂಡ ಪತ್ನಿ ಹೆಸರಿನಲ್ಲಿ ಸಾಲ ಮಾಡಿ ಮಜಾ ಉಡಾಯಿಸಿ ಇದೀಗ ಜೈಲು ಸೇರಬೇಕಾದ ಸಂಕಷ್ಟ ಎದುರಾಗಿದೆ.

English summary
Bengaluru : woman has filed a police complaint against her husband for allegedly creating false documents in the name of his wife and get loan from finance company. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X