ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಡೆದ ಹುಳಿಮಾವು ಕೆರೆ; ಸಮಿತಿ ರಚನೆ ಮಾಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ಹುಳಿಮಾವು ಕೆರೆ ಒಡೆದು ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಘಟನೆಗೆ ಕಾರಣ ಏನು? ಎಂದು ವರದಿ ನೀಡಲು ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ನವೆಂಬರ್ 24ರಂದು ಕೆರೆ ಒಡೆದು ಬಡಾವಣೆಗಳಿಗೆ ನೀರು ನುಗ್ಗಿತ್ತು.

ಬೆಂಗಳೂರು ನಗರಾಭಿವೃದ್ಧಿ ಸಚಿವ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆಯಂತೆ ಕರ್ನಾಟಕ ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ. ಮೂವರು ಸದಸ್ಯರ ಸಮಿತಿ 10 ದಿನದಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಿದೆ.

ಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆ

ನವೆಂಬರ್ 24ರ ಭಾನುವಾರ ಹುಳಿಮಾವು ಕೆರೆ ಒಡೆದಿತ್ತು. ವಿವಿಧ ಬಡಾವಣೆಗಳಿಗೆ ಕೆರೆಯ ಕೊಳಚೆ ನೀರು ನುಗ್ಗಿತ್ತು. 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಕೆರೆ ಒಡೆದಿದ್ದು ಯಾರು? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಡೆದ ಹುಳಿಮಾವು ಕೆರೆ ದಂಡೆ; ಯಡಿಯೂರಪ್ಪ ಭೇಟಿ ಒಡೆದ ಹುಳಿಮಾವು ಕೆರೆ ದಂಡೆ; ಯಡಿಯೂರಪ್ಪ ಭೇಟಿ

ಉಪ ಚುನಾವಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಸರ್ಕಾರ ಈಗ ಕೆರೆ ಒಡೆದ ಕಾರಣ ತಿಳಿದುಕೊಳ್ಳಲು ಸಮಿತಿಯನ್ನು ರಚನೆ ಮಾಡಿದೆ. ಯಡಿಯೂರಪ್ಪ ಸಹ ಕೆರೆ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಒಡೆದ ಹುಳಿಮಾವು ಕೆರೆ ದಂಡೆ; ಹಾವು ಹಿಡಿಯಲು ಕರೆ ಒಡೆದ ಹುಳಿಮಾವು ಕೆರೆ ದಂಡೆ; ಹಾವು ಹಿಡಿಯಲು ಕರೆ

ಮೂವರು ಸದಸ್ಯರ ಸಮಿತಿ

ಮೂವರು ಸದಸ್ಯರ ಸಮಿತಿ

ಹುಳಿಮಾವು ಕೆರೆ ಒಡೆದ ದುರಂತದ ಬಗ್ಗೆ ವರದಿ ನೀಡಲು ಸರ್ಕಾರ ಮೂವರು ಸದಸ್ಯರ ಸಮಿತಿ ರಚನೆ ಮಾಡಿದೆ. ಐಐಎಸ್‌ಸಿ ನಿವೃತ್ತ ಪ್ರಾಧ್ಯಾಪಕ ಬಿ. ಆರ್. ಶ್ರೀನಿವಾಸಮೂರ್ತಿ, ಶಾಂತರಾಜಣ್ಣ ಮತ್ತು ನಿವೃತ್ತ ಇಂಜಿನಿಯರ್ ಎಂ. ಎಲ್.ಮಾದಯ್ಯ ಸಮಿತಿಯಲ್ಲಿದ್ದಾರೆ.

ಯಡಿಯೂರಪ್ಪ ಭೇಟಿ ನೀಡಿದ್ದರು

ಯಡಿಯೂರಪ್ಪ ಭೇಟಿ ನೀಡಿದ್ದರು

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹುಳಿಮಾವು ಕೆರೆ ಒಡೆದು ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದುರಂತದಿಂದ ಮನೆ ಕಳೆದುಕೊಂಡ 319 ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ರೂ. 50,000 ಪರಿಹಾರ ಧನವನ್ನು ತಕ್ಷಣ ಜಮೆ ಮಾಡಲು ಸೂಚಿಸಿದ್ದರು.

ಹೈಕೋರ್ಟ್ ತರಾಟೆ

ಹೈಕೋರ್ಟ್ ತರಾಟೆ

ಹುಳಿಮಾವು ಕೆರೆ ಒಡೆದ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಬಿಬಿಎಂಪಿ, ಬಿಡಿಎಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವರದಿ ನೀಡುವಂತೆ ಬಿಬಿಎಂಪಿಗೆ ಸೂಚಿಸಿದ್ದರು.

ಬಡಾವಣೆಗಳು ಜಲಾವೃತ

ಬಡಾವಣೆಗಳು ಜಲಾವೃತ

ನವೆಂಬರ್ 24ರಂದು ಹುಳಿಮಾವು ಕೆರೆಯ ದಕ್ಷಿಣ ಭಾಗ ಒಡೆದ ಪರಿಣಾಮ ಕೃಷ್ಣ ಬಡಾವಣೆ, ಅವನಿ ಶೃಂಗೇರಿ ನಗರ ಬಡಾವಣೆ, ಆರ್. ಆರ್. ಬಡಾವಣೆ, ನ್ಯಾನಪ್ಪನಹಳ್ಳಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.

English summary
Karnataka government has formed a committee to submit report on Bengaluru Hulimavu lake breach. Three members committee will submit report in 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X