ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಳಿಮಾವು ಕೆರೆ ಕಟ್ಟೆ ಒಡೆದು, ಲೇಔಟಿಗೆ ನೀರು, ಆತಂಕದಲ್ಲಿ ಜನತೆ

|
Google Oneindia Kannada News

Recommended Video

Hulimavu lake's Bund is wrecked the water burst into the layouts | Oneindia Kannada

ಬೆಂಗಳೂರು, ನವೆಂಬರ್ 24: ಬೆಂಗಳೂರಿನ ಹಳೆ ಬಡಾವಣೆಗಳಲ್ಲಿ ಒಂದಾಗಿರುವ ಹುಳಿಮಾವು ಪ್ರದೇಶದಲ್ಲಿರುವ ಕೆರೆಯ ಏರಿ ಒಡೆದು, ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮಳೆ ಇಲ್ಲ, ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಮನೆಗೆ ನೀರು ನುಗ್ಗಿದ್ದರಿಂದ ಲೇ ಔಟಿನ ಜನರು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ತಕ್ಷಣವೇ ನೆರವು ನೀಡುವಂತೆ ಬಿಬಿಎಂಪಿ ಅಧಿಕಾರಿಗಳನ್ನು ಕೋರಿದ್ದಾರೆ.

Hulimavu lake’s bund is broken and Water enteres into the layouts

ಇತ್ತೀಚಿನ ಅಪ್ಡೇಡ್: ಬಿಬಿಎಂಪಿ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಕಾರ್ಯ ಒದಗಿಸಿದ್ದು, ಸಂತ್ರಸ್ತ್ರರನ್ನು ಸುರಕ್ಷಿತ ಸ್ಥಳಕ್ಕೆ ಎನ್ಡಿ ಆರ್ ಎಫ್ ತಂಡ ಕರೆದೊಯ್ದಿದ್ದಾರೆ. ಸಾಯಿಬಾಬಾ ಆಶ್ರಮ ಚೌಲ್ಟ್ರಿ, ಶಾಲೆಗಳಲ್ಲಿ ವಸತಿ ಸೌಲಭ್ಯ, ಊಟ ಒದಗಿಸಲಾಗಿದೆ.

"ಕೆರೆ ನೀರನ್ನು ಸಂಸ್ಕರಿಸಿ ಪುನರ್ ಬಳಕೆಗೆ ತರುವ ಯೋಜನೆಯ ಅಂಗವಾಗಿ ಇಂದು ಕೆರೆ ಏರಿ ಬಳಿ ಜೆಸಿಬಿಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಈ ಸಂದರ್ಭದಲ್ಲಿ ನಡೆದ ಪ್ರಮಾದದಿಂದಾಗಿ ಕೆರೆ ಕಟ್ಟೆ ಒಡೆದಿದೆ.


ದೊಡ್ಡ ಬಿಲ್ಡಿಂಗ್ ಗಳಿಗೆ ತೊಂದರೆ ಇಲ್ಲ, ಸಣ್ಣಪುಟ್ಟ ಮನೆಗಳಿಗೆ ನೀರು ನುಗ್ಗಿ ತುಂಬಾ ತೊಂದರೆಯಾಗಿದೆ. ಸುಮಾರು ಒಂದು ಕಿ. ಮೀ ನೀರು ನಿಂತಿದೆ. ಸದ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ" ಎಂದು ಸ್ಥಳೀಯರಾದ ಸುರೇಶ್ ಅವರು ಒನ್ಇಂಡಿಯಾ ಪ್ರತಿನಿಧಿ ಜೊತೆಗೆ ನೋವು ತೋಡಿಕೊಂಡರು.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಹಾನಿಗೊಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕೆರೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಪೂರ್ಣಗೊಳ್ಳುವುದು ನೋಡಿಕೊಂಡಿದ್ದಾರೆ.


ಇನ್ನೊಂದೆಡೆ, ಸ್ಥಳೀಯ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಅವರು ಬಿಬಿಎಂಪಿ ಅಧಿಕಾರಿಗಳು, ಎನ್ ಡಿ ಆರ್ ಎಫ್ ತಂಡದೊಡನೆ ನಾಗರಿಕರ ಸುರಕ್ಷತೆ ಬಗ್ಗೆ ಗಮನ ಹರಿಸಿದ್ದಾರೆ.

ಹುಳಿಮಾವು ಕೆರೆ ಏರಿ ಒಡೆದಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೊ, ವಿಡಿಯೋಗಳು ಓಡಾಡುತ್ತಿವೆ.

ಬಿಬಿಎಂಪಿ, ಜಲ ಮಂಡಳಿ, ಸ್ಥಳೀಯ ಕಾರ್ಪೊರೇಟರ್, ಸಂಸದ, ಶಾಸಕ ಹೀಗೆ ಎಲ್ಲರಿಗೂ ಟ್ಯಾಗ್ ಮಾಡಿ ನೆರವು ಕೋರುತ್ತಿದ್ದಾರೆ.

ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡವರು ನೀರಿನಲ್ಲಿ ಏನೇನು ಕೊಚ್ಚಿ ಹೋಯಿತು ಎಂಬ ಲೆಕ್ಕ ಹಾಕತೊಡಗಿದ್ದಾರೆ.

ಅಪಾರ್ಟ್ಮೆಂಟ್ ನಿವಾಸಿಗಳು ರಸ್ತೆಗಿಳಿದು ಮುಂದೇನು ಎಂದು ಚಿಂತೆಯಲ್ಲಿ ತೊಡಗಿದ್ದಾರೆ. ಅಕ್ಷಯನಗರ, ಮೀನಾಕ್ಷಿ ದೇಗುಲ ತನಕ ನೀರು ಹರಿದಿದೆ.

English summary
Hulimavu lake's Bund is broken the water has entered into the layouts. near by four, five layouts have been flooded and had entered into everybody's houses. Public seeks for help from BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X