ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಕ್ಕಿ ಆಯ್ತು, ಬಾಣಸವಾಡಿ ಕೆರೆ ಒತ್ತುವರಿ ತೆರವು

|
Google Oneindia Kannada News

ಬೆಂಗಳೂರು, ಮೇ. 2: ಅಕ್ರಮ ಕೆರೆ ಒತ್ತುವರಿ ವಿರುದ್ಧದ ಜಿಲ್ಲಾಡಳಿತದ ಕಾರ್ಯಾಚರಣೆ ಬಾಣಸವಾಡಿಯಲ್ಲಿ ಮುಂದುವರಿದಿದೆ. ಎಚ್. ಎಸ್.ಆರ್.ಬಡಾವಣೆಯಲ್ಲಿ 70ಕ್ಕು ಹೆಚ್ಚು ವಾಣಿಜ್ಯ ಕಟ್ಟಡಗಳನ್ನು ಶನಿವಾರ ನೆಲಸಮ ಮಾಡಿದ್ದು, ಸುಮಾರು 2 ಎಕರೆ ಪ್ರದೇಶವನ್ನು ತನ್ನ ಸುಪರ್ದಿಗೆ ಪಡೆದಿದೆ.

ತಹಸೀಲ್ದಾರ್ ಹರೀಶ್‌ನಾಯಕ್ ಅವರ ನೇತೃತ್ವದಲ್ಲಿ ಇಂದು 300ಕ್ಕೂ ಹೆಚ್ಚು ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. 42.38 ಎಕರೆ ಪ್ರದೇಶದಲ್ಲಿರುವ ಕೆರೆಯ ಕಾಲು ಭಾಗ ಒತ್ತುವರಿಯಾದ ದಾಖಲೆಗಳು ಜಿಲ್ಲಾಡಳಿತದ ಬಳಿ ಇದೆ.[ಡಿಸಿ ಶಂಕರ್ ದಿಟ್ಟ ನಡೆ: ಸಾರಕ್ಕಿ ಕೆರೆ ತೆರವು]

lake

ಮೊದಲೇ ಸರ್ವೇ ನಡೆಸಿ ತೆರವು ಮಾಡುವಂತೆ ಆಡಳಿತ ನೋಟಿಸ್ ನೀಡಿತ್ತು. ಆದರೆ ಪುನಃ ಸರ್ವೇ ನಡೆಸುವಂತೆ ಒತ್ತುವರಿದಾರರು ಕೇಳಿಕೊಂಡಿದ್ದರು. ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಶನಿವಾರ ತೆರವು ಮಾಡಲಾಗಿದೆ. ಒತ್ತುವರಿ ಪರಿಣಾಮ ರಿಂಗ್ ರಸ್ತೆಯಲ್ಲಿ ಸಂಚಾರ ಸಮಸ್ಯೆ ಉಂಟಾಗಿತ್ತು.

ಪ್ರದೇಶದಲ್ಲಿರುವ ಸುಮಾರು 200 ಮನೆಗಳಿಗೆ ತೆರವು ಮಾಡಲು ತಿಳಿಸಲಾಗಿದ್ದು ಎರಡು ದಿನ ಕಾಲಾವಕಾಶ ನೀಡಲಾಗಿದೆ. ಎಂದು ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ.

700 ಎಕರೆ ಅರಣ್ಯ ಭೂಮಿ ವಶ
ಕಾಡುಗೋಡಿಯಲ್ಲಿ ಒತ್ತುವರಿಯಾಗಿದ್ದ 771 ಎಕರೆ ಜಮೀನಿನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆ ಸುಪರ್ದಿಗೆ ನೀಡಲು ಆಡಳಿತ ಮುಂದಾಗಿದೆ. ಇಲ್ಲಿ ಕೆಲ ದಲಿತರ ಮನೆಗಳಿದ್ದು ಅದನ್ನು ಸದ್ಯಕ್ಕೆ ತೆರವು ಮಾಡುವುದಿಲ್ಲ ಎಂದು ಆಡಳಿತ ಸ್ಪಷ್ಟನೆ ನೀಡಿದೆ. ಕೆಐಡಿಬಿ ಸೇರಿದಂತೆ ಅನೇಕರು ಇಲ್ಲಿ ಒತ್ತುವರಿ ನಡೆಸಿದ್ದು ತೆರವು ಮಾಡಲಾಗುವುದು. ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಉಪವಿಭಾಗಾಧಿಕಾರಿ ಮಹೇಶ್ ಬಾಬು, ಜಾಗೃತದಳದ ಸಹಾಯಕ ಆಯುಕ್ತ ನಾಗರಾಜ್‌ರೆಡ್ಡಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

English summary
Hundreds of commercial complexes, petrol pump and multi-storeyed buildings were demolished in Banaswadi on Saturday, as part of an anti-encroachment drive by Revenue officials at the lake bed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X